Annayya Serial: ಮದುವೆ ಮನೆಗೆ ಬಂದ ಅಮ್ಮನನ್ನು ಅಕ್ಕರೆಯಿಂದ ಕರೆದ ಮಕ್ಕಳು; ತಾಯಿ ಕಂಡರೂ ಸುಮ್ಮನೆ ನಿಂತ ಶಿವು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಮದುವೆ ಮನೆಗೆ ಬಂದ ಅಮ್ಮನನ್ನು ಅಕ್ಕರೆಯಿಂದ ಕರೆದ ಮಕ್ಕಳು; ತಾಯಿ ಕಂಡರೂ ಸುಮ್ಮನೆ ನಿಂತ ಶಿವು

Annayya Serial: ಮದುವೆ ಮನೆಗೆ ಬಂದ ಅಮ್ಮನನ್ನು ಅಕ್ಕರೆಯಿಂದ ಕರೆದ ಮಕ್ಕಳು; ತಾಯಿ ಕಂಡರೂ ಸುಮ್ಮನೆ ನಿಂತ ಶಿವು

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಶಿವು ತಂಗಿಯರು ಮದುವೆ ಕಾರ್ಯಕ್ರಮದಲ್ಲಿ ಮೈಮರೆತಿದ್ದಾರೆ. ಆದರೆ ಅದೇ ಸಂದರ್ಭಕ್ಕೆ ಇಷ್ಟು ವರ್ಷ ಮನೆಗೇ ಬರದ ಶಿವು ತಾಯಿ ಮರಳಿ ಬಂದಿದ್ದಾಳೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (Zee Kannada)

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತಾಯಿ ಮನೆ ಬಿಟ್ಟು ಹೋಗಿ ತುಂಬಾ ವರ್ಷಗಳೇ ಆದಂತಿದೆ. ಆದರೆ ಯಾವ ಕಾರಣಕ್ಕೆ ಅವಳು ಮನೆ ಬಿಟ್ಟು ಹೋಗಿದ್ದಾಳೆ. ಅಥವಾ ಅದರ ಹಿಂದಿನ ಕಥೆ ಏನು? ಎಂಬುದನ್ನು ಇದುವರೆಗೂ ಎಲ್ಲೂ ಬಿಟ್ಟುಕೊಟ್ಟಿಲ್ಲ. ಹೀಗಿರುವಾಗ, ಶಿವು ತಾಯಿ ಜೈಲು ಸೇರಿದ ವಿಚಾರವೂ ಅಣ್ಣಯ್ಯ ಹಾಗೂ ಅಣ್ಣಯ್ಯನ ತಂಗಿಯರಿಗೆ ತಿಳಿದಿಲ್ಲ. ಶಿವು ತಂಗಿ ರಶ್ಮಿಯ ಮದುವೆ ಇರುವ ಸಂದರ್ಭದಲ್ಲಿ ಶಿವು ತಾಯಿ ಜೈಲಿನಿಂದ ಬಂದಿದ್ದಾಳೆ. ತಾನು ತನ್ನ ಮಗಳ ಮದುವೆಗೆ ಹೋಗಬೇಕು ಎಂದುಕೊಂಡು ಓಡೋಡಿ ಬಂದಿದ್ದಾಳೆ. ಈ ವಿಚಾರ ಇನ್ನೂ ವೀರಭದ್ರನಿಗೆ ಗೊತ್ತಾಗಿಲ್ಲ. ಹೀಗಿರುವಾಗ ಅವಳು ಬಂದು ಏನು ಮಾಡುತ್ತಾಳೆ? ಎಂಬ ಕುತೂಹಲವೂ ಪ್ರೇಕ್ಷಕರಲ್ಲಿದೆ. ಜೀ ಕನ್ನಡ ವಾಹಿನಿ ಹಂಚಿಕೊಂಡ ಪ್ರೋಮೋ ತುಣುಕಿನಲ್ಲಿ ಅಣ್ಣಯ್ಯ ಹಾಗೂ ಅಣ್ಣಯ್ಯನ ಕೊನೆತಂಗಿ ಇವರಿಬ್ಬರನ್ನು ಬಿಟ್ಟು ಎಲ್ಲರೂ ಹೋಗಿ ಅಮ್ಮನನ್ನು ತಬ್ಬಿಕೊಂಡಿದ್ದಾರೆ.

ಮದುವೆ ಮನೆಗೆ ಬಂದ ಶಿವು ತಾಯಿ

ಶಿವುಗೆ ತನ್ನ ತಾಯಿಯ ಮೇಲೆ ವಿಪರೀತ ಕೋಪ ಇದೆ ಎನ್ನುವುದು ಆಗಾಗ ವ್ಯಕ್ತವಾಗುತ್ತಲೇ ಇರುತ್ತದೆ. ಅದೇ ರೀತಿ ಈಗ ತನ್ನ ತಾಯಿಯೇ ಎದುರು ಬಂದರೆ ಅವನ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂದು ವೀಕ್ಷಕರು ಕಾಯುತ್ತಿದ್ದಾರೆ. ಹಲವು ವರ್ಷಗಳ ಅಗಲಿಕೆಗೆ ಕಾರಣ ಏನಿರಬಹುದು ಎಂಬ ಕುತೂಹಲವೂ ಇದೆ. ಹೀಗಿರುವಾಗ ಅಣ್ಣಯ್ಯನ ತಂಗಿಯರು ತುಂಬಾ ಖುಷಿಯಲ್ಲಿದ್ದಾರೆ. ಅಮ್ಮನನ್ನು ಕಂಡು ಅವರ ಕಣ್ಣು ತುಂಬಿ ಬಂದಿದೆ. ಎಲ್ಲರೂ ಹೋಗಿ ಅಪ್ಪನನ್ನು ಅಪ್ಪಿಕೊಳ್ಳುತ್ತಾರೆ. “ಯಾಕಮ್ಮ ಇಷ್ಟು ದಿನ ಎಲ್ಲೋಗಿದ್ದೆ?” ಎಂದು ಪ್ರಶ್ನೆ ಮಾಡುತ್ತಾರೆ. ಈಗಲಾದರೂ ಬಂದ್ಯಲ್ಲ ಬಾ ಅಮ್ಮ ಎನ್ನುತ್ತಾ ರತ್ನಾ ಅಮನನ್ನು ಒಳಗಡೆ ಕರೆಯುತ್ತಿದ್ದಾಳೆ. ಆದರೆ ಶಿವು ಮಾತ್ರ ಕಲ್ಲಿನ ಹಾಗೆ ನಿಂತಲ್ಲೇ ನಿಂತಿದ್ದಾನೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Suma Gaonkar

eMail
Whats_app_banner