Annayya Serial: ರಶ್ಮಿ ಮದುವೆಗೆಂದು ಜೈಲಿನಿಂದ ಬರುತ್ತಿದ್ದಾಳೆ ಶಿವು ತಾಯಿ; ಮದುವೆ ನಿಲ್ಲಿಸುವ ಪ್ರಯತ್ನದಲ್ಲಿ ವೀರಭದ್ರನ ಪತ್ನಿ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಭ್ರಮ ಆರಂಭವಾಗಿದೆ. ಆದರೆ ರಶ್ಮಿ ಮದುವೆ ಆಗಬಾರದು ಎಂದೇ ಶಿವು ಅತ್ತೆಯಂದಿರು ಪ್ರಯತ್ನ ಮಾಡುತ್ತಿದ್ದಾರೆ.

ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಭ್ರಮ ಆರಂಭವಾಗಿದೆ. ಆದರೆ ಗಂಡಿನ ಕಡೆಯವರು ಕೇಳಿದಷ್ಟು ಹಣ ಹೊಂದಿಸುವುದು ಹೇಗೆ? ಎಂದು ಶಿವು ಆಲೋಚನೆ ಮಾಡುತ್ತಾ ಇದ್ದಾನೆ. ಹೀಗಿರುವಾಗ ಆ ವಿಚಾರ ಪಾರುಗೆ ತಿಳಿದು ಅವಳೇ ಎಲ್ಲಿಂದಲೋ ಒಂದಷ್ಟು ಹಣ ಹೊಂದಿಸಿಕೊಂಡು ಬಂದಿದ್ದಾಳೆ. ಆದರೆ ಶಿವುಗೆ ಪಾರು ಹೀಗೆಲ್ಲ ಮಾಡಬಹುದು ಎಂಬ ಆಲೋಚನೆಯೂ ಇರುವುದಿಲ್ಲ. ಪಾರು ಸುಮ್ಮನೆ ಶಿವು ಹಿಂದಿನಿಂದ ಬಂದು ಅವನ ಕಣ್ಣು ಮುಚ್ಚುತ್ತಾಳೆ. “ನಾನು ಯಾರು ಎಂದು ಕಂಡು ಹಿಡಿ ನೋಡೋಣ” ಎಂದು ಸವಾಲು ಹಾಕುತ್ತಾಳೆ. ಆಗ ಶಿವು ಗೊತ್ತಿದ್ದೋ, ಗೊತ್ತಿಲ್ಲದೆಯೋ.. ಬೇರೆ ಬೇರೆ ಹೆಸರುಗಳನ್ನು ಹೇಳುತ್ತಾನೆ. ಆಗ ಪಾರುಗೆ ಕೋಪ ಬರುತ್ತದೆ. “ಏ..ಅವರೆಲ್ಲ ಯಾರೂ ಅಲ್ಲ. ನಾನು ಪಾರು” ಎಂದು ಅವಳೇ ಹೇಳುತ್ತಾಳೆ. ನಂತರ ಕಣ್ಣು ತೆಗೆದು ನೋಡಿದರೆ ಅಲ್ಲಿ ಇರೋದು ಪಾರು ಎಂದು ಶಿವುಗೂ ಅರ್ಥ ಆಗುತ್ತದೆ. ಅವಳು ಶಿವು ಹತ್ತಿರ “ನೀನು ಕಣ್ಣು ಮುಚ್ಚಿಕೊಂಡೇ ಇರು, ಕಣ್ಣು ಬಿಡಬೇಡ” ಎಂದು ಹೇಳುತ್ತಾಳೆ.
ವೀರಭದ್ರನ ಪತ್ನಿ ಪ್ರಯತ್ನ ವಿಫಲ
ನಂತರ ಶಿವು ಕಣ್ಣು ಬಿಟ್ಟಾಗ ಪಾರು ಕೈಯ್ಯಲ್ಲಿ ಹಣದ ಕಂತೆ ಇರುತ್ತದೆ. ಅದನ್ನು ನೋಡಿ ಶಿವುಗೆ ಶಾಕ್ ಆಗಿದೆ. ಇಷ್ಟೆಲ್ಲ ಹಣ ಎಲ್ಲಿಂದ ಬಂತು ಎಂಬ ಆಲೋಚನೆ ಅವನಿಗೆ ಖಂಡಿತ ಆಗಿರುತ್ತದೆ. ಇನ್ನು ಇತ್ತ ವೀರಭದ್ರನ ಪತ್ನಿಯರು ರಶ್ಮಿ ಮದುವೆಯನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಎಂದು ಆಲೋಚಿಸುತ್ತಾ ಇರುತ್ತಾರೆ. ಆದರೆ ಯಾವ ಮಾರ್ಗವೂ ಕಾಣದೆ, “ಮಾಕಾಳವ್ವ ನೀನೇ ಕಾಪಾಡಬೇಕವ್ವ” ಎಂದು ಬೇಡಿಕೊಳ್ಳುತ್ತಾರೆ. ಅಷ್ಟರಲ್ಲಿ ಜೈಲಿನಿಂದ ಶಿವು ತಾಯಿ ಬಿಡುಗಡೆಯಾಗಿರುತ್ತಾಳೆ. "ನಾನು ಮನೆಗೆ ಹೋಗುತ್ತೇನೆ, ಎಲ್ಲ ಸರಿ ಮಾಡುತ್ತೇನೆ" ಎಂದು ಹೇಳುತ್ತಾ ಇರುತ್ತಾಳೆ.
ಸಹಾಯ ಹಸ್ತ ಚಾಚಿದ ಪಾರು
ಒಟ್ಟಿನಲ್ಲಿ ರಶ್ಮಿ ಮದುವೆ ನಡೆಯುವುದಿಲ್ಲ ಎಂಬ ಸೂಚನೆ ಲಭ್ಯವಾಗುತ್ತಿದೆ. ರಶ್ಮಿ ಮದುವೆಯಾಗುವ ಗಂಡು ಒಳ್ಳೆಯವನಲ್ಲ ಅವರ ದರ್ಪ ಹಾಗೂ ಹಣದ ಆಸೆ ತೀರುವುದಲ್ಲ ಎಂದು ಸೂಕ್ಷ್ಮವಾಗಿ ಗೊತ್ತಾದರೂ ಶಿವು, ರಶ್ಮಿಗೆ ಬೇಸರ ಆಗಬಾರದು ಎಂಬ ಕಾರಣಕ್ಕೆ ಈ ಮದುವೆಯನ್ನು ಮುಂದುವರಿಸುತ್ತಿದ್ದಾನೆ. ಪಾರು ಕೂಡ ಸಹಾಯ ಮಾಡುತ್ತಿದ್ದಾಳೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
