Annayya Serial: ಹಾಲು ಬೆಲ್ಲದಂತ ಶಿವು ಸಂಸಾರಕ್ಕೆ ಹುಳಿ ಹಿಂಡಲು ತಯಾರಾದ ವೀರಭದ್ರ; ಪಾರು ಜೀವನಕ್ಕೆ ಅಪ್ಪನೇ ಅಪಾಯ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮತ್ತು ಶಿವು ಸಂಸಾರ ಸರಿ ಹೋಗುತ್ತೆ ಎನ್ನುವಷ್ಟರಲ್ಲಿ ಮತ್ತೊಂದು ಬಿರುಗಾಳಿ ಬೀಸುವ ಸೂಚನೆ ಸಿಕ್ಕಿದೆ. ವೀರಭದ್ರನಿಗೆ ಹೊಸ ಸತ್ಯದ ಅರಿವಾಗಿದೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರು ಈಗ ತಮಗೆ ಬಂದ ಎಲ್ಲ ಕಷ್ಟಗಳಿಗೂ ಪರಿಹಾರ ಕಂಡುಕೊಂಡಿದ್ದಾರೆ. ಹರಾಜಾಗುತ್ತಿದ್ದ ಮನೆಯನ್ನು ಪಾರು ಉಳಿಸಿಕೊಟ್ಟಿದ್ದಾಳೆ. ರಶ್ಮಿ ಹಾಗೂ ಸೀನ ಕೂಡ ಖುಷಿಯಿಂದ ಮನೆಗೆ ಬಂದು ಹೋಗಿದ್ದಾರೆ. ಹೀಗಿರುವಾಗ ಅಣ್ಣಯ್ಯನಿಗೆ ನೆಮ್ಮದಿ ಸಿಕ್ಕಿದೆ. ಪಾರು ತನ್ನ ಕೋಣೆಯಲ್ಲಿ ಬಟ್ಟೆ ಸರಿ ಮಾಡುತ್ತಾ ಇರುತ್ತಾಳೆ. ಆಗ ಅವಳ ಜತೆ ಮಾತಾಡಬೇಕು ಎಂದು ಶಿವು ಅಂದುಕೊಳ್ಳುತ್ತಾನೆ. ತಾನೂ ಕೋಣೆಯೊಳಗಡೆ ಹೋಗಿ “ಪಾರು, ಅಂತು ನಮಗೆ ಬಂದ ಕಷ್ಟಗಳೆಲ್ಲ ಪರಿಹಾರ ಆಯ್ತು ಅಲ್ವ?” ಎಂದು ಕೇಳುತ್ತಾನೆ. ಆಗ ಪಾರು ಹೌದು ಎನ್ನುತ್ತಾ “ಮನೆ ಉಳಿತಲ್ಲಾ ಆಗ ಖುಷಿಯಾಗಿ ನೀನು ನನ್ನ ತಬ್ಬಿಕೊಂಡ್ಯಲ್ಲ ಮಾವ, ಆಗ ನಿನಗೇನು ಅನಿಸಿಲ್ವಾ?” ಎಂದು ಕೇಳುತ್ತಾಳೆ. ಆಗ ಶಿವು ಮುಖ ಸಣ್ಣಗಾಗುತ್ತದೆ.
ಅವನು ಆಗ ಆದ ಖುಷಿಯಲ್ಲಿ ಪರಿವೆಯೇ ಇಲ್ಲದೆ ಹೋಗಿ ಎಲ್ಲರ ಎದುರು ಪಾರುವನ್ನು ತಬ್ಬಿಕೊಂಡಿರುತ್ತಾನೆ. ಆ ನಂತರದಲ್ಲಿ ಪಾರು ಖುಷಿ ಆದರೂ ಅದನ್ನು ಹೊರಗಿನಿಂದ ತೋರಿಸಿಕೊಂಡಿರುವುದಿಲ್ಲ. ಇನ್ನು ಇತ್ತ ವೀರಭದ್ರನಿಗೆ ಶಿವು ಮನೆಯಲ್ಲಿ ನೆಮ್ಮದಿ ಇರುವುದು ಇಷ್ಟ ಇರುವುದಿಲ್ಲ. ಹೇಗಾದರೂ ಮಾಡಿ ಶಿವು ಸಂಸಾರ ಹಾಳು ಮಾಡಬೇಕು. ಅವನಿಂದ ಆಸ್ತಿ ಕಿತ್ತುಕೊಳ್ಳಬೇಕು ಎಂದು ಪದೇ ಪದೇ ಪ್ರಯತ್ನ ಮಾಡುತ್ತಲೇ ಇರುತ್ತಾನೆ. ಅದಾದ ನಂತರದಲ್ಲಿ ಶಿವುವನ್ನು ಮತ್ತೆ ಹೇಳಿ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಸುವುದು ಎಂಬ ಹೊಸ ಉಪಾಯ ಮಾಡಲು ಆರಂಭಿಸಿದ್ದಾನೆ.
ವೀರಭದ್ರನಿಗೆ ಗೊತ್ತಾಯ್ತು ಸತ್ಯ
ವೀರಭದ್ರನಿಗೆ ಶಿವು ಹಾಗೂ ಪಾರು ಇಬ್ಬರು ಮದುವೆಯಾದಾಗಲೇ ದೂರ ಆಗಲು ನಿಧಾರ ಮಾಡಿದ್ದರು ಎನ್ನುವ ವಿಚಾರ ತಿಳಿದಿರುವುದಿಲ್ಲ. ಆ ವಿಚಾರ ತಿಳಿಯುತ್ತಲೂ ಇರಲಿಲ್ಲ. ಆದರೆ, ಲಾಯರ್ ಕಾಲ್ ಮಾಡಿ ಎಲ್ಲ ವಿಚಾರವನ್ನು ಹೇಳುತ್ತಾನೆ.ಆಗ ವೀರಭದ್ರನಿಗೆ ಶಾಕ್ ಆಗುತ್ತದೆ. ಜತೆಗೆ ಖುಷಿಯೂ ಆಗುತ್ತದೆ. ಅವರಿಬ್ಬರನ್ನು ಬೇರೆ ಮಾಡಲು ನಾನು ಪ್ರಯತ್ನ ಪಟ್ಟಿದ್ದೆ. ಆದರೆ, ಇದು ಇಷ್ಟು ಸುಲಭ ಎಂದು ಗೊತ್ತಿರಲಿಲ್ಲ ಅವನಿಗೆ
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
