Annayya Serial: ಸಂಕಷ್ಟಕ್ಕೆ ಸಿಲುಕಿದ ಅಣ್ಣಯ್ಯ; ಶಿವು ಬಾಹು ಬಂಧನದಲ್ಲಿ ಸಿಕ್ಕ ಪಾರುಗೆ ಎಲ್ಲಿಲ್ಲದ ಸಂತೋಷ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ನಾನು ಹೇಗಾದರೂ ತಂಗಿ ಮದುವೆ ಮಾಡಿಸಲೇಬೇಕು. ಇಲ್ಲ ಅಂದ್ರೆ ರಶ್ಮಿ ತುಂಬಾ ಬೇಸರ ಮಾಡಿಕೊಳ್ಳುತ್ತಾಳೆ ಎಂದು ಶಿವು ಸಾಲ ಮಾಡಲು ಹೊರಟಿದ್ದಾನೆ. ಆದರೆ ಮನೆಯಲ್ಲಿ ಯಾರಿಗೂ ಈ ವಿಚಾರ ಗೊತ್ತಿಲ್ಲ. ಇನ್ನು ಪಾರು ಮಾತ್ರ ಶಿವು ಪ್ರೀತಿಯಲ್ಲಿ ಮುಳುಗಿದ್ದಾಳೆ.

ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ನಿಶ್ಚಿತಾರ್ಥ ಈಗಾಗಲೇ ನೆರವೇರಿದೆ. ಆದರೆ ಗಂಡಿನ ಕಡೆಯವರು ಕೇಳಿದಷ್ಟು ವರದಕ್ಷಿಣೆ ಕೊಡಲು ಶಿವು ಹತ್ತಿರ ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ರಶ್ಮಿ ಮದುವೆ ನಿಲ್ಲಬಾರದು ಎಂದು ತುಂಬಾ ಕಾಳಜಿ ವಹಿಸಿ ಶಿವು ಎಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಾ ಇದ್ದಾನೆ. ಆದರೆ ಮುಂದೆ ಏನಾಗುತ್ತೋ ಏನೋ? ಎಂಬ ಭಯ ಅವನನ್ನು ಕಾಡುತ್ತಿದೆ. ಅವರು ಹೇಳಿದಷ್ಟು ಹಣ ಕೊಡಲು ಸಾಧ್ಯವಾಗದೇ ಇದ್ದರೆ ಮುಂದೇನು ಮಾಡುವುದು ಎನ್ನುವ ಆಲೋಚನೆಯಲ್ಲೇ ಅವನು ಮುಳುಗಿದ್ದಾನೆ. ಯಾವಾಗಲೂ ಗುಟ್ಟು ಗುಟ್ಟಾಗಿ ಪೋನ್‌ನಲ್ಲಿ ಮಾತಾಡುತ್ತಾ ಇರುತ್ತಾನೆ. ಆದರೆ ಅವನು ಈ ರೀತಿ ಮಾಡುತ್ತಾ ಇರುವುದು ಪಾರು ಗಮನಕ್ಕೆ ಬಂದಿದೆ.
ಶಿವು ಪ್ರೀತಿಯಲ್ಲಿ ಪಾರು
ಎಲ್ಲರೂ ಅಣ್ಣಯ್ಯನ ಮನೆಯಲ್ಲಿ ಊಟಕ್ಕೆ ಕುಳಿತಿರುತ್ತಾರೆ. ಶಿವು ಪಕ್ಕದಲ್ಲೇ ಪಾರು ಕೂಡ ಊಟಕ್ಕೆ ಕುಳಿತುಕೊಳ್ಳುತ್ತಾಳೆ. ಆದರೆ ಅವಳಿಗೆ ತಾನೇ ಶಿವುಗೆ ಬಡಿಸಬೇಕು ಎಂಬ ಆಸೆ ಇರುತ್ತದೆ. ಆದರೆ ರಾಣಿ ಎಲ್ಲರಿಗೂ ಬಡಿಸುತ್ತಿರುತ್ತಾಳೆ. ಕಂಬವೊಂದಕ್ಕೆ ವಾಲಿ ನಿಂತುಕೊಂಡು “ನಾನೇ ಮಾವಂಗೆ ಬಡಿಸಬೇಕಿತ್ತು” ಎಂದು ಮನಸಿನಲ್ಲಿ ಅಂದುಕೊಳ್ಳುತ್ತಾ ಇರುತ್ತಾಳೆ. ಅವಳ ಮನಸಿನ ಮಾತನ್ನೇ ಕೇಳಿಸಿಕೊಂಡವಳಂತೆ ರಾಣಿ “ಅತ್ಗೆ ಅಣ್ಣಂಗೆ ನೀನೇ ಬಡ್ಸು” ಎನ್ನುತ್ತಾಳೆ. ಆಗ ಪಾರು ಖುಷಿಯಿಂದ ಬಡಿಸುತ್ತಾಳೆ.
ಶಿವು ತೋಳಲ್ಲಿ ಪಾರು ಸೆರೆ
ನಂತರ ಶಿವುಗೆ ಕಾಲ್ ಬರುತ್ತದೆ. ಕಾಲ್ ಬಂದಾಗ “ಯಾಕಪ್ಪ ಈ ಸಾಲ ಕೊಡೋರು ಇದೇ ಸಮಯಕ್ಕೆ ಕಾಲ್ ಮಾಡ್ತಾರೆ” ಎಂದು ಅಂದುಕೊಂಡು ಅಲ್ಲಿಂದ ಎದ್ದು ಹೋಗಿ ಮಾತಾಡಲು ಪ್ರಯತ್ನ ಮಾಡುತ್ತಾನೆ. ಆದರೆ ಪಾರು ಅವನ ಕೈ ಹಿಡಿದು ಎಳೆದು, ಇಲ್ಲೇ ಕುಳಿತುಕೊಂಡು ಮಾತಾಡು ಎಂದು ಒತ್ತಾಯ ಮಾಡುತ್ತಾಳೆ. ಆಗ ಅವನಿಗೆ ಸಂಕಟ ಆಗುತ್ತದೆ. ಊಟ ಆದಮೇಲೆ ಸ್ವೀಟ್ ತೆಗೆದುಕೊಂಡು ಪಾರು ಕೋಣೆಯೊಳಗಡೆ ಹೋಗುತ್ತಾಳೆ. ಅಲ್ಲಿ ಶಿವು ಫೋನ್ ಹಿಡಿದುಕೊಂಡೇ ನಿಂತಿರುತ್ತಾನೆ. “ಏನ್ ಮಾವಾ ಯಾವಾಗಲೂ ಫೋನಲ್ಲೇ ಮಾತಾಡ್ತಾ ಇರ್ತೀಯಾ?” ಎಂದು ಪ್ರಶ್ನೆ ಮಾಡುತ್ತಾ ಅವನಿಗೆ ಸಿಹಿ ತಿನ್ನಿಸಲು ಮುಂದಾಗುತ್ತಾಳೆ. ಆಗ ಅವಳಿಗೆ ಸೀನು ಬಂದು ಮಂಚದ ಮೇಲೆ ಇಬ್ಬರೂ ಬೀಳುತ್ತಾರೆ. ಅಣ್ಣಯ್ಯನ ಬಾಹುಗಳಲ್ಲಿ ಪಾರು ಬಂಧಿಯಾಗುತ್ತಾಳೆ. ಅವನ ಪ್ರೀತಿಯನ್ನೇ ಬಯಸುತ್ತಿದ್ದ ಅವಳಿಗೆ ಸಂತೋಷವಾಗುತ್ತದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
