Annayya Serial: ಪಾರುಗೆ ಅರಶಿನ ಹಚ್ಚಲು ಮುಂದೆ ಬಂದ ಸೋಮೇಗೌಡ; ಶಿವು ಮುಖ ನೋಡಿ ಬೇಡ ಎಂದು ಸನ್ನೆ ಮಾಡಿದ ಪಾರು-annayya serial today episode zee kannada october 2 somegowda wants to come near paaru in the name of rituals smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಪಾರುಗೆ ಅರಶಿನ ಹಚ್ಚಲು ಮುಂದೆ ಬಂದ ಸೋಮೇಗೌಡ; ಶಿವು ಮುಖ ನೋಡಿ ಬೇಡ ಎಂದು ಸನ್ನೆ ಮಾಡಿದ ಪಾರು

Annayya Serial: ಪಾರುಗೆ ಅರಶಿನ ಹಚ್ಚಲು ಮುಂದೆ ಬಂದ ಸೋಮೇಗೌಡ; ಶಿವು ಮುಖ ನೋಡಿ ಬೇಡ ಎಂದು ಸನ್ನೆ ಮಾಡಿದ ಪಾರು

ಪಾರು ತಾಯಂದಿರು ಅವಳಿಗೆ ಅರಿಶಿನ ಶಾಸ್ತ್ರ ಆರಂಭ ಮಾಡಿದ್ದಾರೆ. ಈ ವಿಚಾರ ಒಳಗಿರುವ ಸೋಮೇಗೌಡನಿಗೆ ಗೊತ್ತಾಗಿದೆ. ಆಗ ಅವನು ತಾನೂ ಹೋಗಿ ಪಾರುಗೆ ಅರಶಿನ ಹಚ್ಚಬೇಕು ಎಂದು ರೆಡಿ ಆಗಿದ್ದಾನೆ. ಆದರೆ ಇದನ್ನು ತಡೆಯಲು ಶಿವು ಏನ್‌ ಮಾಡ್ತಾನೆ? ಎಂದು ಕಾದು ನೋಡಬೇಕಿದೆ.

ಅಣ್ಣಯ್ಯ ಧಾರಾವಾಹಿ, ಪಾರುಗೆ ಅರಶಿನ ಶಾಸ್ತ್ರ
ಅಣ್ಣಯ್ಯ ಧಾರಾವಾಹಿ, ಪಾರುಗೆ ಅರಶಿನ ಶಾಸ್ತ್ರ (ಝೀ ಕನ್ನಡ)

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಅರಿಶಿನ ಶಾಸ್ತ್ರ ನಡೆಯುತ್ತಿದೆ. ಆದರೆ ಈ ವಿಚಾರ ಗೊತ್ತಾದ ನಂತರ ಸೋಮೇಗೌಡ ಸುಮ್ಮನಿರುವುದಿಲ್ಲ. ನನ್ನನ್ನು ಬಿಟ್ಟು ಅದು ಹೇಗೆ ಅರಸಿನ ಶಾಸ್ತ್ರ ನಡೆಯುತ್ತೆ? ಅಂತ ಪ್ರಶ್ನೆ ಮಾಡುತ್ತಾನೆ. ಇನ್ನು ಇತ್ತ ಪಾರು ಅರಶಿನ ಬಣ್ಣದ ಚಂದದ ಡ್ರೆಸ್ ತೊಟ್ಟು ಅರಿಶಿನ ಶಾಸ್ತ್ರಕ್ಕೆ ರೆಡಿಯಾಗಿರುತ್ತಾಳೆ. ಮದುವೆಯ ಕಳೆ ಇವಳ ಮುಖದಲ್ಲಿ ಎದ್ದು ಕಾಣುತ್ತಿದೆ ಎಂದು ಪಕ್ಕದ ಮನೆಯ ಹೆಂಗಸರು ಹೇಳುತ್ತಾರೆ. ಆದರೆ ನಿಜವಾಗಿ ಪಾರುಗೆ ಇದರಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲ. ಅವಳ ತಂದೆ ಕೂಡ ತನ್ನ ಮಗಳನ್ನು ನೋಡಿ ಖುಷಿ ಪಡುತ್ತಾರೆ. ಅಜ್ಜಿ ನಮ್ಮ ಮನೆಯ ಸೊಸೆ ತುಂಬಾ ಲಕ್ಷಣವಾಗಿ ಕಾಣುತ್ತಿದ್ದಾಳೆ ಎಂದು ಮನಸ್ಸಿನಲ್ಲಿ ಅಂದುಕೊಂಡರು ಎಲ್ಲರಿಗೂ ಅದನ್ನು ಬಾಯಿ ಬಿಟ್ಟು ಹೇಳುವುದಿಲ್ಲ.

ಸೋಮೇಗೌಡನ ಆಸೆ ನೋಡಿ

ಇನ್ನೂ ಪಾರು ತಾಯಂದಿರು ಅವಳಿಗೆ ಅರಿಶಿನ ಶಾಸ್ತ್ರ ಆರಂಭ ಮಾಡಿದ್ದಾರೆ. ಅವಳಿಗೆ ಅರಿಶಿನ ಹಚ್ಚುತ್ತಾ ಇದ್ದಾರೆ. ಇತ್ತ ಸೋಮೇಗೌಡ ಶಿವು ಹತ್ತಿರ ತನ್ನ ಕೈ,ಕಾಲನ್ನು ಒತ್ತಿಸಿಕೊಳ್ಳುತ್ತಾ ಇರುತ್ತಾನೆ. ಅಲ್ಲಿಗೆ ಯಾರೋ ಒಂದು ಅರಶಿನ ಶಾಸ್ತ್ರದ ವಿಚಾರ ಹೇಳುತ್ತಾರೆ. ವಿಚಾರ ಗೊತ್ತಾದಾಗ ಸೋಮೆಗೌಡ ಒಂದು ಕ್ಷಣವೂ ನಿಲ್ಲುವುದಿಲ್ಲ. ಅರಿಶಿನ ಶಾಸ್ತ್ರ ಆರಂಭವಾಗಿದೆ ಎಂಬ ವಿಚಾರ ಗೊತ್ತಾಗಿ “ನಾನಿಲ್ಲದೆ ಅದು ಹೇಗೆ ಮಾಡಲು ಸಾಧ್ಯ? ನಾನು ಈಗಲೇ ಹೋಗಿ ಪಾರುಗೆ ಅರಿಶಿನ ಹಚ್ಚುತ್ತೇನೆ” ಎಂದು ಅಲ್ಲಿಂದ ಹೊರಟು ಹೋಗುತ್ತಾನೆ.

ಶಿವು ಏನ್‌ ಮಾಡ್ತಾನೆ?

ಶಿವು ಹೇಗಾದರೂ ಮಾಡಿ ಸೋಮೇಗೌಡನನ್ನು ತಡೆಯಬೇಕು ಎಂದುಕೊಳ್ಳುತ್ತಾನೆ. ಅಷ್ಟರಲ್ಲಾಗಲೇ ಸೋಮೇಗೌಡ “ನಾನು ಪಾರುಗೆ ಅರಿಶಿನ ಹಚ್ಚಬೇಕು” ಎಂದು ಪರ್ಮಿಷನ್ ಕೇಳಿ ಅವಳ ಹತ್ತಿರ ಹೋಗಿರುತ್ತಾನೆ. ಆದರೆ ಪಾರುಗೆ ಇದು ಇಷ್ಟ ಇರುವುದಿಲ್ಲ. ಅವಳು ಶಿವು ಮುಖವನ್ನು ನೋಡುತ್ತಾಳೆ. ಶಿವು ಏನು ಮಾಡಬೇಕು ಎಂದು ಆಲೋಚನೆ ಮಾಡುತ್ತಾನೆ. ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂದು ತೋಚದೆ ನಿಂತಿದ್ದಾನೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

mysore-dasara_Entry_Point