Annayya Serial: ಕಾಯಿ ತುರಿದ ಜಿಮ್‌ ಸೀನ; ಮಗನಿಗೆ ಜವಾಬ್ದಾರಿ ಬಂತು ಎಂದು ಇಷ್ಟಕ್ಕೇ ದೇವರಿಗೆ ತುಪ್ಪದ ದೀಪ ಹಚ್ಚಿದ ಲೀಲಾ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಕಾಯಿ ತುರಿದ ಜಿಮ್‌ ಸೀನ; ಮಗನಿಗೆ ಜವಾಬ್ದಾರಿ ಬಂತು ಎಂದು ಇಷ್ಟಕ್ಕೇ ದೇವರಿಗೆ ತುಪ್ಪದ ದೀಪ ಹಚ್ಚಿದ ಲೀಲಾ

Annayya Serial: ಕಾಯಿ ತುರಿದ ಜಿಮ್‌ ಸೀನ; ಮಗನಿಗೆ ಜವಾಬ್ದಾರಿ ಬಂತು ಎಂದು ಇಷ್ಟಕ್ಕೇ ದೇವರಿಗೆ ತುಪ್ಪದ ದೀಪ ಹಚ್ಚಿದ ಲೀಲಾ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್ ಸೀನ ತನ್ನ ಮದುವೆ ವಿಚಾರವಾಗಿ ಮಾತಾಡಬೇಕು ಎಂದುಕೊಂಡು ಅವನ ಅಮ್ಮ ಲೀಲಾ ಹತ್ತಿರ ಬಂದಿರುತ್ತಾನೆ. ಆದರೆ ಆಗ ಅಲ್ಲಿ ಆಗಿದ್ದೇ ಬೇರೆ. ವೀಕ್ಷಕರಂತು ಈ ಸನ್ನಿವೇಶ ನೋಡಿ ನಕ್ಕಿದ್ದಾರೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (Zee Kannada)

ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್ ಸೀನ ಮತ್ತು ರಶ್ಮಿ ಒಟ್ಟಿಗೆ ಬಂದರೆ ಎಲ್ಲರಿಗೂ ಒಂದು ರೀತಿಯ ಖುಷಿ ಯಾಕೆಂದರೆ ಅವರಿಬ್ಬರ ನಡುವಿನ ಸಂಭಾಷಣೆ ತುಂಬಾ ಚೆನ್ನಾಗಿರುತ್ತದೆ. ಅವರಿಬ್ಬರ ಮಾತನ್ನು ಕೇಳಲು ಅವರ ಹುಸಿ ಮುನಿಸು ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಜಿಮ್ ಸೀನ ಹಾಗೂ ಅವನ ತಾಯಿ ಪಾತ್ರ ಕಂಡರೂ ವೀಕ್ಷಕರಿಗೆ ಅಷ್ಟೇ ಸಂತೋಷವಾಗುತ್ತದೆ. ಜಿಮ್ ಸೀನ ತನ್ನ ತಾಯಿ ಲೀಲಾ ಹತ್ತಿರ ಮದುವೆ ವಿಚಾರ ಮಾತಾಡಬೇಕು ಎಂದು ಬಂದಿರುತ್ತಾನೆ. ಆದರೆ ಹೇಗೆ ಅವಳನ್ನು ಪುಸಲಾಯಿಸುವುದು ಎಂದು ತಿಳಿಯದೇ ಅವಳನ್ನು ಹೊಗಳಲು ಆರಂಭಿಸುತ್ತಾನೆ.

ತಾಯಿ ಅಂದ್ರೆ ಹಾಗೇ, ಹೀಗೆ ಎಂದು ಸಾಕಷ್ಟು ವಿಚಾರ ಮಾತಾಡುತ್ತಾನೆ. ಆದರೆ ಅವಳಿಗೆ ಸೀನ ಯಾಕೆ ಹೀಗೆಲ್ಲ ಮಾತಾಡ್ತಾ ಇದ್ದಾನೆ ಎಂದು ಅರ್ಥ ಆಗೋದಿಲ್ಲ. ತನ್ನಿಂದ ಇವನಿಗೆ ಯಾವುದೋ ಕೆಲಸ ಆಗಬೇಕಿದೆ ಎಂದು ಕೂಡ ಅವಳು ಅಂದುಕೊಳ್ಳೋದಿಲ್ಲ. ನಂತರ ಅವನು ಲೀಲಾ ಪಕ್ಕದಲ್ಲೇ ಕುಳಿತುಕೊಂಡು “ ಅಮ್ಮ ನೀನು ನಮಗಾಗಿ ದಿನಾ ಎಷ್ಟೆಲ್ಲ ಕಷ್ಟಪಡ್ತೀಯ, ಕೊಡು ನಾನು ಕಾಯಿ ತುರಿತೀನಿ” ಎಂದು ಹೇಳುತ್ತಾನೆ. ಅವನ ಮಾತನ್ನು ಕೇಳಿ ಒಂದು ಕ್ಷಣ ಅವಳಿಗೆ ತಾನು ಏನು ಮಾಡಬೇಕು ಎಂದೇ ಅರ್ಥ ಆಗೋದಿಲ್ಲ. ಅವಳು ಮಂಕಾಗಿ ಕುಳಿತುಕೊಳ್ಳುತ್ತಾಳೆ. ಯಾಕೆಂದರೆ ಅವನು ಎಂದಿಗೂ ಮನೆಯ ಒಂದು ಕೆಲಸವನ್ನೂ ಮಾಡಿರೋದಿಲ್ಲ.

ಸೀನನ ಉದ್ದೇಶ ಫಲಿಸಿಲ್ಲ

ಅದಾದ ನಂತರ ಅವನು ಕಾಯಿ ತುರಿಯಲು ಆರಂಭಿಸುತ್ತಾನೆ. ಅದನ್ನು ನೋಡಿ ಅವಳಿಗೆ ಆಶ್ವರ್ಯ ಆಗಿ ಎಲ್ಲರನ್ನೂ ಒಟ್ಟಿಗೆ ಕರೆಯುತ್ತಾಳೆ. ಮನೆಯ ಎಲ್ಲರೂ ಅಲ್ಲಿಗೆ ಬರುತ್ತಾರೆ. “ಮಗನಿಗೆ ಜವಾಬ್ದಾರಿ ಬಂದಿದೆ, ಇಲ್ನೋಡಿ” ಎಂದು ಗಂಡನ ಬಳಿ ಹೇಳುತ್ತಾಳೆ. ಅದನ್ನು ನೋಡಿ ಸೀನನ ಅಪ್ಪನಿಗೂ ಆಶ್ಚರ್ಯ ಆಗುತ್ತದೆ. ಆದರೆ ಸೀನನ ಉದ್ದೇಶ ಮಾತ್ರ ಫಲಿಸುವುದಿಲ್ಲ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner