Annayya Serial: ಪಾರು ಗೊಂದಲಕ್ಕೆ ಪರಿಹಾರ ಸೂಚಿಸಿದ ಭೂಮಿಕಾ; ಶಿವು ಬಾಳಲ್ಲಿ ಇನ್ಮುಂದೆ ಅಮೃತಧಾರೆ
Annayya Serial: ‘ಅಣ್ಣಯ್ಯ’ ಧಾರಾವಾಹಿಯಲ್ಲಿ ‘ಅಮೃತಧಾರೆ’ ಧಾರಾವಾಹಿಯ ಭೂಮಿಕಾ ಕಾಣಿಸಿಕೊಂಡಿದ್ದಾರೆ. ಪಾರು ತನ್ನ ನೋವನ್ನು ಭೂಮಿಕಾ ಬಳಿ ಹಂಚಿಕೊಳ್ಳುತ್ತಿದ್ದಾಳೆ.

ಅಣ್ಣಯ್ಯ ಧಾರಾವಾಹಿಯ ಈ ಸಂಚಿಕೆ ನೋಡಿದರೆ, ಅಮೃತಧಾರೆ ಹಾಗೂ ಅಣ್ಣಯ್ಯ ಎರಡೂ ಧಾರಾವಾಹಿಗಳನ್ನು ಒಂದೇ ಬಾರಿ ನೋಡುತ್ತಿದ್ದೇನೆ ಎಂದು ನಿಮಗನಿಸಬಹುದು. ಹೌದು, ಭೂಮಿಕಾ ಹಾಗೂ ಪಾರು ಇಬ್ಬರೂ ಒಟ್ಟಾಗಿ ಒಂದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಣ್ಣಯ್ಯನ ಪ್ರೀತಿ ಬಗ್ಗೆ ಗೊಂದಲ ಹೊಂದಿರುವ ಪಾರು, ತಾನು ಸರಿ ನಿರ್ಧಾರ ತೆಗೆದುಕೊಂಡಿದ್ದೇನೋ? ಅಥವಾ ತಪ್ಪೋ? ಎಂದು ಅರ್ಥ ಆಗದೇ ಇನ್ನೊಬ್ಬರ ಸಲಹೆ ಕೇಳುತ್ತಿದ್ದಾಳೆ. ಪಾರುಗೆ ಭೂಮಿಕಾ ಸಹಾಯ ಮಾಡುತ್ತಿದ್ದಾಳೆ.
ಪಾರುಗೆ ಸಾಂತ್ವನ ಹೇಳಿದ ಭೂಮಿಕಾ
ಪಾರು ತನ್ನ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ವಿಸ್ತಾರವಾಗಿ ಭೂಮಿಕಾ ಹತ್ತಿರ ಹೇಳಿಕೊಂಡಿದ್ಧಾಳೆ. ಮಾನಸಿಕವಾಗಿ ತುಂಬಾ ನೊಂದಿದ್ದಾಳೆ. ಅವಳಿಗೆ ಸಾಂತ್ವನ ಹೇಳಬೇಕಾದ ಪರಿಸ್ಥಿತಿ ಈಗ ಭೂಮಿಕಾ ಮುಂದಿದೆ. ಅದೆಲ್ಲವನ್ನೂ ಅರ್ಥ ಮಾಡಿಕೊಂಡು ಭೂಮಿಕಾ, ತುಂಬಾ ಚೆನ್ನಾಗಿ ಅವಳ ಬದುಕನ್ನು ವಿವರಿಸುತ್ತಾಳೆ. ಪಾರುಗೆ ಸಮಾಧಾನ ಮಾಡುತ್ತಾಳೆ. "ಎಲ್ಲ ನೀನು ಅಂದುಕೊಂಡಂತೆ ಇಲ್ಲ. ನಿನ್ನ ಮಾವ ತುಂಬಾ ಒಳ್ಳೆಯವನು. ಅವನು ನಿನಗೆ ಯಾವಾಗಲೂ ಒಳ್ಳೆಯದನ್ನೇ ಬಯಸಿದ್ದಾನೆ" ಎಂದು ಅರ್ಥ ಮಾಡಿಸುತ್ತಾಳೆ.
ಶಿವು ಜೀವನದಲ್ಲಿ ಅಮೃತಧಾರೆ
ಭೂಮಿಕಾ ಶಿವು ಬಗ್ಗೆ ಕೇಳಿ ತಿಳಿದುಕೊಂಡಿರುವುದಷ್ಟೇ ಆದರೂ, ಅವಳು ಶಿವುವನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಅವನ ಗುಣ, ಸ್ವಾಭಾವದ ಬಗ್ಗೆ ಅವಳೇ ಹೇಳುತ್ತಿದ್ದಾಳೆ. “ನೀನು ಈಗ ಹೋಗಿ ನಿನ್ನ ಪ್ರೀತಿ ತೋಡಿಕೊಂಡರೆ ಏನೂ ಸಮಸ್ಯೆ ಇಲ್ಲ. ನಿನ್ನ ಶಿವು ಮಾವ ನಿನ್ನನ್ನು ಈಗಲೂ ಮನಸಿನಿಂದಲೇ ಸ್ವೀಕರಿಸುತ್ತಾನೆ. ನಿನ್ನ ಸ್ವಭಾವ ಅವನಿಗೆ ನೀನು ಚಿಕ್ಕವಳಿದ್ದಾಗಿನಿಂದಲೇ ಒಪ್ಪಿಗೆಯಾಗಿದೆ. ನೀನು ಯಾವ ಆಲೋಚನೆಯನ್ನೂ ಮಾಡಬೇಡ. ಶಿವು ಬಾಳಲ್ಲಿ ಅಮೃತಧಾರೆ ಹರಿಸು” ಎಂದ ಭೂಮಿಕಾ ಹೇಳುತ್ತಾಳೆ.
“ಆದರೆ ನಾನು ಈ ಹಿಂದೆ ಬೇರೆಯವರನ್ನು ಪ್ರೀತಿಸಿದ್ದೆ. ಈಗ ಆ ಪ್ರೀತಿ ಕೈತಪ್ಪಿ ಹೋದ ಕಾರಣ ಶಿವು ಮಾವನನ್ನು ಪ್ರೀತಿ ಮಾಡ್ತಾ ಇದ್ದೀನಿ ಎಂದು ಅವರು ಅಂದುಕೊಳ್ಳೊದಿಲ್ವಾ?” ಎಂದು ಪಾರು ಪ್ರಶ್ನೆ ಮಾಡುತ್ತಾಳೆ. ಇಲ್ಲ ಎಂದು ಭೂಮಿಕಾ ಹೇಳುತ್ತಾಳೆ, ಪ್ರೀತಿ ಮಾಡೋದಲ್ಲ.. ಪ್ರೀತಿ ಆಗೋದು ಎಂದು ಹೇಳುತ್ತಾಳೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
