ಅಣ್ಣಯ್ಯ ಧಾರಾವಾಹಿ: ಪಾರುಗೆ ಅಪ್ಪನಿಂದ ಕಪಾಳಮೋಕ್ಷ, ಹೆದರಿನಿಂತ ಶಿವು; ಇದ್ದ ಸ್ವಲ್ಪ ಸ್ವಾತಂತ್ರ್ಯವೂ ಕಳೆದು ಹೋಯ್ತು
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿ: ಪಾರುಗೆ ಅಪ್ಪನಿಂದ ಕಪಾಳಮೋಕ್ಷ, ಹೆದರಿನಿಂತ ಶಿವು; ಇದ್ದ ಸ್ವಲ್ಪ ಸ್ವಾತಂತ್ರ್ಯವೂ ಕಳೆದು ಹೋಯ್ತು

ಅಣ್ಣಯ್ಯ ಧಾರಾವಾಹಿ: ಪಾರುಗೆ ಅಪ್ಪನಿಂದ ಕಪಾಳಮೋಕ್ಷ, ಹೆದರಿನಿಂತ ಶಿವು; ಇದ್ದ ಸ್ವಲ್ಪ ಸ್ವಾತಂತ್ರ್ಯವೂ ಕಳೆದು ಹೋಯ್ತು

ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರುಗೆ ಪಾರು ತಂದೆ ಹೊಡೆದಿದ್ದಾರೆ. ಶಿವು ಬಗ್ಗೆ ಇನ್ನೂ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. ಅಣ್ಣಯ್ಯ ಪಾರು ಜೊತೆಗೂಡಿಕೊಂಡು ಸಿದ್ದಾರ್ಥನ ಬರ್ತಡೇ ಪಾರ್ಟಿಯಲ್ಲಿ ಸಿಕ್ಕಿಬಿದ್ದಂತಾಗಿದೆ.

ಪಾರು, ಶಿವು
ಪಾರು, ಶಿವು

ಅಣ್ಣಯ್ಯ ಪಾರು ಜೊತೆಗೂಡಿಕೊಂಡು ಸಿದ್ದಾರ್ಥನ ಬರ್ತಡೇ ಪಾರ್ಟಿಯಲ್ಲಿ ಇರುತ್ತಾನೆ. ತಾನೇ ಅಲ್ಲಿ ಎಲ್ಲಾ ಕೆಲಸ ಮಾಡುತ್ತಾಳೆ. ಅವಳ ಖುಷಿ ನೋಡಿ ಇವನಿಗೂ ಸಮಾಧಾನ ಆಗುತ್ತದೆ. ಇನ್ನು ಇವಳು ನನಗೆ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಅವನು ಅವಳಿಗೆ ಸಹಾಯ ಮಾಡುತ್ತಾನೆ. ಆದರೆ ಮನೆಯಲ್ಲಿ ಗಾಬರಿಯಾಗಿರುತ್ತಾರೆ. ಪಾರು ತನ್ನ ಫೋನನ್ನು ಸ್ವಿಚ್ಆಫ್‌ ಮಾಡಿಕೊಂಡಿರುತ್ತಾಳೆ. ಇದರಿಂದಾಗಿ ಮನೆಯವರಿಗೆ ಇನ್ನೂ ಗಾಬರಿಯಾಗುತ್ತದೆ. ನಂತರ ಪಾರುವಿನ ಅಣ್ಣ ಹೋಗಿ ಶಿವು ಹಾಗೂ ಇನ್ನಿತರರಿಗೆ ಹೊಡೆಯುತ್ತಾನೆ. ಇನ್ನು ಹಲವಾರು ಜನ ಬಂದು ಶಿವು ಮೇಲೆ ಅಟ್ಯಾಕ್ ಮಾಡುತ್ತಾರೆ. ಆದರೆ ಯಾಕೆ ಅವರೆಲ್ಲ ಅಟ್ಯಾಕ್ ಮಾಡಿದ್ದಾರೆ ಎಂದು ಅವನಿಗೆ ಗೊತ್ತಾಗುವುದಿಲ್ಲ.

ಶಿವು ಮೇಲೆ ಅಟ್ಯಾಕ್

ಪಾರು ಬೇಕು ಎಂದೇ ಶಿವ ಕುಡಿದಿದ್ದಾನೆ ಎಂದುಕೊಂಡು ಅವನಿಗೆ ಬೈದಿರುತ್ತಾಳೆ. ಆದರೆ ಸಿದ್ದಾರ್ಥನ ಫ್ರೆಂಡ್ಸ್ ಅವನಿಗೆ ಒತ್ತಾಯಪೂರ್ವಕವಾಗಿ ಕೊಡಿಸಿರುತ್ತಾರೆ. ಈ ವಿಷಯ ತಿಳಿದ ನಂತರ ಪಾರು ಅವನ ಬಳಿ ಸಾರಿ ಕೇಳುತ್ತಾಳೆ. ಆನಂತರ ಅವರಿಬ್ಬರು ಪಾರ್ಟಿಯಿಂದ ರಾತ್ರೋರಾತ್ರಿ ಮನೆಗೆ ಬರಬೇಕಾಗುತ್ತದೆ. ಇತ್ತ ಮನೆಯಲ್ಲಿ ತಂಗಿಯರೆಲ್ಲ ಸೇರಿಕೊಂಡು ಸಿನಿಮಾ ನೋಡುತ್ತಾ ಇರುತ್ತಾರೆ. ಒಂದಿಷ್ಟು ತಿಂಡಿಗಳನ್ನು ಇಟ್ಟುಕೊಂಡು ಅಣ್ಣ ಬರುವವರೆಗೂ ನಾವು ಮಜಾ ಮಾಡಬಹುದು ಎಂದುಕೊಂಡಿರುತ್ತಾರೆ. ಇವರೇನು ಮಜಾ ಮಾಡಿದರು ಆದರೆ ಶಿವಯ್ಯನಿಗೆ ಈಗ ತುಂಬಾ ತೊಂದರೆ ಕಾದಿದೆ.

ಪಾರುಗೆ ಕಪಾಳಮೋಕ್ಷ

ಪಾರು ಮನೆಗೆ ಬರುವಷ್ಟರಲ್ಲಿ ಪಾರು ತಂದೆ ಹೊರಗಡೆ ಕುರ್ಚಿ ಹಾಕಿ ಕುಳಿತಿದ್ದಾರೆ. ಪಾರು ಒಳಗಡೆ ಹೋಗಲು ನೋಡುತ್ತಾಳೆ. ಆಗ ತಡೆಯುತ್ತಾರೆ. ಯಾಕೆ ಇಷ್ಟು ಹೊತ್ತು ಎಂದು ಪ್ರಶ್ನೆ ಮಾಡುತ್ತಾರೆ. ಹಾಗೆ ಸೀದಾ ಅವಳ ಹತ್ತಿರ ಬಂದು ಅವಳ ಕೆನ್ನೆಗೆ ಏಟು ಕೊಡುತ್ತಾರೆ. ಇನ್ನು ನೀನು ಮದುವೆಯಾಗುವವರೆಗೆ ಮನೆಯಿಂದ ಹೊರಗಡೆ ಕಾಲಿಡುವ ಪ್ರಸಂಗವೇ ಇಲ್ಲ ಎಂದು ಅವಳಿಗೆ ಬೈದಿದ್ದಾರೆ. ಇದ್ದ ಸ್ವಾತಂತ್ರ್ಯವನ್ನು ಅವಳಿಗ ಕಳೆದುಕೊಂಡ ಆಗಿದೆ

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner