ಅಣ್ಣಯ್ಯ ಧಾರಾವಾಹಿ: ಪಾರು ಕೈಯ್ಯಲ್ಲಿ ಅರಳಿದ ಶಿವು ಪ್ರೀತಿ; ಮದರಂಗಿ ರಂಗು ನೋಡಿ ಬೇಸರ ಮಾಡಿಕೊಂಡ ಪಾರು
ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ತುಂಬಾ ಕಾತರದಿಂದ ಮದರಂಗಿ ನೋಡುತ್ತಿದ್ದಾಳೆ. ಬೆಳಿಗ್ಗೆ ಎದ್ದ ತಕ್ಷಣ ತನ್ನ ಕೈಗೆ ಹಾಕಿಸಿಕೊಂಡ ಮದರಂಗಿಯ ರಂಗನ್ನು ನೋಡಲು ಕೂತುಹಲದಿಂದ ಓಡಿ ಹೋಗಿದ್ದಾಳೆ. ಆದರೆ ಅವಳಿಗೆ ಬಂದ ಬಣ್ಣ ನೋಡಿ ಬೇಸರವಾಗಿದೆ.
ಪಾರು ಮನೆಯಲ್ಲಿ ಮದರಂಗಿ ಶಾಸ್ತ್ರ ಮಾಡುತ್ತಾ ಇದ್ಧಾರೆ. ಶಿವುನೇ ಅವಳ ಕೈಗೆ ಮದರಂಗಿ ಹಾಕುತ್ತಾನೆ. “ಅವನೇ ಹಾಕಬೇಕು ಎಷ್ಟೆಂದರೂ ಸೋದರ ಮಾವ ಅಲ್ವಾ?” ಎಂದು ಅಜ್ಜಿ ಕೇಳುತ್ತಾರೆ. ಆಗ ಅವನು ಬಂದು ಅವಳ ಕೈಗೆ ಮದರಂಗಿ ಹಾಕುತ್ತಾನೆ. ಅವನು ಅವಳ ಮುಂದೆ ಬಂದು ಕುಳಿತಾಗ ಅಜ್ಜಿ ಹೇಳುತ್ತಾರೆ “ಒಂದು ಹೃದಯದ ಚಿತ್ರ ಬಿಡಿಸು ”ಎಂದು, ಅವನು ಅಜ್ಜಿ ಹೇಳಿದಹಾಗೇ ಒಂದು ಹಾರ್ಟ್ ಸಿಂಬಲ್ ಬಿಡಿಸುತ್ತಾನೆ. ಇದನ್ನು ನೋಡಿ ಅವನ ತಂಗಿಯರಿಗೆಲ್ಲ ತುಂಬಾ ಖುಷಿ ಆಗುತ್ತದೆ. ಯಾಕೆಂದರೆ ಅವರು ಬಯಸಿದ್ದೂ ಇದನ್ನೇ ಆಗಿರುತ್ತದೆ.
ತಂಗಿಯರಿಗೆ ಬೇಸರ
ಅಣ್ಣನೇ ಪಾರುವನ್ನು ಮದುವೆ ಆಗಲಿ ಎಂಬ ಆಶಯ ಅವರಿಗೆಲ್ಲ ಇರುತ್ತದೆ. ಆದರೆ ಅನಿವಾರ್ಯವಾಗಿ ಮದುವೆ ಸೋಮೆಗೌಡನ ಜೊತೆ ನಿಶ್ಚಯವಾಗಿದೆ. ಇದರಿಂದ ಅವರಿಗೆಲ್ಲ ತುಂಬಾ ಬೇಸರವಾಗಿದೆ. ಹೀಗುರುವಾಗ ಅವರು ತಮಗೆ ಸಿಕ್ಕ ಚಿಕ್ಕ ಪುಟ್ಟ ಖುಷಿಗಳಲ್ಲೇ ದೊಡ್ಡ ಸಂತೋಷ ಪಡುತ್ತಿದ್ದಾರೆ. ಇನ್ನು ಅಣ್ಣ ಮದರಂಗಿ ಹಾಕಿದ ನಂತರ ರಾಣಿ ಬಂದು ಅವಳಿಗೆ ಮದರಂಗಿ ಹಾಕುತ್ತಾಳೆ. ರಾಣಿ ಎಲ್ಲರ ಮದುವೆಗೂ ಮದರಂಗಿ ಹಾಕಿ ಅಭ್ಯಾಸವಿದ್ದವಳು ಎಂದು ಅವಳನ್ನೇ ಕರೆಯಲಾಗುತ್ತದೆ.
ಮದರಂಗಿಯಲ್ಲಿ ಸೋಮೆಗೌಡನ ಹೆಸರು
ನಂತರ ಪಾರು ಅಣ್ಣ ಬಂದು ಶಿವು ಬಿಡಿಸಿದ ಹೃದಯದಲ್ಲಿ ಸೋಮೆಗೌಡನ ಹೆಸರು ಬರೆಯಲು ಹೇಳುತ್ತಾನೆ. ಆದರೆ ರಮ್ಯ ಅದೆಲ್ಲ ಆಗೋದಿಲ್ಲ. ಒಂದು ಅಕ್ಷರ ಮಾತ್ರ ಬರಿಬಹುದು ಎಂದು ಹೇಳುತ್ತಾಳೆ. “ಆಯ್ತು ಎಸ್ ಅಂತ ಅಷ್ಟೇ ಬರಿತಿನಿ ಎಂದು ರಾಣಿ ಹೇಳುತ್ತಾಳೆ”. ಆಗ ಅವನು ಓಕೆ ಎಂದು ಅಲ್ಲಿಂದ ಹೋಗುತ್ತಾನೆ.
ಇನ್ನು ಸಿದ್ದಾರ್ಥ್ ಎಷ್ಟೊತ್ತಿಗೆ ಕಾಲ್ ಮಾಡ್ತಾನೆ ಅಂತ ಪಾರು ಕಾಯ್ತಾ ಇರ್ತಾಳೆ. ಆದರೆ ಅವನಿಗೆ ಕಾಲ್ ಮಾಡಿ ಮಾತನಾಡಲು ಸಮಯ ಸಿಕ್ಕಿರುವುದಿಲ್ಲ. ಇಲ್ಲಿ ಶಿವುನೇ ನಿಂತು ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಅವಳು ಯಾವಾಗಲೂ ಶಿವು ಇರುವ ಕಡೆಗೇ ಗಮನಕೊಡ್ತಾ ಇದ್ಲು. ನಂತರ ಶಿವು ಅವಳನ್ನು ಬೇರೆ ಕಡೆ ಕರೆದುಕೊಂಡು ಹೋಗುತ್ತಾನೆ. ಆಗ ಅಣ್ಣ ಅತ್ತಿಗೆ ಇಬ್ಬರೇ ಎಲ್ಲಿಗೆ ಹೋಗ್ತಾ ಇದ್ದಾರೆ ನೋಡೆ ಬಿಡೋಣ ಎಂದು ರಾಣಿ ಕೂಡ ಬರ್ತಾಳೆ. ಆದರೆ ಅವಳಿಗೆ ಆಗ ಸತ್ಯ ಗೊತ್ತಾಗುತ್ತದೆ.
ರಾಣಿಗೆ ತಿಳಿದಿದೆ ಸತ್ಯ
ಇದು ಅಣ್ಣ ಮತ್ತು ಅತ್ತಿಗೆ ನಡುವಿನ ಪ್ರೇಮ ಕಥೆ ಅಲ್ಲ. ಇಲ್ಲಿ ಬೇರೆ ಯಾರೋ ಇದ್ದಾನೆ ಎಂದು. ನಂತರ ಆ ದಿನ ಕಳೆಯುತ್ತದೆ. ಮರುದಿನ ಅವಳು ತನ್ನ ಮದರಂಗಿಯನ್ನು ನೋಡಿಕೊಳ್ಳುತ್ತಾಳೆ. ಸಿದ್ದಾರ್ಥ್ ತನ್ನನ್ನು ಎಷ್ಟು ಪ್ರೀತಿ ಮಾಡ್ತಾನೆ ಅನ್ನೋದನ್ನ ಅವಳು ಪರೀಕ್ಷೆ ಮಾಡುತ್ತಾಳೆ. ಆದರೆ ಶಿವು ಹಾಕಿದ ಮದರಂಗಿ ಮಾತ್ರ ಕೆಂಪಾಗಿ ಮೂಡಿಬಂದಿರುತ್ತದೆ. ಅವಳಿಗೆ ಅದೇ ಕಾರಣಕ್ಕೆ ಬೇಸರ ಕೂಡ ಆಗಿದೆ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.