Annayya Serial: ಅಣ್ಣಯ್ಯನ ಮನೆಯಲ್ಲಿ ಮದುವೆ ಸಂಭ್ರಮ; ತಾಯಿ ಸ್ಥಾನದಲ್ಲಿ ನಿಂತು ರಶ್ಮಿಗೆ ಅರಶಿನ ಹಚ್ಚಿದ ಪಾರು
ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಭ್ರಮ ಆರಂಭವಾಗಿದೆ. ಅರಶಿನ ಶಾಸ್ತ್ರ ಆರಂಭವಾಗಿದೆ. ಪಾರುಗೆ ಸತ್ಯದ ಸುಳಿವು ಸಿಗುವ ಸಮಯ ಹತ್ತಿರ ಬಂದಿದೆ.

ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆಗೆ ಎಲ್ಲ ತಯಾರಿ ನಡೆದಿದೆ. ರಶ್ಮಿ ಹಸೆಮಣೆ ಏರಲು ರೆಡಿಯಾಗಿದ್ದಾಳೆ. ಸಂಪ್ರದಾಯ, ಶಾಸ್ತ್ರ ಎಲ್ಲವನ್ನೂ ಅನುಸರಿಸುತ್ತಾ ಸರಳವಾಗಿ ಅರಶಿನ ಶಾಸ್ತ್ರ ಮಾಡುತ್ತಿದ್ದಾರೆ. ಅಣ್ಣಯ್ಯ ತಂಗಿಯರಿಗೆಲ್ಲ ಸಂಭ್ರದ ದಿನ ಇದಾಗಿದ್ದು, ಪಾರು ಎಲ್ಲ ಜವಾಬ್ಧಾರಿಯನ್ನು ತೆಗೆದುಕೊಂಡು ರಶ್ಮಿ ಮದುವೆ ಮಾಡಿಸಲು ಮುಂದೆ ನಿಂತಿದ್ದಾಳೆ. ಎಲ್ಲರೂ ಅರಶಿನ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ಕಾವೇರಿ ಅಜ್ಜಿ ಕೂಡ ಬಂದಿದ್ದಾರೆ. ಮಾದಪ್ಪಣ್ಣನ ಮನೆಯವರೂ ಬಂದಿದ್ದಾರೆ. ಶಿವು, ಮಾವ ಬರುವುದಕ್ಕಾಗಿಯೇ ಕಾದಿರುತ್ತಾನೆ. ಇನ್ನೇನು ಅರಶಿನ ಶಾಸ್ತ್ರ ಆರಂಭಿಸಬೇಕು ಎನ್ನುವಷ್ಟರಲ್ಲಿ ಕಾವೇರಿ ಅಜ್ಜಿ ಪಾರು ಬಳಿ ಹೇಳಿದ ಮಾತು ಬಹಳ ಅರ್ಥಪೂರ್ಣವಾಗಿದೆ.
ತಾಯಿ ಸ್ಥಾನದಲ್ಲಿ ನಿಂತ ಪಾರು
“ತಾಯಿ ಸ್ಥಾನದಲ್ಲಿ ನಿಂತು ನಿನೇ ಅರಶಿನ ಹಚ್ಚಮ್ಮ ಪಾರು” ಎಂದು ಕಾವೇರಿ ಅಜ್ಜಿ ಹೇಳುತ್ತಾರೆ. ಆಗ ಪಾರು ತಾನೇ ಮೊದಲು ರಶ್ಮಿಗೆ ಅರಶಿನ ಹಚ್ಚಿದ್ದಾಳೆ. ಎಂದಿಗೂ ನಾಚಿಕೊಳ್ಳದ ರಶ್ಮಿ ಮುಖದಲ್ಲಿ ನಾಚಿಕೆ ಎದ್ದು ತೋರುತ್ತಿದೆ. ರಶ್ಮಿ ಮುಖದಲ್ಲಿ ಮದುವೆ ಕಳೆ ಎದ್ದು ಕಾಣುತ್ತಿದೆ.
ಅಷ್ಟರಲ್ಲಿ ವೀರಭದ್ರ ಶಿವು ಮನೆಗೆ ಬರುತ್ತಾನೆ, ಅವನು ಬಂದ ತಕ್ಷಣವೇ ಕುಳಿತುಕೊಳ್ಳಲು ವ್ಯವಸ್ಥೆ ಮಾಡುತ್ತಾರೆ. ಮಾದಪ್ಪಣ್ಣ ಅಕ್ಕಂದಿರೆಲ್ಲಿ? ಎಂದು ಪ್ರಶ್ನೆ ಮಾಡುತ್ತಾನೆ. ಯಾಕೆಂದರೆ ವೀರಭದ್ರ ತನ್ನ ಇಬ್ಬರು ಹೆಂಡತಿಯರನ್ನು ಮನೆಯಲ್ಲೇ ಬಿಟ್ಟು ಬಂದಿರುತ್ತಾನೆ. ಶಿವುಗೂ ಇದರಿಂದ ಬೇಸರ ಆಗಿರುತ್ತದೆ. ಮಾದಪ್ಪಣ್ಣ ಕೇಳಿದ ಪ್ರಶ್ನೆಗೆ ವೀರಭದ್ರ ಉತ್ತರಿಸುತ್ತಾ ಇಲ್ಲ, ಅವಳ ತಂದೆಗೆ ಹುಷಾರಿಲ್ಲ. ಅವರು ಈಗಲೂ, ಆಗಲೋ ಸಾಯುವ ಹಂತದಲ್ಲಿದ್ದಾರಂತೆ ಎಂದು ಉತ್ತರಿಸುತ್ತಾನೆ, ಆ ಮಾತನ್ನು ಕೇಳಿ ಪಾರುಗೆ ಆತಂಕ ಆಗುತ್ತದೆ. “ಅಯ್ಯೋ! ನಾನು ಕೆಲಸದ ಗಡಿಬಿಡಿಯಲ್ಲಿ ಕಾಲ್ ಕೂಡ ಮಾಡಿಲ್ಲ” ಎನ್ನುತ್ತಾಳೆ. ಮಂಜಿ ತಕ್ಷಣವೇ ಈಗಲೂ ಕಾಲ ಮಿಂಚಿಲ್ಲ, ಒಮ್ಮೆ ಕಾಲ್ ಮಾಡು ಎನ್ನತ್ತಾಳೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
