Annayya Serial: ಇಷ್ಟವಿಲ್ಲದ ಮದುವೆಯಾದ್ರೂ ಬಾಳ್ವೆ ಮಾಡಲೇಬೇಕು; ಅಣ್ಣಯ್ಯ, ಪಾರು ಜೋಡಿ ನೋಡಿ ತಂಗಿಯರು ಫುಲ್ ಖುಷ್
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಇಷ್ಟವಿಲ್ಲದ ಮದುವೆಯಾದ್ರೂ ಬಾಳ್ವೆ ಮಾಡಲೇಬೇಕು; ಅಣ್ಣಯ್ಯ, ಪಾರು ಜೋಡಿ ನೋಡಿ ತಂಗಿಯರು ಫುಲ್ ಖುಷ್

Annayya Serial: ಇಷ್ಟವಿಲ್ಲದ ಮದುವೆಯಾದ್ರೂ ಬಾಳ್ವೆ ಮಾಡಲೇಬೇಕು; ಅಣ್ಣಯ್ಯ, ಪಾರು ಜೋಡಿ ನೋಡಿ ತಂಗಿಯರು ಫುಲ್ ಖುಷ್

ಅಣ್ಣಯ್ಯ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರುವನ್ನು ಅಣ್ಣಯ್ಯನ ತಂಗಿಯರು ಮನೆ ತುಂಬಿಸಿಕೊಳ್ಳುತ್ತಾ ಇದ್ದಾರೆ. ಶಿವು ಹಾಗೂ ಪಾರು ಇಬ್ಬರೂ ತುಂಬಾ ಗೊಂದಲದಲ್ಲಿ ಇದ್ದಾರೆ. ಮನೆತುಂಬಿಸಿಕೊಳ್ಳುವ ಶಾಸ್ತ್ರವೂ ಈಗ ಮುಗಿದಿದೆ.ಇಷ್ಟವಿಲ್ಲದ ಮದುವೆಯಾದ್ರೂ ಬಾಳ್ವೆ ಮಾಡಲೇಬೇಕು

 ಇಷ್ಟವಿಲ್ಲದ ಮದುವೆಯಾದ್ರೂ ಬಾಳ್ವೆ ಮಾಡಲೇಬೇಕು
ಇಷ್ಟವಿಲ್ಲದ ಮದುವೆಯಾದ್ರೂ ಬಾಳ್ವೆ ಮಾಡಲೇಬೇಕು (ಝೀ ಕನ್ನಡ)

ಶಿವನ ಬಾಳು ಬೆಳಗಲು ಪಾರು ಬಂದಾಯ್ತು. ಮೊದಲೇ ಮನೆಯಲ್ಲಿ ನಡೆದ ಅವಾಂತರಗಳನ್ನು ನೋಡಿ ಪಾರು ತಲೆಕೆಡಿಸಿಕೊಂಡಿದ್ದಳು. ಹೇಗಾದರೂ ಮಾಡಿ ಸಿದ್ದಾರ್ಥ್‌ನನ್ನೇ ತಾನು ಮದುವೆ ಆಗಬೇಕು ಅನ್ನೋದು ಅವಳ ಆಸೆ ಆಗಿತ್ತು. ಈ ವಿಷಯ ಶಿವುಗೂ ತಿಳಿದಿತ್ತು. ಆದರೆ ಏನು ಮಾಡೋದು ಈಗ ಆಗಿದ್ದನ್ನು ಸ್ವೀಕಾರ ಮಾಡಲೇಬೇಕು. ಶಿವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಾರುಗೆ ತಾಳಿ ಕಟ್ಟಿದ್ದಾನೆ. ಈಗ ಶಿವು ಮತ್ತು ಪಾರು ಗಂಡ ಹೆಂಡತಿ. ಅವರಿಬ್ಬರನ್ನೂ ವೀರಭದ್ರನೇ ಸಿಟ್ಟಿನಿಂದ ಒಂದು ಮಾಡಿದ್ಧಾನೆ. ಆದರೆ ಮುಂದೆ ಏನಾಗಬಹುದು ಎಂದು ನೆನಸಿಕೊಂಡು ಶಿವುಗೆ ತಲೆಕೆಟ್ಟಿದೆ.

ಇನ್ನು ತಂಗಿಯರಿಗೆ ಬಹಳ ಸಂತೋಷವಾಗಿದೆ. ಏನು ನಡೆಯಬೇಕಿತ್ತೋ ಅದೇ ನಡೆಯುತ್ತಿದೆ ಎಂದು ಅವಳು ತುಂಬಾ ಖುಷಿಯಲ್ಲಿದ್ದಾಳೆ. ಅವರೆಲ್ಲರೂ ಪಾರುನೇ ತಮ್ಮ ಅತ್ತಿಗೆಯಾಗಿ ಬರಬೇಕು ಎಂದು ತುಂಬಾ ಅಂದುಕೊಂಡಿದ್ದರು. ಆದರೆ ಅಲ್ಲಿ ಸೋಮೇಗೌಡನ ಜೊತೆ ಅವಳ ಮದುವೆ ನಿಶ್ಚಯವಾಗಿರುವುದನ್ನು ಕಂಡು ಅವರಿಗೆ ಬೇಸರ ಆಗಿತ್ತು. ಹೇಗಾದರೂ ಮಾಡಿ ಪಾರು ನಮ್ಮ ಮನೆಗೇ ಬರುವಂತಾಗಲಿ ಎಂದು ಅವರೆಲ್ಲ ಆಸೆಪಟ್ಟಿದ್ದರು. ಈಗ ಅವರಾಸೆ ನಿಜವಾಗಿದೆ.

ಪಾರು ಕಾರಿನಲ್ಲಿ ಶಿವು ಮನೆ ಎದುರು ಬಂದು ಇಳಿದಿದ್ದಾಳೆ. ಕಾವೇರಿ ಅಜ್ಜಿ" ನೋಡಿದ್ಯಾ ಶಿವು ನಾನು ಹೇಳಿದ ಹಾಗೇ ಆಯ್ತು, ಕೊನೆಗೂ ಪಾರು ನಿನ್ನ ಹೆಂಡ್ತಿ ಆಗ್ಬಿಟ್ಳು" ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಎಲ್ಲರಿಗೂ ಆಶ್ಚರ್ಯ ಆಗುತ್ತದೆ. ಅವಳ ಆಶ್ಚರ್ಯಕ್ಕೆ ಉತ್ತರ ಸಿಕ್ಕಿ ಆಗೋಗಿದೆ. ಇನ್ನು ತಂಗಿಯರೆಲ್ಲ ತುಂಬಾ ಖುಷಿಯಿಂದ ಅತ್ತಿಗೆಯನ್ನು ಮನೆ ತುಂಬಿಸಿಕೊಳ್ಳಲು ರೆಡಿಯಾಗಿದ್ದಾರೆ.

ಮೊದಲ ಎರಡು ತಂಗಿಯರು ಮನೆಯಲ್ಲಿ ಸೇರನ್ನು ಇಟ್ಟು, ಆರತಿ ತಟ್ಟೆಯನ್ನು ಕೈಯ್ಯಲ್ಲಿ ಹಿಡಿದು ನಿಂತಿದ್ದಾರೆ. ಇನ್ನು ಪಾರು ಹಾಗೂ ಅಣ್ಣಯ್ಯ ಮನೆಯೊಳಗಡೆ ಬಂದಿದ್ದಾರೆ. ಪಾರು ಮುಖದಲ್ಲಿ ಬೇಸರ ಎದ್ದು ಕಾಣುತ್ತಿದ್ದರೂ ಏನೂ ಮಾಡುವ ಹಾಗಿಲ್ಲ. ಈಗ ಮದುವೆಯಂತು ಆಗಿಬಿಟ್ಟಿದೆ, ಅದನ್ನು ಅವಳು ಅರ್ಥ ಮಾಡಿಕೊಂಡು ಮುಂದಿನ ಹೆಜ್ಜೆ ಇಡುತ್ತಿದ್ದಾಳೆ. ಇನ್ನು ಮನೆಗೆ ಬಂದ ತಕ್ಷಣ ಹಾಲುಕ್ಕಿಸುವ ಕೆಲಸ ಮಾಡಿಸಿದ್ದಾರೆ. ನಂತರ ಉಂಗುರ ಹುಡುಕುವ ಆಟ ಆಡಿಸಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು