Annayya Serial: ಚಿನ್ನದ ಪದಕ ಗೆದ್ದ ಪಾರುಗೆ ಶುಭಾಶಯ ಕೋರಿದ ಶಿವು, ಸಿದ್ದಾರ್ಥ್‌ ಹೇಳಿದಂತೆಲ್ಲ ಮಾಡ್ತಾನಾ ಅಣ್ಣಯ್ಯ?-annayya serial today episode september 16 siddharth asks shivanna to take parvathi to mysore smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಚಿನ್ನದ ಪದಕ ಗೆದ್ದ ಪಾರುಗೆ ಶುಭಾಶಯ ಕೋರಿದ ಶಿವು, ಸಿದ್ದಾರ್ಥ್‌ ಹೇಳಿದಂತೆಲ್ಲ ಮಾಡ್ತಾನಾ ಅಣ್ಣಯ್ಯ?

Annayya Serial: ಚಿನ್ನದ ಪದಕ ಗೆದ್ದ ಪಾರುಗೆ ಶುಭಾಶಯ ಕೋರಿದ ಶಿವು, ಸಿದ್ದಾರ್ಥ್‌ ಹೇಳಿದಂತೆಲ್ಲ ಮಾಡ್ತಾನಾ ಅಣ್ಣಯ್ಯ?

Zee Kannada Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಸಿದ್ದಾರ್ಥನ ಮೀಟ್ ಆಗಬೇಕು ಎಂದು ಬೇಡಿಕೊಂಡಿದ್ದಾಳೆ. ಆದರೆ ಇದು ಅಣ್ಣಯ್ಯನಿಗೆ ಕಷ್ಟದ ಸಮಯ. ಅವಳನ್ನು ಹೇಗೆ ಇನ್ನೊಬ್ಬನ ಹತ್ತಿರ ಬಿಡೋದು ಎಂದು ಅವನು ಮಾತ್ರ ತುಂಬಾ ಕಂಗಾಲಾಗಿದ್ದಾನೆ. ಮುಂದೆ ಏನಾಗಿದೆ ಗಮನಿಸಿ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ

ಎಲ್ಲರೂ ಸೀರೆಕೊಳ್ಳಲು ಹೋಗಿರುತ್ತಾರೆ. ಪಾರುಗೆ ಇಷ್ಟ ಇಲ್ಲದ ಎಷ್ಟೋ ವಿಷಯಗಳು ಅಂದು ಅಲ್ಲಿ ನಡೆಯುತ್ತದೆ. ಆದರೂ ಅವಳು ಅದೆಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಮನೆಯಿಂದ ಹೊರಗಡೆ ಹೋಗೋಕೆ ಸಿಗೋದೆ ಪುಣ್ಯ ಎಂದು ಅವಳಿಗೆ ಅನಿಸುತ್ತದೆ. ಅವಳ ತಂದೆ ಹಾಗೂ ಅಣ್ಣನ ಕಣ್ಣು ತಪ್ಪಿಸಿ ತಾನು ಪ್ರೀತಿಸಿದ ಹುಡುಗನನ್ನು ಮದುವೆ ಆಗಬೇಕು ಎಂದು ಅವಳು ಆಸೆ ಪಟ್ಟಿದ್ದಾಳೆ. ಅವಳಿಗೆ ಈಗ ಕೇವಲ ಬೇಕಾಗಿರೋದು ಶಿವು ಸಹಾಯ. ಅದಕ್ಕಾಗಿ ಅವಳು ಅವನನ್ನು ತುಂಬಾ ಅವಲಂಬಿಸಿಕೊಂಡಿದ್ದಾಳೆ. ಇಲ್ಲೂ ಹಾಗೇ ಆಗಿದೆ.

ಪಾರು ಮನದಾಸೆ ಏನು?

ಸೀರೆ ಅಂಗಡಿಯಲ್ಲಿ ಸೀರೆಯನ್ನು ಕಾಣಿಸುತ್ತಿರುವಾಗ ಅವಳು ಹಲವಾರು ಸಾರಿ ಸಿದ್ಧಾರ್ಥಗೆ ಕಾಲ್ ಮಾಡಿದ್ದಾಳೆ. ಆದರೆ ಅವನು ಮಾತ್ರ ಕಾಲ್ ರಿಸೀವ್ ಮಾಡ್ತಾ ಇರೋದಿಲ್ಲ. ಅವಳಿಗೆ ಗಾಬರಿ ಆಗುತ್ತದೆ. ನಂತರ ಇತ್ತ ಸೋಮೇಗೌಡ ಕೂಡ ಅವಳನ್ನು ತುಂಬಾ ಕೆಟ್ಟದಾಗಿ ನೋಡುತ್ತಾ ಇರುತ್ತಾನೆ. ನಂತರ ಅವಳು ಅಣ್ಣಯ್ಯನ ಸಹಾಯ ಪಡೆದುಕೊಂಡು ಅವನಿಗೆ ಕಾಲ್ ಮಾಡುತ್ತಾಳೆ. ಅವನು ಅವಳನ್ನು ಕರೆದುಕೊಂಡು ಮೈಸೂರಿಗೆ ಬರುವಂತೆ ಕೇಳುತ್ತಾನೆ.

ಶಿವು ಸಿದ್ದಾರ್ಥ್‌ ಮಾತು ಕೇಳ್ತಾನಾ?

ಆಗ ಶಿವುಗೆ ಬೇಸರ ಮತ್ತು ಶಾಕ್ ಎರಡೂ ಆಗುತ್ತದೆ. ಆದರೆ ಅವನು ಹೇಗೋ ಸಹಾಯ ಮಾಡುತ್ತಾನೆ. ಇನ್ನು ಇತ್ತ ಅವಳಿಗೆ ಮೆಡಿಕಲ್ ಅಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಚಿನ್ನದ ಪದಕ ಸಿಕ್ಕಿರುತ್ತದೆ. ಆದರೆ ಮನೆಯಲ್ಲಿ ಅದರ ಬಗ್ಗರ ಯಾರೂ ಅವಳಿಗೆ ಗೌರವ ನೀಡುತ್ತಾ ಇಲ್ಲ. ಆದರೆ ಶಿವು ಅವಳಿಗಾಗಿ ಸ್ವೀಟ್ ತೆಗೆದುಕೊಂಡು ಬಂದಿದ್ದಾನೆ.

ಪಾರುಗೆ ಬಂಗಾರದ ಪದಕ
ಪಾರುಗೆ ಬಂಗಾದರ ಪದಕ ಸಿಕ್ಕಿದ ವಿಷಯ ಪೇಪರ್‌ನಲ್ಲಿ ಬಂದಿರುತ್ತದೆ. ಅದನ್ನು ನೋಡಿ ಶಿವು ಅವಳಿದ್ದಲ್ಲಿಗೆ ಬರುತ್ತಾನೆ. ಖುಷಿಯಿಂದ “ಚಿನ್ನದ ಪದಕ ಗೆದ್ದಿರುವ ಚಿನ್ನದಂತ ವಿದ್ಯಾವಂತೆಗೆ” ಶುಭಾಶಯಗಳು ಎನ್ನುತ್ತಾ ಅವನು ಸ್ವೀಟ್ ತಿನ್ನಿಸುತ್ತಾನೆ. ಆದರೆ ಅವಳು ತಿನ್ನೋದಿಲ್ಲ. ಬದಲಾಗಿ ಬೇಸರ ಮಾಡಿಕೊಳ್ಳುತ್ತಾಳೆ. ಹೇಗಾದರು ಮಾಡಿ ನನ್ನ ಸಿದ್ದಾರ್ಥ್‌ ಇದ್ದಲ್ಲಿಗೆ ಕರೆದುಕೊಂಡು ಹೋಗು ಎನ್ನುತ್ತಾಳೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

mysore-dasara_Entry_Point