Annayya Serial: ಸಿದ್ದಾರ್ಥ್‌ನ ಮೀಟ್ ಆಗಬೇಕು ಎಂದು ಬೇಡಿಕೊಂಡ ಪಾರು, ಗತಿ ಇಲ್ಲದೇ ಒಪ್ಪಿಕೊಂಡ ಅಣ್ಣಯ್ಯ-annayya serial zee kannada today episode september 13 paru wants to meet his boyfriend smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಸಿದ್ದಾರ್ಥ್‌ನ ಮೀಟ್ ಆಗಬೇಕು ಎಂದು ಬೇಡಿಕೊಂಡ ಪಾರು, ಗತಿ ಇಲ್ಲದೇ ಒಪ್ಪಿಕೊಂಡ ಅಣ್ಣಯ್ಯ

Annayya Serial: ಸಿದ್ದಾರ್ಥ್‌ನ ಮೀಟ್ ಆಗಬೇಕು ಎಂದು ಬೇಡಿಕೊಂಡ ಪಾರು, ಗತಿ ಇಲ್ಲದೇ ಒಪ್ಪಿಕೊಂಡ ಅಣ್ಣಯ್ಯ

Zee Kannada Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಸಿದ್ದಾರ್ಥನ ಮೀಟ್ ಆಗಬೇಕು ಎಂದು ಬೇಡಿಕೊಂಡಿದ್ದಾಳೆ. ಆದರೆ ಇದು ಅಣ್ಣಯ್ಯನಿಗೆ ಕಷ್ಟದ ಸಮಯ. ಅವಳನ್ನು ಹೇಗೆ ಇನ್ನೊಬ್ಬನ ಹತ್ತಿರ ಬಿಡೋದು ಎಂದು ಅವನು ಮಾತ್ರ ತುಂಬಾ ಕಂಗಾಲಾಗಿದ್ದಾನೆ. ಮುಂದೆ ಏನಾಗಿದೆ ಗಮನಿಸಿ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ

ಪಾರು ಮತ್ತು ಶಿವು ಊರು ಬಿಟ್ಟು ಹೊರಗಡೆ ಹೋಗಿ ಮೆಡಿಕಲ್ ಕ್ಯಾಂಪ್ ಅಟೆಂಡ್ ಆಗಿ ಬರುತ್ತಿದ್ದಾರೆ ಎನ್ನುವ ವಿಚಾರವನ್ನು ಹೇಗೋ ಮಾಡಿ ಮನೆಯಲ್ಲಿ ಮುಚ್ಚಿಡುತ್ತಾರೆ. ಆದರೆ ಅವಳ ಅಣ್ಣಂದಿರಿಗೆ ತುಂಬಾ ಅನುಮಾನ ಬರುತ್ತದೆ. ಅವರು ಪಾರು ಎಲ್ಲಿ ಎಂದು ಹುಡುಕಿಕೊಂಡು ಬರಲು ಹೋಗುತ್ತಾರೆ. ಇತ್ತ ಸೋಮೆಗೌಡ ಕೂಡ ಅವಳ ಅಣ್ಣನ ಜೊತೆ ಅಣ್ಣಯ್ಯನ ಮನೆಗೆ ಬರುತ್ತಾನೆ. ಮೊದಲು ಅವರು ದೇವಸ್ಥಾನಕ್ಕೆ ಹೋಗಿ ನೋಡಿತ್ತಾರೆ. ಅಲ್ಲಿ ಅವಳ ಅಮ್ಮಂದಿರು ಇರುತ್ತಾರೆ. ಆದರೆ ಪಾರು ಮಾತ್ರ ಇರೋದಿಲ್ಲ. ಅದನ್ನು ನೋಡಿ ಕೋಪ ಬರುತ್ತದೆ. ನಂತರ ಅವರ ಹತ್ತಿರ ಪಾರು ಎಲ್ಲಿಗೆ ಹೋಗಿದ್ದಾಳೆ ಎಂದು ಕೇಳುತ್ತಾರೆ. ಆಗ ಅಮ್ಮ ಹೇಳುತ್ತಾರೆ. “ಅವಳು ಈಗಷ್ಟೇ ಶಿವು ಮನೆಗೆ ಹೋದ್ಲು” ಅಂತ. ಆ ಮಾತನ್ನು ಕೇಳಿ ಒಂದು ಕ್ಷಣ ಕೂಡ ನಿಲ್ಲದೇ ಅವರು ಶಿವು ಮನೆಗೆ ಹೋಗುತ್ತಾರೆ.

ಅಣ್ಣಯ್ಯನ ಉಪಾಯ

ಆಗ ಶಿವುಗೆ ಕಾಲ್ ಮಾಡಿ ಇಲ್ಲಿ ನಡೆದ ವಿಚಾರವನ್ನು ತಾಯಿ ಮೊದಲೇ ತಿಳಿಸುತ್ತಾರೆ. ಅವನು ಎಚ್ಚೆತ್ತುಕೊಂಡು ಅವಳನ್ನು ಕರೆದುಕೊಂಡು ಬರಲು ರೆಡಿ ಆಗ್ತಾನೆ. “ಪಾರು ಬಿರ್ನೆ ಹೋಗುಮಾ, ಅಲ್ಲಿ ಎಡವಟ್ಟಾಗೈತೆ” ಅಂತ ಅವನು ಹೇಳುತ್ತಾನೆ. ಆಗ ಪಾರು ಪರಿಸ್ಥಿತಿ ಅರ್ಥ ಮಾಡಿಕೊಂಡು ಅವನ ಜೊತೆ ಬರುತ್ತಾಳೆ. ಅವಳು ಬರುವಷ್ಟರಲ್ಲಿ ಮನೆ ಹೊರಗಡೆ ಎಲ್ಲರೂ ನಿಂತಿರುತ್ತಾರೆ. ಅದನ್ನು ಕಂಡು ಅಣ್ಣಯ್ಯ ಒಂದು ಉಪಾಯ ಮಾಡುತ್ತಾನೆ.

ಮೂಟೆಯಲ್ಲಿ ಪಾರು
ಅಲ್ಲೇ ಕೆಳಗಡೆ ಇದ್ದ ಚೀಲವೊಂದನ್ನು ತೆಗೆದುಕೊಂಡು ಅದರಲ್ಲಿ ಪಾರುವನ್ನು ಮೂಟೆ ಕಟ್ಟುತ್ತಾನೆ. ಅವಳನ್ನು ಹೆಗಲ ಮೇಲೆ ಹೊತ್ತುಕೊಂಡು ಒಳಗಡೆ ಸಾಗಿಸುತ್ತಾನೆ. ಆದರೆ ಯಾರಿಗೂ ಅನುಮಾನ ಬರೋದಿಲ್ಲ. ಅವಳು ಸಹಜವಾಗಿ ಒಳಗಡೆಯಿಂದ ಹೊರಗಡೆ ಬರುತ್ತಾಳೆ. ಆಗ ಅವಳ ಮೇಲೆ ಎಲ್ಲರಿಗೂ ನಂಬಿಕೆ ಬರುತ್ತದೆ. ಹೀಗೆ ಮಾಡಿ ಅವಳನ್ನು ಬಜಾವ್ ಮಾಡುತ್ತಾನೆ.

ಮೈಸೂರಿಗೆ ಹೋಗಬೇಕು
ಇನ್ನು ಎಲ್ಲರೂ ಆಭರಣ ಹಾಗೂ ವಸ್ತ್ರ ಕೊಳ್ಳಲು ಪೇಟೆಗೆ ಹೋಗಿರುತ್ತಾರೆ. ಅದು ಕೂಡ ಪಾರು ಮದುವೆ ಸಲುವಾಗಿ ಆಗಿರುತ್ತದೆ. ಅಲ್ಲಿಗೂ ಅಣ್ಣಯ್ಯ ತನ್ನ ತಂಗಿಯರನ್ನು ಕರೆದುಕೊಂಡು ಹೋಗುತ್ತಾನೆ, ಅದನ್ನು ನೋಡಿ ಸೋಮೆಗೌಡನಿಗೆ ಎಲ್ಲಿಲ್ಲದ ಕೋಪ ಬರುತ್ತದೆ. ಆದರೆ ಏನು ಮಾಡಲೂ ಆಗೋದಿಲ್ಲ. ಅವನು ಮನಸಿನಲ್ಲೇ ಬೈದುಕೊಳ್ಳುತ್ತಾನೆ. ಅದಾದ ನಂತರದಲ್ಲಿ ಪಾರು “ಮಾವ ನೀನೇ ಕಾಪಾಡ್ಬೇಕು. ಹೇಗಾದ್ರು ಮಾಡಿ ನನ್ನ ಇಲ್ಲಿಂದ ಕರ್ಕೊಂಡೋಗು” ಎಂದು ಹೇಳುತ್ತಾಳೆ. ಇತ್ತ ಫೋನ್‌ನಲ್ಲಿ ಸಿದ್ಧಾರ್ಥ್‌ ಅವಳನ್ನು ಮೈಸೂರಿಗೆ ಕರೆದುಕೊಂಡು ಬರಲು ಹೇಳುತ್ತಾನೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

mysore-dasara_Entry_Point