Annayya Serial: ಗಂಡನ ಮೇಲೆ ಅಪಾರ ಪ್ರೀತಿ ಹೊತ್ತ ಪಾರು; ಶಿವು ಬಾಯಲ್ಲಿ ಹುಡುಗಿಯರ ಹೆಸರು ಹೇಳಿ ಹುಸಿಮುನಿಸು
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮತ್ತು ಶಿವು ಇಬ್ಬರು ಈಗೀಗ ಪ್ರೀತಿಸಲು ಆರಂಭಿಸಿದ್ದಾರೆ. ಆದರೆ ಪಾರು ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬ ಸತ್ಯ ಇನ್ನೂ ಶಿವುಗೆ ಗೊತ್ತಾಗಿಲ್ಲ. ಪಾರು ಮಾತ್ರ ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾಳೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮತ್ತು ಶಿವು ಇಬ್ಬರು ಈಗೀಗ ಪ್ರೀತಿಸಲು ಆರಂಭಿಸಿದ್ದಾರೆ. ಆದರೆ ಪಾರು ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬ ಸತ್ಯ ಇನ್ನೂ ಶಿವುಗೆ ಗೊತ್ತಾಗಿಲ್ಲ. ಪಾರು ಮಾತ್ರ ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾಳೆ. ಶಿವು ತಂಗಿ ಮದುವೆ ಮಾಡಲು ಹೇಗಾದರೂ ಹಣ ಹೊಂದಿಸಬೇಕು. ರಶ್ಮಿಎ ಯಾವುದೇ ಕಾರಣಕ್ಕೂ ನೋವಾಗಬಾರದು ಎಂದು ಅಂದುಕೊಂಡಿದ್ದಾನೆ. ಅದೇ ಕಾರಣಕ್ಕೆ ಗಂಡಿನ ಕಡೆಯವರು ಕೇಳಿದಷ್ಟು ಹಣ ಹೊಂದಿಸಿದ್ದಾನೆ. ಅದರೆ ಪಾರು ಈ ವಿಚಾರ ತಿಳಿದುಕೊಂಡು ತನ್ನಿಂದಲೂ ಸಹಾಯ ಆಗಲಿ ಎಂದು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾಳೆ. ಹೇಗೋ ಮಾಡಿ ಒಂದಷ್ಟು ಹಣ ಹೊಂದಿಸಿಕೊಂಡು ಬಂದಿದ್ದಾಳೆ.
ಶಿವು ಮೇಲೆ ಪಾರುಗೆ ಹುಸಿಮುನಿಸು
ಹಿಂದಿನಿಂದ ಬಂದು ಶಿವು ಕಣ್ಣು ಮುಚ್ಚಿ, ನಾನು ನಿನಗೆ ಏನೋ ಕೊಡ್ತೀನಿ ಎಂದು ಹೇಳಿದ್ದಾಳೆ. ಆದರೆ ಅದಕ್ಕೂ ಮುನ್ನ ಅವಳು ಶಿವು ಕಣ್ಣು ಮುಚ್ಚಿದಾಗ “ನಾನು ಯಾರೆಂದು ಹೇಳಬೇಕು” ಎಂದು ಶಿವು ಹತ್ತಿರ ಹೇಳಿರುತ್ತಾಳೆ. ಶಿವು ಕೂಡ ಬೇಕು ಎಂದೇ ಸಾಕಷ್ಟು ಹುಡುಗಿಯರ ಹೆಸರು ಹೇಳುತ್ತಾನೆ. ಪಾರುಗೆ ಇದರಿಂದ ಕೋಪ ಬರಲಿ ಎಂಬುದೇ ಅವನ ಉದ್ದೇಶ ಆಗಿರುತ್ತದೆ. ಸುಮ್ಮನೇ ಅವಳನ್ನು ಕೆಣಕುತ್ತಾನೆ. ಆಗ ಪಾರು ಅಷ್ಟೊಂದು ಹುಡುಗಿಯರ ಹೆಸರು ಕೇಳಿ ಮುನಿಸಿಕೊಳ್ಳುತ್ತಾಳೆ. ತನುಜಾ, ಕೆಂಪಿ, ಮಾಲಕ್ಷ್ಮಿ, ಅಂತೆಲ್ಲ ಏನೇನೋ ಒಂದಷ್ಟು ಹೆಸರು ಹೇಳುತ್ತಾನೆ. ಆಗ ಪಾರು ಕೋಪದಿಂದ ಕೈ ಬಿಟ್ಟು “ನಾನು ಪಾರು, ಇವರೆಲ್ಲ ನಿನ್ನ ಹುಡುಗೀರಾ? ” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಶಿವು ಕೂಡ ಹೌದು ಎಂದು ಉತ್ತರಿಸಿ ನಗುತ್ತಾನೆ.
ನಂತರ ಅವಳು ತನ್ನ ಕೈಯ್ಯಲ್ಲಿ ಒಂದಷ್ಟು ಹಣ ಹಿಡಿದುಕೊಂಡು ಬಂದಿರ್ತಾಳೆ. ಆದರೆ ಅವಳು ಹಣ ತಂದ ವಿಚಾರ ಶಿವುಗೆ ಗೊತ್ತಿರುವುದಿಲ್ಲ. ಅವಳು ಹಣ ನೀಡಿದ ನಂತರ ಅವನು ಶಾಕ್ ಆಗಿ ನಿಂತಿದ್ದಾನೆ. ಅವನೂ ಒಂದಷ್ಟು ಹಣ ತಂದು ಪಾರುಗೆ ಕಾಣದಂತೆ ಇಡುವ ಪ್ರಯತ್ನ ಮಾಡಿದ್ದ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
