Annayya Serial: ಶಿವು ಪ್ರೀತಿ ಬಯಸಿದ ಪಾರು; ಹೆಂಡತಿಯ ನೋಟಕ್ಕೆ ಹೆದರಿದ ವೀರಭದ್ರ ಮಾಡಿದ ತಪ್ಪೇನು?
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಶಿವು ಪ್ರೀತಿ ಬಯಸಿದ ಪಾರು; ಹೆಂಡತಿಯ ನೋಟಕ್ಕೆ ಹೆದರಿದ ವೀರಭದ್ರ ಮಾಡಿದ ತಪ್ಪೇನು?

Annayya Serial: ಶಿವು ಪ್ರೀತಿ ಬಯಸಿದ ಪಾರು; ಹೆಂಡತಿಯ ನೋಟಕ್ಕೆ ಹೆದರಿದ ವೀರಭದ್ರ ಮಾಡಿದ ತಪ್ಪೇನು?

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಈಗ ಶಿವನ ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ. ಶಿವು ತನಗಾಗಿ ಏನೆಲ್ಲ ತ್ಯಾಗ ಮಾಡಿದ್ದಾನೆ ಎಂಬುದನ್ನು ಅವಳು ತಿಳಿದುಕೊಂಡಾಗಿನಿಂದ ಅವಳ ಪ್ರೀತಿ ಹೆಚ್ಚಾಗಿದೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (Zee Kannada)

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತುಂಬಾ ಬದಲಾಗಿದ್ದಾಳೆ. ಅವಳು ಈಗ ಶಿವುವನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಅವಳಿಗೆ ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಶಿವುಗೆ ತಿಳಿಸಬೇಕು ಎನ್ನುವ ಹಂಬಲವೂ ಇದೆ. ಕಾವೇರಿ ಅಜ್ಜಿ ಬಂದು ಅವಳ ಹುಟ್ಟು ಹಬ್ಬದ ದಿನ ಬಂದು ಶಿವುಗೆ ತುಂಬಾ ಗೌರವ ಕೊಟ್ಟು ಅವನನ್ನು ಕಂಡು ಹೋಗಲು ಬಂದಿರುವುದನ್ನು ಕಂಡು ಪಾರುಗೆ ಕೆಲ ಅನುಮಾನಗಳು ಆರಂಭವಾಗಿದೆ. ಆದರೂ ಕಾವೇರಿ ಅಜ್ಜಿಯ ಮಾತಿನಿಂದ ಅವರಿಬ್ಬರು ಇನ್ನಷ್ಟು ಹತ್ತಿರ ಆಗಲು ಅವಕಾಶ ಕೂಡ ಸಿಕ್ಕಿದೆ. ಪಾರುಗೆ ತಿಳಿಯದ ಸಾಕಷ್ಟು ವಿಚಾರಗಳು ಅಲ್ಲಿ ನಡೆದಿದೆ.

ಹೆಂಡತಿ ನೋಟಕ್ಕೆ ಹೆದರಿದ ವೀರಭದ್ರ

ಇನ್ನು ಪಾರು ತವರಿನಲ್ಲಿ ಒಂದು ಪ್ರಸಂಗ ನಡೆಯುತ್ತದೆ. ಅದೇನೆಂದರೆ ಪಾರು ತಂದೆ ವೀರಭದ್ರ ಮಾತಿನ ಭರದಲ್ಲಿ ತನ್ನ ಹೆಂಡತಿಗೆ ಬೈಯ್ಯುವಾಗ “ಇದನ್ನೆಲ್ಲ ನೀನು ನಿನ್ನ ಅಪ್ಪನ ಮನೆಯಿಂದ ತಂದಿದ್ದಾ?” ಎಂದು ಪ್ರಶ್ನೆ ಮಾಡುತ್ತಾನೆ. ಆಗ ಪ್ರತಿನಿತ್ಯವೂ ಹೆದರಿಕೊಂಡೇ ಬದುಕುತ್ತಿರುವ ಅವನ ಹೆಂಡತಿ ಆ ಮಾತಿಗೆ ಸಿಟ್ಟಾಗಿ ಒಮ್ಮೆಲೆ ಸಿಟ್ಟಿನ ಕಂಗಳಿಂದ ಅವನನ್ನು ನೋಡುತ್ತಾಳೆ. ಅದನ್ನು ಎರಡನೇ ಹೆಂಡತಿ ಗಮನಿಸಿರುತ್ತಾಳೆ. ಅವಳು ತನ್ನ ಅಕ್ಕನಿಗೆ "ನೀನು ಭಯದಲ್ಲಿದ್ದರೂ ಅಷ್ಟೊಂದು ಕೋಪದಿಂದ ಅವರನ್ನು ಆ ರೀತಿ ನೋಡಿರೋದ್ಯಾಕೆ? ಎಂದು ಅನುಮಾನ ಬಂದು ಕೇಳುತ್ತಾಳೆ. ಅದರ ಹಿಂದೆ ಏನೋ ಕಥೆ ಇದೆ ಎನ್ನುವ ಸುಳಿವನ್ನು ವೀಕ್ಷಕರಿಗೆ ನೀಡಿದ್ದಾರೆ.

ಶಿವು ಪ್ರೀತಿಯಲ್ಲಿ ಪಾರು
ಶಿವು ತನ್ನ ಕೋಣೆಯಲ್ಲಿ ಯಾರೂ ಇಲ್ಲ ಎಂದು ಭಾವಿಸಿ, ಅಂಗಿ ಗುಂಡಿ ಬಿಚ್ಚುತ್ತ ಒಳಗಡೆ ಬರುತ್ತಾನೆ. ಆದರೆ ಅಷ್ಟರಲ್ಲಾಗಲೇ ಪಾರು ಕೋಣೆಯಲ್ಲಿರುತ್ತಾಳೆ. ಅದಾದ ನಂತರ ಅವನು ನಾಚಿಕೊಂಡು “ಕೋಣೆಯಲ್ಲಿ ಯಾರೂ ಇಲ್ಲ ಎಂದುಕೊಂಡೆ, ನಾನು ಬೇಕಾದ್ರೆ ಇಂದು ಹೊರಗಡೆ ಮಲಗುತ್ತೇನೆ ಎಂದು ಹೇಳುತ್ತಾನೆ". ನನ್ನ ತಂಗಿಯರಿಗೆ ಏನಾದ್ರೂ ಸುಳ್ಳು ಹೇಳುತ್ತೇನೆ. ಅವರು ಬೇಸರ ಮಾಡಿಕೊಳ್ಳೋದಿಲ್ಲ ಎಂದು ಹೇಳುತ್ತಾನೆ. ಆದರೆ ನನಗೆ ಬೇಜಾರಾದ್ರೇ? ಎಂದು ಪಾರು ಪ್ರಶ್ನೆ ಮಾಡಿದ್ದಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner