Annayya Serial: ಅಣ್ಣಯ್ಯ ಎಂದರೆ ಪಾರುಗೆ ಬಲು ಇಷ್ಟ; ತನ್ನ ಹಾಗೂ ಶಿವು ಮಾವನ ಮಧ್ಯ ಬಂದ ಮಂಜಿಗೆ ಬೈಗುಳ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಣ್ಣಯ್ಯ ಎಂದರೆ ಪಾರುಗೆ ಬಲು ಇಷ್ಟ; ತನ್ನ ಹಾಗೂ ಶಿವು ಮಾವನ ಮಧ್ಯ ಬಂದ ಮಂಜಿಗೆ ಬೈಗುಳ

Annayya Serial: ಅಣ್ಣಯ್ಯ ಎಂದರೆ ಪಾರುಗೆ ಬಲು ಇಷ್ಟ; ತನ್ನ ಹಾಗೂ ಶಿವು ಮಾವನ ಮಧ್ಯ ಬಂದ ಮಂಜಿಗೆ ಬೈಗುಳ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರೂ ಒಂದಾಗುವ ಸಮಯ ಹತ್ತಿರ ಬಂದಿದೆ. ರಾಣಿ ಹಾಗೂ ಮಂಜಿ ಸೇರಿಕೊಂಡು ಅವರಿಬ್ಬರ ನಡುವೆ ಪ್ರೀತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪಾರು ಮಂಜಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾಳೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (Zee Kannada)

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರು ಒಂದೇ ಕೋಣೆಯಲ್ಲಿ ಮಲಗುತ್ತಿದ್ದರೇ ಹೊರತು ಒಂದೇ ಹಾಸಿಗೆಯಲ್ಲಿ ಮಲಗುತ್ತಿರಲಿಲ್ಲ. ಈ ವಿಚಾರ ಮಂಜಿ ಹಾಗೂ ರಾಣಿ ಇಬ್ಬರಿಗೂ ಗೊತ್ತಾಗಿತ್ತು. ಅದಕ್ಕೆ ಅವರಿಬ್ಬರೂ ಉಪಾಯ ಮಾಡಿ ಪಾರು ಮತ್ತು ಶಿವು ಒಂದಾಗುವಂತೆ ಮಾಡುತ್ತಿದ್ದಾರೆ. ಶಿವು ನೆಲಕ್ಕೆ ಮಲಗಿಕೊಂಡಿರುತ್ತಾನೆ. ಪಾರು ದಿನವೂ ಮಂಚದ ಮೇಲೆ ಮಲಗಿಕೊಂಡಿರುತ್ತಾಳೆ. ಆದರೆ ಪಾರುಗೆ ತಾನೂ ಶಿವು ಜತೆಯಲ್ಲೇ ಮಲಗಬೇಕು ಎಂದು ಆಸೆ ಆಗುತ್ತದೆ. ರಾತ್ರಿ ಬೆಳಗಾಗುವುದರಲ್ಲಿ ಪಾರು ಶಿವು ಹಾಸಿಗೆಯಲ್ಲಿ ಮಲಗಿರುತ್ತಾಳೆ. ಅದೇ ವಿಚಾರವನ್ನು ದೊಡ್ಡದಾಗಿ ಹೇಳಲು ಪಾರು ಬಯಸುತ್ತಾಳೆ. ಆದರೆ ಶಿವು ಅವಳ ಬಾಯಿ ಮುಚ್ಚುತ್ತಾನೆ.

ಶಿವು ಮಾವನ ಮೇಲೆ ಪಾರುಗೆ ಪ್ರೀತಿ

ಆಗ ಪಾರು ಅವನ ಕೈಗೆ ಕಚ್ಚುತ್ತಾಳೆ. ನೋವಿನಿಂದ ಶಿವು ಕೂಗಿಕೊಂಡ ಧ್ವನಿ ಕೇಳಿ, ಹೊರಗಿನಿಂದ ಮಂಜಿ ಹಾಗೂ ರಾಣಿ ಬರುತ್ತಾರೆ. ಅವರಿಬ್ಬರೂ ಬಂದು ಏನಾಯ್ತು? ಎಂದು ಪ್ರಶ್ನೆ ಮಾಡುತ್ತಾರೆ. ಆಗ ಪಾರು ಹೇಳುತ್ತಾಳೆ. “ಮಾವನಿಗೆ ಬೆನ್ನು ನೋವಾಗಿತ್ತು, ಆ ಕಾರಣಕ್ಕಾಗಿ ಅವನು ಎರಡು ದಿನದಿಂದ ನೆಲಕ್ಕೆ ಮಲಗಿಕೊಳ್ಳುತ್ತಿದ್ದ. ನಾನು ಮಂಚದ ಮೇಲೆ ಮಲಗಿದ್ದೆ, ಆದರೆ ಬೆಳಗಾಗುವಷ್ಟರಲ್ಲಿ ನಾನೂ ಕೆಳಗಡೆ ಬಂದು ಮಲಗಿದ್ದೆ. ಇದು ಹೇಗೆ ಸಾಧ್ಯ ಅಂತ ಅನುಮಾನ ಆಯ್ತು. ರಾತ್ರಿ ಶಿವು ಮಾವಾನೇ ನನ್ನ ಎತ್ತಿಕೊಂಡು ಕೆಳಗಡೆ ಮಲಗಿಸಿದ್ದು ಅಂದ್ರೆ ಅದೆಲ್ಲ ತಪ್ಪು ಅಂತಾನೆ” ಎಂದು ಪಾರು ಹೇಳುತ್ತಾಳೆ.

ಮಂಜಿಗೆ ಬೈದ ಪಾರು

ಆಗ ರಾಣಿ “ಇದೆಲ್ಲ ತಪ್ಪಾಗಲ್ಲ, ಗಂಡ ಹೆಂಡ್ತಿ ಅಂದ್ಮೇಲೆ ಇದೆಲ್ಲ ಇದ್ದಿದ್ದೇಯ” ಎಂದು ಹೇಳಿ ಸುಮ್ಮನಾಗುತ್ತಾಳೆ. ಮಂಜಿ ಹಾಗೂ ರಾಣಿ ಇಬ್ಬರೂ ಅಲ್ಲಿಂದ ಹೊರಡುತ್ತಾರೆ, ಆದರೆ ಪಾರು ಮಂಜಿಯನ್ನು ತಡೆಯುತ್ತಾಳೆ. “ನೀನು ನನ್ನ ಮತ್ತು ನನ್ನ ಮಾವನ ಮಧ್ಯ ಬರುವ ಪ್ರಯತ್ನ ಮಾಡಬೇಡ” ಎಂದು ವಾರ್ನಿಂಗ್ ಮಾಡುತ್ತಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner