Annayya Serial: ಕ್ಷಮಿಸು ಎನ್ನುತ್ತಲೇ ಪಾರುಗೆ ತಾಳಿ ಕಟ್ಟಲು ರೆಡಿಯಾದ ಶಿವು, ಮದುವೆ ಮನೆಯಲ್ಲಿ ಹರಿಯಿತು ಕಣ್ಣೀರಿನ ಕೋಡಿ
ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮದುವೆ ಆಗ್ತಾ ಇದೆ. ಆದರೆ ಮದುವೆ ಗಂಡು, ಹೆಣ್ಣಿಗೆ ಈ ಮದುವೆ ಇಷ್ಟವೇ ಇಲ್ಲ. ಕ್ಷಮಿಸು ಎನ್ನುತ್ತಲೇ ಪಾರುಗೆ ತಾಳಿ ಕಟ್ಟಲು ಶಿವು ರೆಡಿಯಾಗಿದ್ದಾನೆ. ಪಾರು ಭಯ ಹೆಚ್ಚುತ್ತಲೇ ಇದೆ.

ಪಾರು ಪಡುತ್ತಿರುವ ನರಕ ಯಾತನೆ ಯಾವ ಹೆಣ್ಣಿಗೂ ಬೇಡ. ಆ ರೀತಿ ಮದುವೆ ಮಂಟಪದಲ್ಲಿ ಅಳುತ್ತಿದ್ದಾಳೆ. ಆದರೂ ಅವಳ ತಂದೆ ಅವಳ ಕಣ್ಣೀರಿಗೆ ಕರಗುತ್ತಿಲ್ಲ. ಇತ್ತ ಶಿವು ಅಂದರೆ ಅಣ್ಣಯ್ಯ ಕೂಡ ಕಣ್ಣೀರಿಡುತ್ತಿದ್ದಾನೆ. ನಾನು ಮತ್ತು ಪಾರು ಓಡಿಹೋಗಿದ್ದೇವೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಇನ್ನು ಮದುವೆಯಾಗುತ್ತೇನೆ ಎಂದಿದ್ದ ಸೋಮೇಗೌಡ ಕೂಡ ಅಲ್ಲಿಂದ ಓಡಿ ಹೋಗಿದ್ದಾನೆ. ಈಗ ನಾನು ಮದುವೆಯಾಗದೆ ಇದ್ದರೆ ಪಾರುಗೆ ಜೀವನ ಪರ್ಯಂತ ಕಳಂಕ ಕಟ್ಟಿಕೊಂಡಿರುತ್ತದೆ. ನಾನು ಪಾರು ಓಡಿ ಹೋಗಿದ್ದೆವು ಎಂಬ ಕಳಂಕವನ್ನು ಹೊತ್ತುಕೊಂಡು ನಾನು ಬದುಕಿದರೂ ಕೂಡ ಪಾರು ಬದುಕಲಾರಳು. ಹಾಗಾಗಿ ಈಗ ನಾನು ತಾಳಿ ಕಟ್ಟುವುದೇ ಸರಿ ಎಂದು ಅಣ್ಣಯ್ಯ ಅಂದುಕೊಳ್ಳುತ್ತಾನೆ.
ಶಿವು ಆಲೋಚನೆ
“ಮುಂದೊಂದು ದಿನ ಸಿದ್ದಾರ್ಥ್ ಬಂದರೂ ನಾನು ಹೇಗಾದರೂ ಪಾರುವನ್ನು ಅವರಿಗೆ ಒಪ್ಪಿಸಬಹುದು. ಆದರೆ ನಾನು ಈಗ ತಾಳಿ ಕಟ್ಟದೇ ಇದ್ದರೆ ಸೋಮೆಗೌಡನಂತ ಇನ್ನೊಬ್ಬನನ್ನು ಹುಡುಕಿ ತಾಳಿ ಕಟ್ಟಿಸಿ ಮಾವ ಅವಳ ಬಾಳನ್ನು ಹಾಳು ಮಾಡುತ್ತಾನೆ”. ಎಂದು ಆಲೋಚನೆ ಮಾಡುತ್ತಾ ಕೈಯಲ್ಲಿ ಹೂವಿನ ಹಾರ ಹಿಡಿದುಕೊಂಡಿರುತ್ತಾನೆ.
ವೀರಭದ್ರನ ಕೋಪ
ಇನ್ನು ವೀರಭದ್ರನಂತು ನಿಜವಾಗಿಯೂ ವೀರಭದ್ರನ ಅವತಾರವನ್ನೇ ತಾಳಿ ತನ್ನ ಕೆಂಗಣ್ಣಿನಿಂದ ಎಲ್ಲರನ್ನು ಹೆದರಿಸಿ ಜೋರಾಗಿ ಮಾತನಾಡಿ, ಗದರಿ ಮದುವೆ ಮನೆಯಲ್ಲಿ ಏನಾಗುತ್ತಿದೆ ಎಂಬುದನ್ನು ಎಲ್ಲರೂ ನೋಡಿ ಭಯಪಡುವಂತೆ ಮಾಡುತ್ತಾನೆ. ಇನ್ನು ಪಾರು ತಾಯಂದಿರು ಬಾಯಿ ಮುಚ್ಚಿಕೊಂಡು ಸುಮ್ಮನೆ ಇರುತ್ತಾರೆ. ಗಂಡ ಹೇಳಿದ ನಿರ್ಧಾರವೇ ಅಂತಿಮ ಎಂದು ಅವರು ಅಂದುಕೊಂಡು ಇರುತ್ತಾರೆ. ಇನ್ನು ಪಾರು ಕ್ಷಣ ಕ್ಷಣವು ದೇವರೇ ಇನ್ನೊಂದು ಚೂರು ಸಮಯ ಕೊಡು ಎಂಬ ರೀತಿಯಲ್ಲಿ ಕಣ್ಣೀರಿಡುತ್ತಾ ಇರುತ್ತಾಳೆ.
ಹಬ್ಬದ ಬಲಿ ಕುರಿಯಂತಾದ ಪಾರು
ಹಬ್ಬಕ್ಕೆ ಬಲಿ ಕೊಡಲು ತಂದ ಕುರಿಯ ರೀತಿಯಲ್ಲಿ, ಅವಳು ಕೂಡ ಮದುವೆ ಹೆಣ್ಣಾಗಿ ರೆಡಿಯಾಗಿ ತನ್ನ ಬಾಳನ್ನು ತನ್ನ ಕೈಯ್ಯಾರೆ ಹಾಳು ಮಾಡಿಕೊಳ್ಳುತ್ತಿದ್ದಾಳೆ. ಎಲ್ಲರ ಒತ್ತಾಯದ ಮೇರೆಗೆ ಅಷ್ಟೊಂದು ಜನ ಸಮೂಹದ ಎದುರು ಈಗ ಅವಳ ಕತ್ತಿಗೆ ತಾಳಿ ಕಟ್ಟಲೇ ಬೇಕಾಗಿರುತ್ತದೆ. ಇನ್ನು ಶಿವು ತಂಗಿಯರಿಗೆ ಇದು ತುಂಬಾ ಖುಷಿ ಕೊಟ್ಟಿದೆ. ಅಂತೂ ಅಣ್ಣ, ಅತ್ತಿಗೆ ಮದುವೆ ಆಗುತ್ತಾ ಇದ್ದಾರೆ ಎಂದು ಹರ್ಷದಿಂದಿದ್ದಾರೆ. ಅವರಿಗೆ ಆನಂದ ಭಾಷ್ಪ ಬಂದಿದೆ. ಒಟ್ಟಿನಲ್ಲಿ ಇಡೀ ಮದುವೆ ಮನೆ ಕಣ್ಣೀರಿನಿಂದ ತೊಳೆದು ಹೋಗಿದೆ. ಇನ್ನು ಮಾದಪ್ಪಣ್ಣ ಬಂದು “ಏನು ಆಗುವುದಿಲ್ಲ ತಲೆ ಕೆಡಿಸಿಕೊಳ್ಳಬೇಡ ತಾಳಿ ಕಟ್ಟು. ಮುಂದೆ ಎಲ್ಲವೂ ಶುಭವಾಗುತ್ತದೆ” ಎಂದು ಹೇಳುತ್ತಾ ಎಲ್ಲರಿಗೂ ಅಕ್ಷತೆ ನೀಡುತ್ತಾನೆ.
ಕೆಲವರಿಗೆ ಸಂತೋಷವಾದರೆ ಇನ್ನು ಕೆಲವರಿಗೆ ಬೇಸರ ಮಡುಗಟ್ಟಿರುತ್ತದೆ ಹೀಗೆ ಮದುವೆಯ ಪ್ರಸಂಗ ನಡೆದಿದೆ. ಪಾರು ಶಿವು ಇಬ್ಬರು ಕಣ್ಣೀರಿಡುತ್ತಾ ಇದ್ದಾರೆ ಮುಂದಿನ ಬದುಕು ಏನಾಗುತ್ತದೆ ಎಂಬ ಆಲೋಚನೆಯಲ್ಲಿದ್ದಾರೆ. ಯಾಕೆಂದರೆ ಇದು ಯಾವುದೇ ಪೂರ್ವ ನಿರ್ಧಾರಿತ ಮದುವೆಯೂ ಅಲ್ಲ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.