Annayya Serial: ಕಾವೇರಿ ಅಜ್ಜಿಯ ಹುಟ್ಟುಹಬ್ಬ; ಶಿವು, ಪಾರು ಜೋಡಿ ನೋಡಿ ಅಜ್ಜಿ ಹೇಳಿದ್ದೇನು ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಕಾವೇರಿ ಅಜ್ಜಿಯ ಹುಟ್ಟುಹಬ್ಬ; ಶಿವು, ಪಾರು ಜೋಡಿ ನೋಡಿ ಅಜ್ಜಿ ಹೇಳಿದ್ದೇನು ನೋಡಿ

Annayya Serial: ಕಾವೇರಿ ಅಜ್ಜಿಯ ಹುಟ್ಟುಹಬ್ಬ; ಶಿವು, ಪಾರು ಜೋಡಿ ನೋಡಿ ಅಜ್ಜಿ ಹೇಳಿದ್ದೇನು ನೋಡಿ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಕಾವೇರಿ ಅಜ್ಜಿ ಶಿವು ಮನೆಗೆ ಬಂದಿದ್ದಾಳೆ. ಬಂದು ಶಿವು ಹಾಗೂ ಪಾರು ಮದುವೆ ವಿಚಾರವಾಗಿ ಮಾತಾಡುತ್ತಾಳೆ. ಆದರೆ ಕಾವೇರಿ ಅಜ್ಜಿಯ ಮಾತಿನಲ್ಲಿ ಯಾವುದೋ ಗುಟ್ಟು ಅಡಗಿದಂತಿದೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (ಜೀ ಕನ್ನಡ)

ಕಾವೇರಿ ಅಜ್ಜಿ ಶಿವು ಮನೆಗೆ ಬಂದಿದ್ದಾಳೆ. ಶಿವು ಹೆಸರಿನಲ್ಲಿ ದೇವರಿಗೆ ಅರ್ಚನೆ ಮಾಡಿಸಿಕೊಂಡು ಬಂದಿದ್ದಾಳೆ.ಆದರೆ ಯಾಕೆ ಅವಳು ಶಿವು ಹೆಸರಲ್ಲಿ ಅರ್ಚನೆ ಮಾಡಿಸಿಕೊಂಡು ಬಂದಿದ್ದಾಳೆ ಎಂದು ಯಾರಿಗೂ ಅರ್ಥ ಆಗುತ್ತಿಲ್ಲ. ಹೀಗಿರುವಾಗ ಅವಳೇ ಮಾತಾಡುತ್ತಾ ಆ ಬಗ್ಗೆ ಹೇಳುತ್ತಾಳೆ. ಇಂದು ನನಗೆ ಎಂಬತ್ತು ವರ್ಷ ತುಂಬಿದೆ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಎಲ್ಲರೂ ಅವಳಿಗೆ ಹುಟ್ಟು ಹಬ್ಬದ ಶುಭಾಶಯ ಕೋರುತ್ತಾರೆ. ಅವಳಿಗೆ ಸಂತೋಷ ಆಗುತ್ತದೆ. ನಂತರ ಕೈಯ್ಯಲ್ಲಿ ಹಿಡಿದು ತಂದಿದ್ದ ಪ್ರಸಾದವನ್ನು ಅಣ್ಣಯ್ಯನ ಮುಂದೆ ಹಿಡಿಯುತ್ತಾಳೆ. ನೀನೇ ನನ್ನ ಕಾಪಾಡಿದ್ದು ಎನ್ನುತ್ತಾ ಅವನನ್ನು ಪ್ರೀತಿಯಿಂದ ನೋಡುತ್ತಾಳೆ. ಅದನ್ನು ಕಂಡು ಪಾರು ಆಶ್ಚರ್ಯ ಆಗುತ್ತದೆ. ಈ ಅಜ್ಜಿ ಏನ್ ಮಾತಾಡ್ತಾ ಇದ್ದಾಳೆ? ಎಂದು ಅವಳಿಗೆ ಅನುಮಾನ ಆಗುತ್ತದೆ.

ಕಾವೇರಜ್ಜಿಯ ಪ್ರೀತಿಯ ಮಾತು

ಆ ನಂತರ ಪಾರುಗೂ ಅರ್ಥ ಆಗುವ ರೀತಿಯಲ್ಲಿ ಅವಳು ಮಾತಾಡುತ್ತಾಳೆ. ಪಾರೂ ಎಂದು ಅವಳನ್ನು ಹತ್ತಿರ ಕರೆಯುತ್ತಾಳೆ. ಅವಳು ಬಂದು ಶಿವು ಪಕ್ಕ ನಿಂತುಕೊಳ್ಳುತ್ತಾಳೆ. ಅವರಿಬ್ಬರ ಜೋಡಿಯನ್ನು ಕಣ್ತುಂಬಿಕೊಂಡು ಅಜ್ಜಿ ಮಾತು ಮುಂದುವರೆಸುತ್ತಾಳೆ. ಇವನೇ ನನ್ನ ಪ್ರಾಣ ಉಳಿಸಿದ್ದು ಎಂದು ಹೇಳುತ್ತಾಳೆ. “ಇವನೇ ನನ್ನ ಮಗ, ಮೊಮ್ಮಗ, ನನ್ನ ಭಾಗದ ದೇವರು” ಎಂದು ಅವನನ್ನು ಹೊಗಳುತ್ತಾಳೆ. ಇದು ನೀವಾಗಿರುವ ಮದುವೆ ಅಲ್ಲ. ಇದು ಆ ದೇವರು ಮಾಡಿದ ಮದುವೆ ಎಂದು ಹೇಳುತ್ತಾಳೆ.

ಆ ಸಂದರ್ಭದಲ್ಲಿ ಪಾರುಗೆ ಕಾವೇರಿ ಅಜ್ಜಿಯ ಮಾತಿನಲ್ಲಿ ಏನೋ ಸತ್ಯ ಅಡಗಿದೆ ಎಂದು ಭಾಸವಾಗುತ್ತದೆ. ಅವಳು ಕಣ್ಣರಳಿಸಿ ಅವಳು ಹೇಳಿದ್ದನ್ನೆಲ್ಲ ಕೇಳುತ್ತಾ ಇರುತ್ತಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner