ಅಣ್ಣಯ್ಯ ಧಾರಾವಾಹಿ: ಸಂಕಷ್ಟದಲ್ಲಿದ್ದಾನೆ ಶಿವು; ಪಾರುವನ್ನು ಕಾಪಾಡಲು ಹೋಗಿ ತಾನೇ ಕಷ್ಟದಲ್ಲಿ ಸಿಕ್ಕಿಬಿದ್ದ ಶಿವಣ್ಣ-annayya serial zee kannada today episode september 24 shivu is in danger sisters scared smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿ: ಸಂಕಷ್ಟದಲ್ಲಿದ್ದಾನೆ ಶಿವು; ಪಾರುವನ್ನು ಕಾಪಾಡಲು ಹೋಗಿ ತಾನೇ ಕಷ್ಟದಲ್ಲಿ ಸಿಕ್ಕಿಬಿದ್ದ ಶಿವಣ್ಣ

ಅಣ್ಣಯ್ಯ ಧಾರಾವಾಹಿ: ಸಂಕಷ್ಟದಲ್ಲಿದ್ದಾನೆ ಶಿವು; ಪಾರುವನ್ನು ಕಾಪಾಡಲು ಹೋಗಿ ತಾನೇ ಕಷ್ಟದಲ್ಲಿ ಸಿಕ್ಕಿಬಿದ್ದ ಶಿವಣ್ಣ

ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಸಂಕಷ್ಟದಲ್ಲಿದ್ದಾನೆ ಶಿವು. ಪಾರುವನ್ನು ಕಾಪಾಡಲು ಹೋಗಿ ತಾನೇ ಕಷ್ಟದಲ್ಲಿ ಸಿಕ್ಕಿಬಿದ್ದ ಶಿವಣ್ಣ. ದೀಪೋತ್ಸವಕ್ಕೆ ಹೋಗಿ ಅಪಾಯ ತಂದುಕೊಂಡ್ರಾ ಎನ್ನುವ ಅನುಮಾನ ಬರ್ತಾ ಇದೆ. ಈ ಸಂಚಿಕೆಯಲ್ಲಿ ಏನಾಗಿದೆ ನೋಡಿ.

ಝೀ ಕನ್ನಡ: ಅಣ್ಣಯ್ಯ ಧಾರಾವಾಹಿ
ಝೀ ಕನ್ನಡ: ಅಣ್ಣಯ್ಯ ಧಾರಾವಾಹಿ (ಝೀ ಕನ್ನಡ)

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುವನ್ನು ಹೇಗಾದರೂ ಮಾಡಿ ಆ ಕಟುಕನಿಂದ ಕಾಪಾಡಬೇಕು. ಮದುವೆಯನ್ನು ತಪ್ಪಿಸಬೇಕು ಎಂದು ಎಲ್ಲರೂ ಪ್ರಯತ್ನ ಪಡುತ್ತಿದ್ದಾರೆ. ಶಿವು ತಂಗಿಯರು ಪಾರು ತಮ್ಮನೆ ಸೊಸೆ ಆಗಲಿ ಅವಳೇ ನಮ್ಮ ಅತ್ತಿಗೆಯಾಗಿ ಬರಲಿ ಎಂದು ಬಯಸುತ್ತಿದ್ದಾರೆ. ಆ ಕುರಿತು ಅವರೆಲ್ಲರೂ ಚರ್ಚೆ ಮಾಡಿಕೊಂಡರೂ ಸಹ ಅಣ್ಣನೆದುರು ಅಷ್ಟಾಗಿ ಧ್ವನಿ ಎತ್ತುವ ಸಹವಾಸ ಮಾಡಲಿಲ್ಲ. ಅಣ್ಣನಿಗೆ ಹೇಳಿದರು ಅವನು ಬೇಸರ ಮಾಡಿಕೊಳ್ಳುತ್ತಾನೆ.

ಯಾಕೆಂದರೆ ಪಾರು ಮದುವೆ ಬೇರೆಯವರೊಂದಿಗೆ ನಿಶ್ಚಯವಾಗಿದೆ ಎಂದು ಸುಮ್ಮನಿದ್ದಾರೆ. ಆದರೂ ತಮ್ಮ ಕೈಲಾದ ಪ್ರಯತ್ನವನ್ನು ಅವರು ಈಗಲೂ ಮಾಡುತ್ತಲಿದ್ದಾರೆ. ಇನ್ನು ದೀಪೋತ್ಸವಕ್ಕೆ ಎಲ್ಲರೂ ಸೇರಿಕೊಂಡು ಹೊರಟಿದ್ದಾರೆ. ಅದೇ ಸಂದರ್ಭದಲ್ಲಿ ಅತ್ತೆ ದೀಪೋತ್ಸವಕ್ಕೆ ತಲುಪಿದ್ದಾರಾ? ಎಂದು ಕೇಳಲು ಫೋನ್ ಬೇಕು ಎಂದು ಅನಿಸುತ್ತದೆ. ಆಗ ಪಾರು ಅವರ ಮನೆಯಲ್ಲಿ ಬಚ್ಚಿಟ್ಟಿದ್ದ ಫೋನ್ ಅವರಿಗೆ ನೆನಪಾಗುತ್ತದೆ.

ಆದರೆ ಅಷ್ಟರಲ್ಲೆ ಅಣ್ಣಯ್ಯ ಬಂದುಬಿಡುತ್ತಾನೆ. ಅದಕ್ಕೆ ಮೆಸೇಜ್ ಬರುತ್ತದೆ, ಮೆಸೇಜ್ ಬಂದ ಶಬ್ದಕ್ಕೆ ಅಣ್ಣನಿಗೆ ಅನುಮಾನ ಆರಂಭವಾಗುತ್ತದೆ. ಅವನು ಯಾರ ಹತ್ತಿರ ಫೋನ್ ಇದೆ ಎಂದು ಕೇಳುತ್ತಾನೆ. ಆಗ ಅವರೆಲ್ಲರೂ ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಆದರೆ ದೀಪೋತ್ಸವಕ್ಕೆ ಹೋದಾಗ ಅಲ್ಲಿ ಗಂಡಿನ ಕಡೆಯವರು ಇನ್ನೂ ಬಂದಿರುವುದಿಲ್ಲ. ಇವರೆಲ್ಲರೂ ಅತ್ತೆ ಮಾವ ಬರುವುದಕ್ಕಾಗಿ ಕಾಯುತ್ತಿರುತ್ತಾರೆ. ನಂತರ ಅವರ ಅತ್ತೆ ಹತ್ತಿರ ಚಿಕ್ಕ ತಂಗಿ ಕೇಳುತ್ತಾಳೆ. ನಮ್ಮ ಅಕ್ಕ ರತ್ನಾಳ ಮದುವೆಗೂ ಇದೇ ರೀತಿ ದೀಪೋತ್ಸವ ಮಾಡಿಸಬೇಕಾ ಎಂದು. ಆಗ ಅವರು ಹೌದು ಎಂದು ಹೇಳುತ್ತಾರೆ. ಅವಳ ಮದುವೆಗೆ ಮಾತ್ರವಲ್ಲ ನೀವು ನಾಲ್ಕು ಜನರ ಮದುವೆಗೆ ಹೇಗೆ ಮಾಡಬೇಕು ಅಂತ ಹೇಳುತ್ತಾರೆ.

ಆಗ ಇಲ್ಲ ಅಣ್ಣನಿಗೆ ತುಂಬಾ ಖರ್ಚಾಗುತ್ತದೆ ನನಗೆ ಬೇಡ ಎಂದು ರತ್ನ ಹೇಳುತ್ತಾಳೆ. ಅದಾದ ನಂತರ ಗಂಡಿನ ಕಡೆಯವರು ಬರುತ್ತಾರೆ. ಅವರು ಇಂದು ಶಿವುನ ಹೊಡಿಲೇಬೇಕು ಎಂದು ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ವಿಚಾರ ಶಿವುಗೆ ಇನ್ನೂ ತಿಳಿದಿಲ್ಲ. ಹೇಗಾದರೂ ಮಾಡಿ ಅವನನ್ನ ಕೊಲ್ಲಬೇಕು ಎಂಬುದು ಅವರ ಗುರಿಯಾಗಿದೆ. ಎಲ್ಲರೂ ಸೇರಿ ಹೊಡೆಯೋಣ ಎಂದುಕೊಂಡು ಬಂದಿದ್ದಾರೆ. ಶಿವು ಇವರಿಂದ ಹೇಗೆ ತಪ್ಪಿಸಿಕೊಳ್ತಾನೆ ಎಂದು ಕಾದುನೋಡಬೇಕಿದೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

mysore-dasara_Entry_Point