Annayya Serial: ಗಂಡಿನ ಮನೆಯವರ ಕಾಟಕ್ಕೆ ಬೇಸತ್ತ ಅಣ್ಣಯ್ಯ; ಶಿವುಗೆ ಧೈರ್ಯ ತುಂಬ್ತಾಳಾ ಪಾರು
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ದೇವಸ್ಥಾನಕ್ಕೆ ಬಂದಿದ್ದಾರೆ. ಆದರೆ ಶಿವುಗೆ ಗಂಡಿನ ಮನೆಯವರ ಕಾಟ ಆರಂಭವಾಗಿದೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮತ್ತು ಪಾರು ಇಬ್ಬರೂ ದೇವಸ್ಥಾನಕ್ಕೆ ಹೋಗಿದ್ದಾರೆ. ಆದರೆ ನೆಮ್ಮದಿಯಿಂದ ಬೇಡಿಕೊಳ್ಳಲೂ ಸಹ ಬಿಡದಂತೆ ಗಂಡಿನ ಮನೆಯವರು ಶಿವುಗೆ ಕಾಟ ಕೊಡುತ್ತಿದ್ದಾರೆ. ಪಾರು ದೇವರ ಮುಂದೆ ಕಣ್ಣು ಮುಚ್ಚಿಕೊಂಡು ಬೇಡಿಕೊಳ್ಳುತ್ತಾ ಇರುತ್ತಾಳೆ. ಆದರೆ ಶಿವುಗೆ ಯಾರದೋ ಪೋನ್ ಬರುತ್ತದೆ. ಅವನು ಅಲ್ಲಿಂದ ಸುಮ್ಮನೆ ಹೊರಗಡೆ ಹೋಗುತ್ತಾನೆ. ಆದರೆ ಪಾರುಗೆ ಹೇಳುವುದಿಲ್ಲ. ಅವನಿಗೆ ಗಂಡಿನ ಮನೆಯವರು ಕಾಲ್ ಮಾಡಿರುತ್ತಾರೆ. ಮದುವೆಗೆ ಇನ್ನು ಕೇವಲ ಎರಡೇ ದಿನ ಬಾಕಿ ಇರುತ್ತದೆ. ಆದರೆ ಗಂಡಿನ ಕಡೆಯವರ ವರದಕ್ಷಿಣೆ ಹಣ ಏರುತ್ತಲೇ ಇರುತ್ತದೆ.
ಶಿವುಗೆ ಗಂಡಿನ ಮನೆಯವರ ಕಾಟ
ಶಿವು ಹೊರಗಡೆ ಬಂದು ಮಾತನಾಡಲು ಆರಂಭಿಸುತ್ತಾನೆ. ಮಾತನಾಡುತ್ತಾ ಇದ್ದಾಗ, ಗಂಡಿನ ಅಪ್ಪ, "ಹಣ ಎಲ್ಲ ಹೊಂದಾಣಿಕೆ ಮಾಡಿದ್ಯಂತೆ ಶಿವು" ಎಂದು ಹೇಳುತ್ತಾರೆ. ಅವರ ಮಾತು ಕೇಳಿದರೆ ತುಂಬಾ ಖುಷಿಯಲ್ಲಿದ್ದಂತೆ ತೋರುತ್ತಿತ್ತು. ಆದರೆ ಅವರ ಮಾತಿನ ವರಸೆ ಬದಲಾಗುತ್ತಾ ಹೋಯಿತು. ಅವರು ಇನ್ನಷ್ಟು ಹಣ ಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಅಂದು ಐದು ಲಕ್ಷ ಹಣಕ್ಕೆ ಒಪ್ಪಿಕೊಂಡಿದ್ದವರು, ಇಂದು ಮಾತು ತಿರುಚುತ್ತಿದ್ದಾರೆ. ಅವರು “ನೀನು ಅಂದು ಹೇಳಿದ್ದು ಮತ್ತು ಒಪ್ಪಿಕೊಂಡದ್ದು ಹತ್ತು ಲಕ್ಷಕ್ಕಲ್ಲವೇ?” ಎಂದು ಕೇಳುತ್ತಾರೆ. ಆ ಮಾತನ್ನು ಕೇಳಿದ ತಕ್ಷಣ ಶಿವುಗೆ ಮೈ ಬೆವರಿಳಿಯುತ್ತದೆ. “ಅಲ್ಲ ನೀವು ಅಂದು ಹೇಳಿದ್ದು ಐದು ಲಕ್ಷಕ್ಕೆ ಎಂದು ಹೇಳುತ್ತಾನೆ” ಆಗ ಅವರ ಮಾತಿನ ವರಸೆ ಇನ್ನಷ್ಟು ಬದಲಾಗುತ್ತದೆ.
ಅದೆಲ್ಲವನ್ನು ನೋಡಿಕೊಂಡು ಶಿವು ಆಯ್ತು, ನೀವು ಹೇಳಿದಷ್ಟೇ ಹಣ ಕೊಡ್ತೀನಿ ಎಂದು ಹೇಳಿ ಕಾಲ್ ಕಟ್ ಮಾಡುತ್ತಾನೆ. ಅವನ ಹಿಂದೆ ಪಾರು ನಿಂತಿರುತ್ತಾಳೆ. ಅವಳಿಗೆ ಎಲ್ಲ ವಿಚಾರ ಗೊತ್ತಾಗಿದೆಯೇ? ಇಲ್ಲವೇ? ಎಂದು ಕಾದು ನೋಡಬೇಕಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
