Annayya Serial: ಶಿವು, ಪಾರು ಆಸೆ ನೆರವೇರದು ಎಂಬ ಸೂಚನೆ ಕೊಟ್ಟ ದೇವರು; ಪಂಚಾಯ್ತಿಯಲ್ಲಿ ಕುಳಿತ ವೀರಭದ್ರ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು, ಶಿವು ಹತ್ತಿರ ತಾನು ಪ್ರೀತಿ ಮಾಡುತ್ತಿರುವ ವಿಚಾರವನ್ನು ಹಂಚಿಕೊಳ್ಳಬೇಕು ಎಂದುಕೊಂಡಿದ್ದಾಳೆ. ಆದರೆ, ವೀರಭದ್ರ ಬೇರೆಯದೇ ಉಪಾಯ ಮಾಡಿದ್ದಾನೆ.

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ವೀರಭದ್ರನಿಗೆ ಪಾರು ಮತ್ತು ಶಿವು ಇಷ್ಟ ಇಲ್ಲದೆ ಸಂಸಾರ ಮಾಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತಿರಲಿಲ್ಲ. ಆದರೆ, ಲಾಯರ್ ಆಡಿದ ಮಾತಿನಿಂದಾಗಿ ವೀರಭದ್ರನಿಗೆ ಸತ್ಯ ಗೊತ್ತಾಗಿದೆ. ಹಾಗಾಗಿ ವೀರಭದ್ರ ಇನ್ನಷ್ಟು ಖುಷಿಯಲ್ಲಿದ್ದಾನೆ. ಹೇಗಾದರೂ ಮಾಡಿ ತನ್ನ ಮಗಳು ಹಾಗೂ ಅಳಿಯನನ್ನು ಬೇರೆ ಮಾಡುವುದೇ ಅವನ ಉದ್ದೇಶ ಆಗಿತ್ತು. ಆದರೆ, ಪಾರು ಮತ್ತು ಶಿವು ದೇವಸ್ಥಾನಕ್ಕೆ ಹೋಗಿದ್ದಾರೆ. ಪಾರುಗೆ ತಾನು ತನ್ನ ಪ್ರೀತಿಯನ್ನು ಹೇಳಿಕೊಂಡು ಇನ್ನು ಮುಂದಿನ ದಿನದಲ್ಲಿ ಚೆನ್ನಾಗಿ ಸಂಸಾರ ಮಾಡಬೇಕು ಎಂದು ಅಂದುಕೊಂಡಿದ್ದಾಳೆ. ಅಷ್ಟರಲ್ಲಿ ಆಪತ್ತು ಕಾದಿದೆ.
ದೇವಸ್ಥಾನಕ್ಕೆ ಬಂದ ಶಿವು, ಪಾರು
ಶಿವು ಹಾಗೂ ಪಾರು ದೇವಸ್ಥಾನಕ್ಕೆ ಬಂದಿರುತ್ತಾರೆ. ಪಾರು, ತುಂಬಾ ಖುಷಿಯಿಂದ ದೇವರ ಮುಂದೆ ನಿಂತು ಪ್ರಾರ್ಥನೆ ಮಾಡುತ್ತಾಳೆ. ನಂತರ ಪ್ರಸಾದ ರೂಪದಲ್ಲಿ ಸಿಕ್ಕಿದ ಮಲ್ಲಿಗೆ ಹೂವನ್ನು ಶಿವು ಹತ್ತಿರ ಮುಡಿಸಲು ಕೇಳುತ್ತಾಳೆ. ಶಿವು ಕೂಡ ಮುಡಿಸುತ್ತಾನೆ. ಆದರೆ ಮುಡಿಸುವ ಹೂವು ಬಿದ್ದು ಹೋಗುತ್ತದೆ. ದೇವಸ್ಥಾನದ ಅರ್ಚಕರು ಇನ್ನೂ ಒಂದು ವಿಷಯವನ್ನು ಹೇಳಿದ್ದಾರೆ. ಅವರು ಹೇಳಿದ ಪ್ರಕಾರ ಶಿವು ಹಾಗೂ ಪಾರು ಬೇಡಿಕೊಂಡ ವಿಚಾರ ನೆರವೇರುವುದಿಲ್ಲ. ಯಾಕೆಂದರೆ ದೇವರ ಎಡ ಭಾಗದಿಂದ ಬಿದ್ದಿದೆ. ದೇವಸ್ಥಾನದಿಂದ ವಾಪಸ್ ಹೋಗುವಾಗ ಮುಡಿಗಿದ್ದ ಹೂವು ಕೂಡ ಬಿದ್ದು ಹೋಗಿತ್ತು.
ವೀರಭದ್ರನ ಹೊಸ ಉಪಾಯ
ವೀರಭದ್ರನೊಂದು ಉಪಾಯ ಮಾಡಿರುತ್ತಾನೆ. ಪಂಚಾಯ್ತಿ ಕರೆದು ಊರಿನವರೆಲ್ಲರನ್ನು ಸೇರಿಸಿರುತ್ತಾನೆ. ಊರವರನ್ನೆಲ್ಲ ಸೇರಿಸಿದರೂ ಮುಖ್ಯವಾಗಿ ಶಿವು ಹಾಗೂ ಪಾರು ಬರಬೇಕು ಎಂದು ಕಾಯುತ್ತಾ ಇರುತ್ತಾನೆ. ಪಾರು ಹಾಗೂ ಶಿವು ಪಂಚಾಯ್ತಿ ನಡೆಯುವಲ್ಲಿ ತಲುಪಿದಾ 'ಏನ್ ಮಕ್ಳಾ ನೀವ್ ಈಗ ಮಾಡಿಕೊಂಡಿರೋದು?" ಎಂದು ಪ್ರಶ್ನೆ ಮಾಡುತ್ತಾನೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
