Annayya Serial: ಪಾರು ಮದುವೆಗೆ ಇನ್ನೇನು ಕೆಲವೇ ಗಂಟೆ ಬಾಕಿ, ಆದ್ರೂ ಶಿವು ಅಸಹಾಯಕ; ಮುಂದೇನಾಗುತ್ತೆ ಪಾರು ಬದುಕು
ಪಾರು ಮದುವೆ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಮಹಾ ತಿರುವು ಕಾದಿದೆ. ಪಾರು ಮದುವೆ ದಿನ ಹತ್ತಿರ ಬಂದ್ರೂ ಶಿವುಗೆ ಏನೂ ಮಾಡೋಕೆ ಸಾಧ್ಯ ಆಗುತ್ತಾ ಇಲ್ಲ. ಅವನು ಮಾಡಿದ ಯಾವ ಕೆಲಸವೂ ಗುರಿ ಮುಟ್ಟುತ್ತಿಲ್ಲ. ಹೀಗಿರುವಾಗ ಮುಂದೇನಾಗಿದೆ ನೋಡಿ.
ಪಾರುಗೆ ಸೋಮೆಗೌಡನ ಜೊತೆ ಮದುವೆ ಆಗೋಕೆ ಸುತಾರಾಂ ಇಷ್ಟ ಇರೋದಿಲ್ಲ. ಆದ್ರೂ ಅವಳು ಮಾತ್ರ ಹೇಗಾದರೂ ಮಾಡಿ ನಾನು ಈ ಮದುವೆಯಿಂದ ತಪ್ಪಿಸಿಕೊಳ್ತೀನಿ ಎನ್ನುವ ಭರವಸೆ ಮೇಲೆ ಮದುವೆ ಮನೆವರೆಗೂ ಬಂದಿದ್ದಾಳೆ. ಅವಳ ಈ ಭರವಸೆಗೆ ಕಾರಣನಾದವನು ಶಿವು. ಮಾವ ಶಿವು ಹೇಗಾದರು ಮಾಡಿ ತನ್ನನ್ನು ಸಿದ್ಧಾರ್ಥ್ ಜೊತೆ ಮದುವೆ ಮಾಡುತ್ತಾನೆ ಎಂದು ಅವಳು ನಂಬಿಕೊಂಡು ಕೂತಿದ್ದಾಳೆ. ಮದುವೆಯ ದಿನವೂ ಬಂದಾಗಿದೆ. ಆದರೆ ಅವಳ ಕ್ರೂರ ತಂದೆ ಮಾತ್ರ ಮಗಳ ಮನಸನ್ನು ಅರ್ಥ ಮಾಡಿಕೊಳ್ಳುತ್ತಾ ಇಲ್ಲ.
ಮದುವೆಗೆ ಹೊರಟಿದೆ ದಿಬ್ಬಣ
ಇನ್ನು ಶಿವು ತನ್ನ ಹತ್ತಿರ ಸಿದ್ದಾರ್ಥ್ ಇಲ್ಲಿಗೆ ಬರೋ ವ್ಯವಸ್ಥೆ ಮಾಡೋಕೆ ಸಾಧ್ಯ ಆಗ್ತಾ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ. ಊರಿನಿಂದ ಮದುವೆ ಮಂಟಪಕ್ಕೆ ಒಂದು ಗಾಡಿ ಜನ ಬರ್ತಾ ಇದ್ದಾರೆ. ದೊಡ್ಡೆಜಮಾನರ ಮನೆ ಮಗಳ ಮದುವೆ ಅಂದ್ರೆ ಹೇಗಿರಬೇಕೋ ಅದೇ ರೀತಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಎಲ್ಲರೂ ಬರೋದಕ್ಕೆ ಒಂದು ಬಸ್ ಮಾಡಿದ್ದಾರೆ. ಆ ಬಸ್ ತುಂಬಾ ಜನ ಬಂದಿದ್ದಾರೆ. ಬಸ್ ತುಂಬಾ ಜನ ಬರುವಾಗ ಏನೂ ತೊಂದರೆ ಆಗಬಾರದು ಎಂದು ಅದಕ್ಕೆ ಮಲ್ಲಪ್ಪಣ್ಣನ ಕಾವಲು ಮಾಡಿದ್ದಾರೆ.
ಪಾರು ಪ್ರಶ್ನೆಗೆ ಇಲ್ಲ ಉತ್ತರ
ಎಲ್ಲ ಜವಾಬ್ಧಾರಿಯನ್ನು ಅವನೇ ತೆಗೆದುಕೊಂಡು ಬಂದಿದ್ದಾನೆ. ಇನ್ನು ಶಿವು ಮಾವ ಶಿವುಗೂ ತುಂಬಾ ಜವಾಬ್ಧಾರಿ ನೀಡಿದ್ದಾನೆ. ಈ ಮದುವೆ ಸಾಂಗವಾಗಿ ನೆರವೇರುವಂತೆ ಮಾಡಬೇಕು ಎಂದು ಹೇಳಿದ್ದಾನೆ. ಆ ಮಾತನ್ನು ನೆನಸಿಕೊಂಡರೂ ಶಿವುಗೆ ಸಂಕಟ ಆಗುತ್ತಿದೆ. ಇನ್ನು ಪಾರು ಶಿವು ಬಳಿ ನನ್ನ ಯಾವಾಗ ಇಲ್ಲಿಂದ ಕರೆದುಕೊಂಡು ಹೋಗ್ತೀಯಾ ಅಂತ ಪದೇ ಪದೇ ಪ್ರಶ್ನೆ ಮಾಡುತ್ತಾ ಇದ್ದಾಳೆ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.