Annayya Serial: ಮಾವನ ಬಳಿ ಮನದ ನೋವು ಹೇಳಿಕೊಂಡ ಪಾರು, ಮಾತು ಕೇಳಿ ಶಾಕ್ ಆದ ಅಣ್ಣಯ್ಯ-annayya tv serial zee kannada today episode september 2 paru conversation with annaya smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಮಾವನ ಬಳಿ ಮನದ ನೋವು ಹೇಳಿಕೊಂಡ ಪಾರು, ಮಾತು ಕೇಳಿ ಶಾಕ್ ಆದ ಅಣ್ಣಯ್ಯ

Annayya Serial: ಮಾವನ ಬಳಿ ಮನದ ನೋವು ಹೇಳಿಕೊಂಡ ಪಾರು, ಮಾತು ಕೇಳಿ ಶಾಕ್ ಆದ ಅಣ್ಣಯ್ಯ

Annayya serial: ಅಣ್ಣಯ್ಯ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಸಾಕಷ್ಟು ಜನ ಮನ್ನಣೆಯನ್ನು ಪಡೆದುಕೊಂಡಿದೆ. ರಾಣಿ, ರತ್ನ, ರಮ್ಯ ಎಂಬ ತಂಗಿಯಂದಿರನ್ನು ಅಣ್ಣಯ್ಯ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾ ಇರುತ್ತಾನೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (ಝೀ ಕನ್ನಡ)

ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಈಗ ಕಷ್ಟದಲ್ಲಿದ್ದಾನೆ. ತಂಗಿ ಇಷ್ಟ ಪಟ್ಟ ಹುಡುಗ ಸಿಗಲಿಲ್ಲ ಎಂದು ನೊಂದುಕೊಂಡಿದ್ದಾನೆ. ಪಾರು ಅವನ ಬಳಿ ಬಂದು ಸಮಾಧಾನ ಮಾಡುತ್ತಿದ್ದಾಳೆ. ಆದರೆ ಅವಳ ಮನಸಲ್ಲೇ ಹೇಳಿಕೊಳ್ಳಲಾಗದಷ್ಟು ಬೇಸರ ಇದೆ. ಆದರೂ ಅದನ್ನು ಹೇಳಿಕೊಂಡಿದ್ದಾಳೆ.

ಪಾರು ಆಡಿದ ಮಾತು

ಅವಳು ಒಂದು ಜಾಗಕ್ಕೆ ಅಣ್ಣಯ್ಯನನ್ನು ಬರ ಹೇಳಿದ್ದಾಳೆ. ತಾನೂ ಅಲ್ಲಿಗೆ ಬಂದು ತಮ್ಮ ಬಾಲ್ಯದ ದಿನವನ್ನು ಮೆಲುಕು ಹಾಕುತ್ತಾ ಇದ್ದಾಳೆ. ಅವಳು ಹೇಳಿದ ಪ್ರತಿಯೊಂದು ಮಾತನ್ನೂ ಸಹ ಅಣ್ಣಯ್ಯ ಕೇಳಿಸಿಕೊಳ್ಳುತ್ತಾ ಮತ್ತೆ ತನ್ನ ಬಾಲ್ಯಕ್ಕೆ ಅವನು ಮರಳಿದ್ದಾನೆ. ಅವನ ಮಾತನ್ನು ಕೇಳುತ್ತಾ ಪಾರು ಖುಷಿಯಾಗಿದ್ದರೆ ಇನ್ನೊಂದು ಕಡೆ ಅವಳ ಮದುವೆ ಬಗ್ಗೆ ಅವಳಿಗೆ ಬೇಸರ ಇದೆ. ತಾವು ಹಿಂದೆ ಇಲ್ಲಿ ಕಳೆದ ದಿನ ಅಂದರೆ ಚಿಕ್ಕಂದಿನಲ್ಲಿ ಆಡಿದ ಜೋಕಾಲಿ ಆಟ, ಕಿತ್ತ ಮಾವಿನ ಹಣ್ಣು ಎಲ್ಲವನ್ನೂ ನೆನೆಪಿಸಿದ್ದಾಳೆ. ಆಗ ಅಣ್ಣಯ್ಯ ಹೇಳುತ್ತಾನೆ '' ಆ ಕಾಲ ಎಷ್ಟು ಚನ್ನಾಗಿತ್ತು ಬರಿ ಸಂತೋಷಗಳೇ ತುಂಬಿತ್ತು'' ಎನ್ನುತ್ತಾನೆ. ಆಗ ಪಾರು ಹೇಳುತ್ತಾಳೆ '' ಇಲ್ಲ ಮಾವ ಈಗಲೂ ಕಾಲ ಚೆನ್ನಾಗಿದೆ. ಕಾಲಕ್ಕೆ ಏನೂ ಆಗೋದಿಲ್ಲ. ಆದರೆ ಬದುಕ ರೀತಿಯನ್ನು ನಾವು ಬದಲಾಯಿಸಿಕೊಂಡು ಕಾಲವನ್ನು ದೂರುತ್ತಾ ಇದ್ಧೆವೆ'' ಎಂದು ಹೇಳುತ್ತಾಳೆ.

ಅದನ್ನು ಕೇಳಿ ಅವನಿಗೂ ಅವಳ ಮಾತು ಸತ್ಯ ಎಂದು ಅನಿಸುತ್ತದೆ. ಅವನು ''ಹೌದು'' ಎಂದು ಹೇಳುತ್ತಾನೆ. ಅದಾದ ನಂತರ ಅವಳು ಮಾವನಿಗೆ ಸಮಾಧಾನ ಮಾಡುತ್ತಾಳೆ. ''ನೀನು ಈ ರೀತಿ ಬೇಸರ ಮಾಡಿಕೊಂಡು ಇರಬೇಡ. ನೀನು ಹೀಗೆ ಇದ್ದರೆ ನಿಮ್ಮ ಮನೆಯಲ್ಲಿ ಯಾರಿಗೂ ಸಮಾಧಾನ ಇರೋದಿಲ್ಲ. ನಿನ್ನ ತಂಗಿಯರು ಯಾರೂ ನಿನ್ನ ಈ ರೀತಿ ನೋಡೋಕೆ ಬಯಸೋದಿಲ್ಲ. ನಾನು ಅವರ ಹತ್ತಿರ ಮಾತಾಡ್ಕೊಂಡು ಬಂದೆ. ಅಣ್ಣ ಬೇಸರ ಮಾಡಿಕೊಂಡಿದ್ದಾನೆ. ಅದಕ್ಕಾಗಿ ನನಗೆ ತುಂಬಾ ಬೇಜಾರಾಗ್ತಿದೆ ಎಂದು ಅವಳು ಹೇಳಿದ್ದಾಳೆ'' ಎನ್ನುತ್ತಾಳೆ. ಆಗ ಅಣ್ಣಯ್ಯ '' ನಾನಾದ್ರೂ ಹೇಗೆ ಬೇಸರ ಮಾಡಿಕೊಳ್ಳದೆ ಇರಲಿ. ನನ್ನ ತಂಗಿ ಇಷ್ಟಪಟ್ಟವನಿಗೆ ಮದುವೆ ಮಾಡಿ ಕೊಡಲಾಗಲಿಲ್ಲ ಎಂಬ ಕೊರಗು ನನಗೂ ಇರುತ್ತಲ್ವಾ?'' ಎಂದು ಕೇಳುತ್ತಾನೆ.

ಎಲ್ಲರಿಗೂ ನೋವು ಇರುತ್ತೆ

ಆ ನಂತ್ರ ಪಾರು ಹೇಳುತ್ತಾಳೆ. '' ಎಲ್ಲರಿಗೂ ನೋವು ಇರುತ್ತೆ ಆದ್ರೆ ಯಾವಾಗಲೂ ಅದರಲ್ಲೇ ಇದ್ರೆ ಆಗೋದಿಲ್ಲ. ಅದನ್ನು ಮುಂದೆ ಹೇಗೆ ಪರಿಹಾರ ಮಾಡ್ಬೇಕು ಅಂತ ನೋಡ್ಬೇಕು'' ಅಂತಾಳೆ. ಆಗ ಅವಳು ಹೇಳ್ತಾಳೆ ಎಲ್ಲರಿಗೂ ತಾವು ಇಷ್ಟಪಟ್ಟವರನ್ನು ಮದುವೆ ಆಗೋ ಭಾಗ್ಯ ಇರೋದಿಲ್ಲ. ನನಗೂ ಹಾಗೇ ಆಗಿದೆ'' ಎಂದು. ಆ ಮಾತನ್ನು ಕೇಳಿ ಇವನಿಗೆ ಆಶ್ಚರ್ಯ ಆಗುತ್ತದೆ. ಅರೆ ಏನ್ ಹೇಳ್ತಾ ಇದ್ದಾಳೆ ಇವಳು? ಇವಳು ಮದುವೆ ಆಗ್ತಾ ಇರೋದೆ ಇವಳಿಗೆ ಇಷ್ಟ ಇಲ್ವ? ಎಂದು ಆಲೋಚನೆ ಮಾಡ್ತಾನೆ. ಆದ್ರೆ ನಿಜವಾಗಿಯೂ ಅವನು ಅಂದುಕೊಂಡ ಹಾಗೇ ಆಗಿರುತ್ತದೆ.

ಅಣ್ಣಯ್ಯ ಧಾರಾವಾಹಿ

ಅಣ್ಣಯ್ಯ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಸಾಕಷ್ಟು ಜನ ಮನ್ನಣೆಯನ್ನು ಪಡೆದುಕೊಂಡಿದೆ. ರಾಣಿ, ರತ್ನ, ರಮ್ಯ ಎಂಬ ತಂಗಿಯಂದಿರನ್ನು ಅಣ್ಣಯ್ಯ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾ ಇರುತ್ತಾನೆ. ಈಗ ಪಾರು ಅವನನ್ನು ಇಷ್ಟಪಡುತ್ತಾ ಇದ್ದಾಳೆ. ನಾಳಿನ ಸಂಚಿಕೆಯಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.