Annayya Serial: ಸತ್ಯ ತಿಳಿದು ಮೂಕಳಾದ ಪಾರು; ಇನ್ನೆಂದಿಗೂ ಸಿದ್ದಾರ್ಥ್ ಅವಳ ಬದುಕಿನಲ್ಲಿ ಬರೋದೇ ಇಲ್ಲ
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಸಿದ್ದಾರ್ಥ್‌ಗಾಗಿ ತುಂಬಾ ದಿನದಿಂದ ಕಾದಿದ್ದಾಳೆ. ಶಿವುನ ಮದುವೆ ಆದರೂ ಅವಳು ಈಗಲೂ ತನ್ನ ಹುಡುಗ ಮತ್ತೆ ಬಂದೇ ಬರುತ್ತಾನೆ ಎಂದು ನಂಬಿ ಜೀವನ ನಡೆಸುತ್ತಿದ್ದಾಳೆ. ಆದರೆ ಅವಳಿಗೆ ದೊಡ್ಡ ಮೋಸ ಆಗಿದೆ.
ಪಾರು ಮೆಡಿಕಲ್ ಕ್ಯಾಂಪ್‌ಗೆ ಎಂದು ಪೇಟೆಗೆ ಹೋಗಿರುತ್ತಾಳೆ. ಆಗ ಅವಳಿಗೆ ಸಿದ್ದಾರ್ಥ್ ಸುಳಿವು ಸಿಗುತ್ತದೆ. ಅವಳು ದೇವಸ್ಥಾನದ ಹತ್ತಿರ ಹೋಗಿ ಹುಡುಕಾಟ ನಡೆಸುತ್ತಾಳೆ. ಆದರೆ ಆಗ ಅವಳ ಜೊತೆ ಶಿವು ಇರೋದಿಲ್ಲ. ಅವನು ಬೇರೆ ಒಂದು ಕಡೆ ಹುಡುಕಾಟ ಮಾಡುತ್ತಾ ಇರುತ್ತಾನೆ. ಆಗ ಪಾರು ಹಾಗೂ ಸಿದ್ದಾರ್ಥ್ ಇಬ್ಬರಿಗೂ ಆಪ್ತರಾದ ಒಬ್ಬರು ಸಿಗುತ್ತಾರೆ. ಅಂಕಲ್ ಎನ್ನುತ್ತಾ ಓಡಿ ಹೋಗಿ ಅವಳು ಅವರನ್ನು ಮಾತನಾಡಿಸುತ್ತಾಳೆ. ಆದರೆ ಅವಳಿಗೆ ತಿಳಿದ ವಿಷಯ ಮಾತ್ರ ತುಂಬಾ ಕಠಿಣವಾಗಿರುತ್ತದೆ. ಅವಳು ತುಂಬಾ ಬೇಸರ ಮಾಡಿಕೊಳ್ಳುತ್ತಾಳೆ.
ಪಾರು ಭಾವುಕ
ಯಾಕೆಂದರೆ ಅವಳಿಗೆ ಸತ್ಯ ಗೊತ್ತಾಗುತ್ತದೆ. ಪಾರು ಹೋಗಿ ಆ ಅಂಕಲ್ ಬಳಿ ಮತಾಡುತ್ತಾಳೆ. “ಅಂಕಲ್ ಸಿದ್ದಾರ್ಥ್ ಎಲ್ಲಿದ್ದಾನೆ? ಬನ್ನಿ ಅಂಕಲ್ ಹೋಗೋಣ” ಎಂದು ಅವರನ್ನು ಕರೆಯುತ್ತಾಳೆ. ಆದರೆ ಅವರು ಯಾವುದೇ ಉತ್ತರ ನೀಡೋದಿಲ್ಲ. ಅವರ ಮಾತನ್ನು ಕೇಳಲು ಇವಳು ಹಂಬಲಿಸುತ್ತಾಳೆ. ಆದರೂ ಯಾವುದೇ ಮಾತನ್ನು ಅವರು ಆಡೋದಿಲ್ಲ. ನಾನು ಎಷ್ಟೆಲ್ಲ ಅನುಭವಿಸಿದೆ ಗೊತ್ತಾ? ಸಿದ್ದಾರ್ಥ್ ಸಿಕ್ಕೇ ಸಿಗ್ತಾನೆ. ಅವನು ಒಂದಲ್ಲ ಒಂದು ದಿನ ವಾಪಸ್ ಬರ್ತಾನೆ ಅಂತ ನಾನು ಕಾಯ್ತಾ ಇದ್ದೀನಿ ಎಂದು ಹೇಳುತ್ತಾಳೆ.
ಆದರೆ ಅವರ ಮುಖದಲ್ಲಿ ಯಾವ ಭಾವನೆಯೂ ಕಾಣಿಸುವುದಿಲ್ಲ. ಅದನ್ನು ನೋಡಿ ಅವಳಿಗೆ ಭಯ ಆಗುತ್ತದೆ. “ಯಾಕೆ ಅಂಕಲ್ ನೀವೇನೂ ಮಾತೇ ಆಡ್ತಾ ಇಲ್ಲ. ಏನಾದ್ರೂ ಮಾತಾಡಿ” ಎಂದು ಹೇಳುತ್ತಾಳೆ. ಅವತ್ತು ನಡೆದ ಸುಮಾರು ಘಟನೆಗಳನ್ನು ವಿವರಿಸುತ್ತಾಳೆ, ಬರ್ತೀನಿ ಅಂದವನು ಬರಲೇ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ.
ಸತ್ಯ ಹೇಳಿದ ಅಂಕಲ್
ಅಂಕಲ್ ಮಾತಾಡುತ್ತಾ ಅವಳಿಗೆ ಒಂದೇ ಒಂದು ವಾಕ್ಯದಲ್ಲಿ ಉತ್ತರಿಸುತ್ತಾರೆ. “ಅವತ್ತು ಅವನು ನಿನ್ನನ್ನು ಮದುವೆ ಆಗಬಾರದು ಅಂತನೇ ಬಂದಿಲ್ಲ” ಎನ್ನುತ್ತಾರೆ. ಆ ಮಾತನ್ನು ಕೇಳಿ ಪಾರ್ವತಿ ಶಾಕ್ ಆಗಿ ಮೌನವಹಿಸುತ್ತಾಳೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
ಪಾರು ಅಭಿನಯ ಸೂಪರ್ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.