Annayya Serial: ಬಳೆ ಶಾಸ್ತ್ರಕ್ಕೆ ಮೊದಲ ಬಳೆ ತಾಯಿನೇ ತೊಡಿಸಬೇಕು ಎಂದ ಬಳೆಗಾರ; ಮದುವೆ ಮನೆಗೆ ಬಂದ್ಲು ಶಿವು ತಾಯಿ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಭ್ರಮ ಆರಂಭವಾಗಿದೆ. ಆದರೆ ಮದುವೆಯ ಹಲವು ಶಾಸ್ತ್ರಕ್ಕೆ ಮದುಮಗಳ ತಾಯಿಯೇ ಬೇಕು ಎಂದು ಹೇಳುತ್ತಿದ್ದಾರೆ. ಆದರೆ ಶಿವು ಕೋಪ ಮಾಡಿಕೊಳ್ಳುತ್ತಿದ್ದಾನೆ.

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯ ಹಾಗೂ ಮನೆಯ ಎಲ್ಲರೂ ಚೆನ್ನಾಗಿ ರೆಡಿಯಾಗಿ ರಶ್ಮಿ ಮದುವೆ ತಯಾರಿ ಮಾಡುತ್ತಿದ್ದಾರೆ. ಇನ್ನೇನು ಮದುವೆ ನಡೆಯುವ ಸಮಯವೂ ಹತ್ತಿರ ಬರುತ್ತಿದೆ. ಅರಶಿನ ಶಾಸ್ತ್ರ ಮುಗಿದಿದೆ. ಅರಶಿನ ಶಾಸ್ತ್ರ ಮಾಡುವಾಗ ಪಾರುನೇ ತಾಯಿ ಸ್ಥಾನದಲ್ಲಿ ನಿಂತುಕೊಂಡು ಮೊದಲು ಅರಶಿನ ಹಚ್ಚಿದ್ದಾಳೆ. ಈಗ ಬಳೆ ಶಾಸ್ತ್ರ ಮಾಡುತ್ತಿದ್ದಾರೆ. ಅಣ್ಣಯ್ಯನ ಎಲ್ಲ ತಂಗಿಯರೂ ತುಂಬಾ ಉತ್ಸಾಹದಿಂದ ಇದ್ದಾರೆ. ಆದರೆ ಬಳೆಗಾರ ಬಂದವನು ಹೆಣ್ಣಿನ ತಾಯಿನೇ ಮೊದಲ ಬಳೆ ತೊಡಿಸಬೇಕು ಎಂದು ಹೇಳಿದ್ದಾನೆ. ಆ ಮಾತನ್ನು ಕೇಳಿ ಶಿವುಗೆ ಕೆಂಡದಂತ ಕೋಪ ಬಂದಿದೆ.
ತಾಯಿ ಎಂದಾಕ್ಷಣ ಶಿವುಗೆ ಬಂದು ಕೋಪ
“ತಾಯಿ ಅಂದ್ರೆ ಮಕ್ಕಳನ್ನು ಹೆತ್ರೆ ಆಗ್ಲಿಲ್ಲ. ಜತೆಗಿದ್ದು ಸಾಕ್ಬೇಕು ಎಂದು ಅವನು ಹೇಳುತ್ತಾ ಭಾವುಕನಾಗಿದ್ದಾನೆ. ಕ್ಷಣ ಕ್ಷಣವೂ ಎಲ್ಲರನ್ನೂ ನನ್ನ ಎದೆಯಲ್ಲಿಟ್ಟುಕೊಂಡು ಜೋಪಾನ ಮಾಡಿದವನು ನಾನು” ಎಂದು ಕೂಗಾಡಿದ್ದಾನೆ. ಆಗ ಪಾರು ಅವನ ಪಕ್ಕದಲ್ಲೇ ನಿಂತು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾಳೆ. ಆದರೆ ಅವನೊಳಗಿನ ಕೋಪ ಮಾತ್ರ ಕಡಿಮೆ ಆಗುವ ಹಾಗೆ ಕಾಣಿಸಲಿಲ್ಲ. ನಂತರ ಬಳೆಗಾರ ಶಿವು ಕೋಪವನ್ನು ನೋಡಿ. “ನಾನು ಇರೋ ಶಾಸ್ತ್ರ ಹೇಳಿದ್ದು ಅಷ್ಟೇ ಇನ್ನೇನಿಲ್ಲ” ಎಂದು ಹೇಳುತ್ತಾನೆ. ಆಗ ನಿಧಾನವಾಗಿ ಶಿವು ತನಗೆ ತಾನೇ ಸಮಾಧಾನ ತಂದುಕೊಳ್ಳುತ್ತಾನೆ.
ಆದರೆ ಶಿವು ಎಲ್ಲ ತಂಗಿಯರೂ ತಾಯಿ ನೆನಪಲ್ಲೇ ಇರುತ್ತಾರೆ. ರಶ್ಮಿಗೂ ತಾಯಿ ನೆನಪಾಗುತ್ತಾಳೆ. ಆದರೆ ತಾಯಿ ಇಲ್ಲದ ಪರಿಸ್ಥಿತಿಯನ್ನು ತಾವೇ ನಿಭಾಯಿಸಬೇಕು. ಅಣ್ಣ ಬೇರೆ ಕೋಪ ಮಾಡಿಕೊಂಡಿದ್ದಾನೆ ಎಂದು ಅವರೆಲ್ಲರೂ ಸುಮ್ಮನೆ ಕುಳಿತಿರುತ್ತಾರೆ. ಅಷ್ಟರಲ್ಲಿ ತಲೆ ಮೇಲಿನಿಂದ ಸೆರಗು ಹೊದ್ಕೊಂಡು ಯಾರೋ ಮದುವೆ ಮನೆಗೆ ಬರ್ತಾರೆ. ಆಗ ಮೊದಲು ರತ್ನಾ ತನ್ನ ತಾಯಿಯನ್ನು ನೋಡುತ್ತಾಳೆ. ದೊಡ್ಡದಾಗಿ ಕೂಗಿ “ಅಮ್ಮ ಬಂದಿದ್ದಾರೆ” ಎಂದು ಹೇಳುತ್ತಾಳೆ. ಎಲ್ಲರೂ ಹೋಗಿ ತಬ್ಬಿಕೊಳ್ಳುತ್ತಾರೆ. ಅಮ್ಮನನ್ನು ಎಲ್ಲರು ಎಷ್ಟು ಮಿಸ್ ಮಾಡಿಕೊಂಡಿದ್ರು ಅನ್ನೋದು ಇದರಲ್ಲೇ ತಿಳಿಯುತ್ತದೆ. ಆದರೆ ಶಿವು ಮಾತ್ರ ಅಮ್ಮ ಇದ್ದಲ್ಲಿ ಹೋಗೋದಿಲ್ಲ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
