Annayya Serial: ರಶ್ಮಿ ಮದುವೆ ವಿಚಾರದ ಎಡವಟ್ಟು ಬಿಚ್ಚಿಟ್ಟ ಅತ್ತೆ; ಶಿವುಗೆ ಶುರುವಾಯ್ತು ಆತಂಕ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ತಯಾರಿ ನಡೆಯುತ್ತಿದೆ. ಲಗ್ನ ಪತ್ರಿಕೆಯೂ ಸಿದ್ಧವಾಗಿದೆ. ಮೊದಲನೇ ಪತ್ರಿಕೆಯನ್ನು ಮಾವನಿಗೆ ಕೊಡಲು ಶಿವು ಹೋಗಿದ್ದಾನೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತುಂಬಾ ಸಂತೋಷದಿಂದ ತನ್ನ ತಂಗಿ ಮದುವೆ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಾ ಇರುತ್ತಾನೆ. ಆದರೆ ಅಲ್ಲಿ ಆಗೋದೇ ಬೇರೆ. ರಶ್ಮಿ ಗಂಡನಾಗುವವನು ಒಳ್ಳೆಯವನಲ್ಲ ಎಂಬ ಸತ್ಯ ಅವನಿಗೆ ತಿಳಿಯುತ್ತದೆ. ಅಣ್ಣಯ್ಯನ ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ರಶ್ಮಿ ಮದುವೆಯ ಲಗ್ನ ಪತ್ರಿಕೆಯ ಪೂಜೆ ಮಾಡುತ್ತಾರೆ. ಅಣ್ಣಯ್ಯ ತನ್ನ ತಂಗಿಯರಿಗೆ ಲಗ್ನ ಪತ್ರಿಕೆಗೆ ಅರಶಿನ, ಕುಂಕುಮ ಹಚ್ಚಲು ಹೇಳುತ್ತಾನೆ. ಅವರೆಲ್ಲರೂ ಖುಷಿಯಿಂದ ಒಪ್ಪಿಕೊಂಡು ಒಂದೊಂದೇ ಕೆಲಸ ಆರಂಭಿಸಿದ್ದಾರೆ. ಪಾರು ಕೂಡ ಕೈ ಜೋಡಿಸಿದ್ದಾಳೆ. ಶಿವು ತನ್ನ ಮಾವನ ಬಗ್ಗೆ ಅಪಾರ ಗೌರವ ಹೊಂದಿರುವ ಕಾರಣ, ಮೊದಲನೇ ಪತ್ರಿಕೆಯನ್ನು ಮಾವನಿಗೆ ಕೊಟ್ಟು ಬರುತ್ತೇನೆ ಎಂದು ಹೊರಡುತ್ತಾನೆ.
ಜಿಮ್ ಸೀನ ಮತ್ತು ರಶ್ಮಿ
ಇನ್ನು ಇತ್ತ ರಶ್ಮಿ ತಾನು ಸಣ್ಣ ಆಗಬೇಕು ಎಂದು ತುಂಬಾ ಪ್ರಯತ್ನ ಮಾಡುತ್ತಾ ಇರುತ್ತಾಳೆ. ಜಿಮ್ ಸೀನ ಹೇಳಿದಂತೆ ತಾನು ಎಲ್ಲವನ್ನೂ ಕೇಳಬೇಕು ಡಯಟ್ ಕೂಡ ಮಾಡಬೇಕು ಎಂದು ಅಂದುಕೊಂಡಿರುತ್ತಾಳೆ. ಸೀನ ಕೂಡ ಅವಳ ಬಳಿ ಹಣ ತೆಗೆದುಕೊಂಡು, ಅವಳನ್ನು ಸಣ್ಣ ಮಾಡುವ ಪ್ರಯತ್ನದಲ್ಲಿದ್ದಾನೆ. ಅವರಿಬ್ಬರ ನಡುವೆ ನಡೆಯುವ ತಮಾಷೆಯನ್ನು ವೀಕ್ಷಕರು ಇಷ್ಟಪಡುತ್ತಿದ್ದಾರೆ. ಜಿಮ್ ಸೀನ ಅನ್ನ ಊಟ ಮಾಡುವುದು ಬೇಡ ಹಣ್ಣು ತಿನ್ನು ಎಂದಿದ್ದಕ್ಕೆ ರಶ್ಮಿ ಒಂದು ಬಾಳೆಗೊನೆ ಮತ್ತು ದಪ್ಪನೆಯ ಕಲ್ಲಂಗಡಿ ಹಣ್ಣನ್ನು ತಂದು ತಿನ್ನುತ್ತಾಳೆ. ಅದನ್ನು ಕಂಡು ಅವನಿಗೆ ತಲೆಬಿಸಿ ಆಗುತ್ತದೆ. ಹೀಗೆಲ್ಲ ಮಾಡಿದ್ರೆ ನೀನು ಸಣ್ಣ ಆಗುವುದಿಲ್ಲ ಎನ್ನುತ್ತಾನೆ.
ರಶ್ಮಿ ಮದುವೆ ವಿಚಾರದ ಎಡವಟ್ಟು ಬಿಚ್ಚಿಟ್ಟ ಅತ್ತೆ
ಇನ್ನು ಶಿವು ಲಗ್ನ ಪತ್ರಿಕೆ ಕೊಡಲೆಂದು ಮಾವನ ಮನೆಗೆ ಹೋಗುತ್ತಾನೆ. ಆದರೆ ಅವನ ಅತ್ತೆ.. ಶಿವು ಬರುವುದನ್ನೇ ಕಾಯುತ್ತಾ ಇರುತ್ತಾಳೆ. ವೀರಭದ್ರ ಇಲ್ಲದ ಸಮಯದಲ್ಲೇ ತಾನು ಶಿವುಗೆ ಎಲ್ಲ ಸತ್ಯ ಹೇಳಿಬಿಡಬೇಕು ಎಂದು ಅವಳು ಅಂದುಕೊಂಡಿರುತ್ತಾಳೆ. ಅದರಂತೆ ಶಿವು ಬಾಗಿಲ ಬಳಿ ಬಂದಾಗಲೇ ಎಲ್ಲ ಸತ್ಯ ಹೇಳುತ್ತಾಳೆ. “ಶಿವು ರಶ್ಮಿಗೆ ಗೊತ್ತು ಮಾಡಿದ ಗಂಡು ಒಳ್ಳೆಯವನಲ್ಲ” ಎನ್ನುತ್ತಾಳೆ. ಆ ಮಾತನ್ನು ಕೇಳಿ ಶಿವು ಶಾಕ್ ಆಗಿ ನಿಂತಿದ್ಧಾನೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
