Annayya Serial: ಅಣ್ಣಯ್ಯನ ಮನೆ ಉಳಿಸಿದ ಪಾರು; ರಶ್ಮಿ ಕೊಟ್ಟ ಕೀಲಿಕೈ ನೋಡಿ ಖುಷಿಯಾದ ಸೀನ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಣ್ಣಯ್ಯನ ಮನೆ ಉಳಿಸಿದ ಪಾರು; ರಶ್ಮಿ ಕೊಟ್ಟ ಕೀಲಿಕೈ ನೋಡಿ ಖುಷಿಯಾದ ಸೀನ

Annayya Serial: ಅಣ್ಣಯ್ಯನ ಮನೆ ಉಳಿಸಿದ ಪಾರು; ರಶ್ಮಿ ಕೊಟ್ಟ ಕೀಲಿಕೈ ನೋಡಿ ಖುಷಿಯಾದ ಸೀನ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮನೆ ಹರಾಜಾಗುತ್ತಿತ್ತು. ಆದರೆ, ಪಾರು ಪ್ರಾಮಾಣಿಕವಾಗಿ ನಡೆದುಕೊಂಡು ಮನೆಯನ್ನು ಉಳಿಸಿಕೊಂಡಿದ್ದಾಳೆ. ಮುಂದೇನಾಗಿದೆ ನೋಡಿ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (Zee Kannada)

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆಗೆಂದು ಮಾಡಿದ ಸಾಲದ ಕಾರಣದಿಂದ ಶಿವು ಮನೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಆದರೆ, ಪಾರು ತುಂಬಾ ಜಾಣೆ. ಅವಳು ತನ್ನ ಜಾಣತನದಿಂದ ಕೆಲವು ಸಾಕ್ಷಿಗಳನ್ನು ಹುಡುಕಿಕೊಂಡು ಬಂದಿದ್ದಾಳೆ. ಮನೆಯನ್ನು ಯಾವುದೇ ಕಾರಣಕ್ಕೂ ಹರಾಜು ಹಾಕುವಂತಿಲ್ಲ ಎಂದು ಹೇಳಿದ್ದಾಳೆ. ಅಣ್ಣಯ್ಯ ಹಾಗೂ ಅವನ ಎಲ್ಲಾ ತಂಗಿಯರು ತುಂಬಾ ಬೇಸರ ಮಾಡಿಕೊಂಡು ಅಸಹಾಯಕ ಸ್ಥಿತಿಯಲ್ಲಿ ನಿಂತುಕೊಂಡಿರುವಾಗ ಪಾರು ಮಾತ್ರ ತಾನೇನು ಮಾಡಲು ಸಾಧ್ಯ ಎಂದು ಯೋಚಿಸುತ್ತಿದ್ದಳು. ಮಾಕಾಳಮ್ಮನ ಬಳಿ ಹೋದರೆ ಪರಿಹಾರ ಸಿಗುತ್ತದೆ ಎಂದು ಅಂದುಕೊಂಡಿದ್ದಳು.

ಶಿವು ಮನೆಯನ್ನು ಉಳಿಸಿದ ಪಾರು

ಇತ್ತ ರಶ್ಮಿಗೆ ವಿಷಯ ಗೊತ್ತಾದರೂ ಅವಳು ಮಾತ್ರ ಮನೆಯಲ್ಲೇ ಇರುವ ಪರಿಸ್ಥಿತಿ ಲೀಲಾಳಿಂದ ಉಂಟಾಗಿತ್ತು. ರಶ್ಮಿಗೂ ಹೇಗಾದರೂ ಮಾಡಿ ತಾನು ಅಣ್ಣಯ್ಯ ಇದ್ದಲ್ಲಿಹೆ ಹೋಗಬೇಕು ಎಂಬ ಬಯಕೆ ಆಗುತ್ತಲೇ ಇತ್ತು. ಅಣ್ಣಯ್ಯನ ಮನೆ ಹರಾಜು ಹಾಕುವ ವೇಳೆ ಇನ್ನು ಕೊನೆ ಸಲ ಹರಾಜು ಕೂಗುತ್ತಾರೆ ಎನ್ನುವಷ್ಟರಲ್ಲಿ ಅಲ್ಲಿಗೆ ಪಾರು ಬರುತ್ತಾಳೆ. ಬಂದು ಹರಾಜು ನಿಲ್ಲಿಸುತ್ತಾಳೆ. ನಾವು ರಶ್ಮಿ ಮದುವೆಯ ಸಮೀಪಕ್ಕೆ ಸಾಲ ತೆಗೆದುಕೊಂಡಿದ್ದು, ಸಾಲ ತೀರಿಸಲು ಕೆಲ ದಿನಗಳ ಅವಕಾಶ ಇರುತ್ತದೆ. ಆದರೆ, ಯಾರೋ ಮೋಸ ಮಾಡಿ ನಾವು ಸಾಲ ತೆಗೆದುಕೊಂಡು ಒಂದು ವರ್ಷ ಕಳೆದಿದೆ ಎಂದು ಹೇಳಿದ್ದಾರೆ. ಇದು ತಪ್ಪು ಎಂದು ಹೇಳುತ್ತಾಳೆ.

ರಶ್ಮಿಯಿಂದ ಖುಷಿಪಟ್ಟ ಸೀನ

ಅವಳ ಮಾತನ್ನು ಯಾರೂ ಕೇಳದೆ ಇದ್ದಾಗ ಸಾಕ್ಷಿಯನ್ನು ಬೇಕಾದರೂ ನೀಡುತ್ತೇನೆ ಎನ್ನುತ್ತಾಳೆ. ಹೀಗೆಲ್ಲ ಆಗಿ ಕೊನೆ ಗಳಿಗೆಯಲ್ಲಿ ಹಣ ಇಲ್ಲದೆಯೂ ಅಣ್ಣಯ್ಯನ ಮನೆ ಉಳಿದುಕೊಂಡಿದೆ. ಖುಷಿಯಲ್ಲಿ ಶಿವು ಪಾರುವನ್ನು ಅಪ್ಪಿಕೊಂಡಿದ್ದಾನೆ. ಇತ್ತ ರಶ್ಮಿಗೆ ಸೀನ ಖುಷಿ ವಿಚಾರ ಹೇಳುತ್ತಾನೆ. ಸೀನನ ಜತೆ ತಾನೂ ಶಿವು ಮನೆಗೆ ಹೋಗಲು ರಶ್ಮಿ ಬಯಸುತ್ತಾಳೆ. ಆದರೆ ಸೀನ ಸೈಕಲ್ ತೆಗೆದುಕೊಂಡು ಹೋಗಲು ನೋಡುತ್ತಾನೆ. ಆಗ ರಶ್ಮಿ ತಾನೇ ಬುಲೆಟ್‌ ಬೈಕ್ ಕೀಲಿಕೈ ಕೊಡುತ್ತಾಳೆ. ಅದನ್ನು ಕಂಡು ಸೀನನಿಗೆ ಖುಷಿಯಾಗಿದೆ. ರಶ್ಮಿಯನ್ನೂ ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟಿದ್ದಾನೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Suma Gaonkar

eMail
Whats_app_banner