Annayya Serial: ವರದಕ್ಷಿಣೆ ಕೇಳಿ ಶಿವು ಉಸಿರುಗಟ್ಟಿಸಿದ ಗಂಡಿನ ಮನೆಯವರು; ವೀರಭದ್ರನೇ ರಶ್ಮಿ ಮದುವೆ ನಿಲ್ಲಿಸುವ ಸೂತ್ರಧಾರಿ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿಯ ಮದುವೆ ಮಾಡಲು ಶಿವು ಮುಂದಾಗಿದ್ದಾನೆ. ಗಂಡಿನ ಕಡೆಯವರ ಬೇಡಿಕೆ ಏನಿದೆ? ಎಂದು ತಿಳಿದುಕೊಳ್ಳಲು ಅವರ ಮನೆಗೆ ಹೋಗಿದ್ದಾನೆ. ಆದರೆ, ವೀರಭದ್ರನ ಕುತಂತ್ರ ಅಲ್ಲೂ ಇದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಗಂಡಿನ ಕಡೆಯವರು ಶಿವುವನ್ನು ತಮ್ಮ ಮನೆಗೆ ಕರೆದಿದ್ದಾರೆ. ಅವರ ಮನೆಯನ್ನೂ ನೋಡಿಕೊಂಡು ಬಂದ ಹಾಗಾಯ್ತು ಎಂದು ಶಿವು ಹೊರಟಿದ್ದಾನೆ. ಆದರೆ ಅಲ್ಲಿಗೆ ಅವನನ್ನು ಕರೆಸಿಕೊಂಡ ವಿಚಾರ ಗಂಭೀರವಾಗಿದೆ. ಶಿವು ಹತ್ತಿರ ವರದಕ್ಷಿಣೆ ವಿಚಾರವಾಗಿ ಮಾತನಾಡಲು ಅವರು ಕರೆಸಿಕೊಂಡಿದ್ದಾರೆ. ಶಿವು ಒಬ್ಬನೇ ಅವರ ಮನೆಗೆ ಹೋಗಿದ್ದಾನೆ. ಅಲ್ಲಿ ಗಂಡಿನ ತಂದೆ ವರದಕ್ಷಿಣೆ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಾರೆ. ನೀವು ನಿಮ್ಮ ಮನೆಯ ಹೆಣ್ಣು ಮಗಳನ್ನು ನಮ್ಮ ಮನೆಗೆ ಕಳುಹಿಸ್ತಾ ಇದೀರಾ ಅಂದ್ರೆ ಅದಕ್ಕೆ ತಕ್ಕ ಹಾಗೆ ಏನಾದ್ರೂ ಕೊಡಲೇಬೇಕಲ್ವ ಎಂದು ಕೇಳುತ್ತಾರೆ.
ಆಗ, ಶಿವು ಮುಖ ಸಣ್ಣದಾಗುತ್ತದೆ. ಆದರೂ ಅವನು ಒಂದಷ್ಟು ಹಣ ಕೊಡಲು ಒಪ್ಪುತ್ತಾನೆ. 2 ಲಕ್ಷ ರೂಪಾಯಿ ನಗದು ಹಣ ಮತ್ತು ಒಂದಷ್ಟು ಬಂಗಾರ ಕೊಡುವುದಾಗಿ ಹೇಳುತ್ತಾನೆ. ಆದರೆ, ಅದರಿಂದ ನನಗೆ ಸಮಾಧಾನ ಇಲ್ಲ ಎನ್ನುವ ರೀತಿಯಲ್ಲಿ ಮದುವೆ ಗಂಡು ಪ್ರಶಾಂತ್ ಅಲ್ಲಿಂದ ಎದ್ದು ಬೇರೆ ಕಡೆ ಹೋಗುತ್ತಾನೆ. ಬೇರೆ ಕಡೆ ಹೋಗಿ ವೀರಭದ್ರನಿಗೆ ಕಾಲ್ ಮಾಡುತ್ತಾನೆ. ಆಗ ವೀರಭದ್ರ ಅಲ್ಲಿ ನಡೆದ ವಿಚಾರ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ.
ಶಿವು ಎಷ್ಟು ಹಣ ಕೊಡಲು ಒಪ್ಪಿದ್ದಾನೆ? ಎಂದು ಪ್ರಶ್ನೆ ಮಾಡುತ್ತಾನೆ. ಆಗ ಅವನು ಇರುವ ವಿಚಾರವನ್ನು ಹೇಳುತ್ತಾನೆ. ನಂತರ ವೀರಭದ್ರ “ನೀನು ಕೇಳಿದ್ದು ಅವನಿಗೆ ಉಸಿರುಗಟ್ಟಬೇಕು, ಅಷ್ಟು ಹಣ ಕೇಳು” ಎಂದು ಹೇಳಿ ಕಾಲ್ ಕಟ್ ಮಾಡುತ್ತಾನೆ. ಪ್ರಶಾಂತನ ಮುಖದಲ್ಲಿ ನಗು ಮೂಡುತ್ತದೆ. ಅವನು ಒಳಗಡೆ ಬಂದವನೇ ಇನ್ನಷ್ಟು ಹಣ ಕೇಳಬೇಕು ಎಂದುಕೊಳ್ಳುತ್ತಾನೆ. ನಂತರ ಅವನ ತಾಯಿ ಐದು ಲಕ್ಷ ಹಣ, ಬಂಗಾರ ಮತ್ತು ಕಾರನ್ನು ಕೇಳುತ್ತಾಳೆ. ಆ ಮಾತನ್ನು ಕೇಳಿ ಶಿವುಗೆ ಶಾಕ್ ಆಗಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.