Annayya Serial: ಜೈಲಿನಿಂದ ಹೊರ ಬರಲು ಅಣ್ಣಯ್ಯನ ತಾಯಿ ಪ್ರಯತ್ನ; ರಶ್ಮಿ ಮದುವೆ ಬಗ್ಗೆ ಶಿವು ಬೇಸರ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯನ ತಾಯಿ ಜೈಲಿನಿಂದ ಹೊರ ಬರುವ ಆಲೋಚನೆ ಮಾಡುತ್ತಿದ್ದಾಳೆ. ಇತ್ತ ಶಿವು ರಶ್ಮಿ ಮದುವೆ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾನೆ. ಪಾರು ಸಮಾಧಾನ ಮಾಡುತ್ತಿದ್ದಾಳೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯನಿಗೆ ತನ್ನ ತಾಯಿ ಎಲ್ಲಿದ್ದಾಳೆ ಎಂಬ ಸುಳಿವೂ ಇಲ್ಲ. ಆದರೆ ಜೈಲಿನಲ್ಲಿ ಇದ್ದುಕೊಂಡು ಯಾವತ್ತೂ ಯಾವ ತಪ್ಪನ್ನೂ ಮಾಡದ ಆ ತಾಯಿ ತನ್ನ ಮಗಳ ಮದುವೆ ಎಂಬ ವಿಚಾರ ತಿಳಿದು ತುಂಬಾ ಕಳವಳ ಮಾಡಿಕೊಂಡಿದ್ದಾಳೆ. ಪೊಲೀಸ್ ಹತ್ತಿರ ನಾನು ಮನೆಗೆ ಹೋಗಬೇಕು ಎಂದು ಕೈ ಮುಗಿದು ಬೇಡಿಕೊಳ್ಳುತ್ತಿದ್ದಾಳೆ. ಇಷ್ಟು ವರ್ಷದಿಂದ ಯಾವ ತಕರಾರೂ ಮಾಡದೇ ಸುಮ್ಮನೆ ಇದ್ದ ಇವಳು ಯಾಕೆ ಈಗ ಹೀಗೆ ಮಾಡುತ್ತಿದ್ದಾಳೆ? ಎಂದು ಪೊಲೀಸರಿಗೆ ಅನಿಸಲು ಆರಂಭವಾಗಿದೆ. ಕಾರಣವನ್ನೂ ಅವರು ಕೇಳುತ್ತಾರೆ. ಆಗ ಅವಳು ಹೇಳುತ್ತಾಳೆ. “ನಾನು ಇಲ್ಲಿದ್ದರೆ ದೊಡ್ಡ ಅವಾಂತರ ಆಗುತ್ತದೆ. ಹೊರಗಡೆ ನನ್ನ ಮಗಳ ಮದುವೆ ನಡೆಯಲಿದೆ, ನಾನು ಹೋಗಲೇಬೇಕು” ಎನ್ನುತ್ತಾಳೆ. ಆ ಮಾತನ್ನು ಕೇಳಿ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ. ನೀನು ಹೋಗಿ ಬಾ ಎಂದು ಹೇಳುತ್ತಾಳೆ.
ರಶ್ಮಿ ಬಗ್ಗೆ ಯೋಚಿಸಿದ ಅಣ್ಣಯ್ಯ
ಆಗ ಅಣ್ಣಯ್ಯನ ತಾಯಿ ತುಂಬಾ ಸಂತೋಷಪಟ್ಟಿದ್ದಾಳೆ. ಇನ್ನು ಇತ್ತ ಶಿವು ಮಾತ್ರ ತನ್ನ ತಂಗಿ ಬಗ್ಗೆ ಆಲೋಚನೆ ಮಾಡುತ್ತಾ ಇದ್ದಾನೆ. ಇನ್ನೂ ಅವಳಿಗೆ ಚಿಕ್ಕವರ ಬುದ್ದಿ ಇದೆ. ಮುಂದೆ ಅವಳು ಎಲ್ಲವನ್ನು ಹೇಗೆ ನಿಭಾಯಿಸುತ್ತಾಳೋ ಗೊತ್ತಿಲ್ಲ ಎಂದು ಅವನು ಹೇಳುತ್ತಿದ್ದಾನೆ. ಇದೆಲ್ಲವನ್ನೂ ಆಲಿಸಿದ ಪಾರು ಅವನಿಗೆ ಸಮಾಧಾನ ಮಾಡುತ್ತಿದ್ದಾಳೆ. ಜೀವನದಲ್ಲಿ ಎಲ್ಲರೂ ಒಬ್ಬೊಬ್ಬರನ್ನಾಗಿ ಕಳೆದುಕೊಳ್ಳುತ್ತಾ ಬರುತ್ತಾರೆ. ಆದರೆ ಇದು ಸಹಜ ಎಂದು ಹೇಳುತ್ತಾಳೆ. ಅದಕ್ಕೆ ಶಿವು ಹೇಳುತ್ತಾನೆ “ಕೊನೆಗೆ ಉಳಿಯುವುದು ಗಂಡ, ಹೆಂಡತಿ ಸಂಬಂಧ ಮಾತ್ರ” ಎಂದು. ಆ ಮಾತನ್ನು ಕೇಳಿದಾಗಿನಿಂದ ಅವಳ ಮನಸಿನಲ್ಲಿ ತನ್ನದೇ ಯೋಚನೆ ಕಾಡುತ್ತಿದೆ.
ಇನ್ನು ಮುಂದೆ ಅಣ್ಣಯ್ಯನ ಎಲ್ಲ ತಂಗಿಯರು ಮದುವೆಯಾಗಿ ಹೋದರೆ ಇವನು ಒಬ್ಬನೇ ಆಗುತ್ತಾನೆ. ಇವನ ತಂದೆ ತುಂಬಾ ದಿನ ಇರಲು ಸಾಧ್ಯವಿಲ್ಲ ಎಂದು ಅವಳು ಆಲೋಚಿಸಿದ್ದಾಳೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
