ಅನುರಾಗ್ ಬಸು ನಿರ್ದೇಶನದ ʻಮೆಟ್ರೋ...ಇನ್ ದಿನೋʼ ಚಿತ್ರತಂಡದಿಂದ ಬೆಂಗಳೂರಿನಲ್ಲಿ ಪ್ರಚಾರ; ಜುಲೈ 4ರಂದು ಬಿಡುಗಡೆ
ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ‘ಮೆಟ್ರೋ...ಇನ್ ದಿನೋ’ ತಂಡವು ಜೂನ್ 24 ರಂದು ಬೆಂಗಳೂರಿಗೆ ಆಗಮಿಸಿತ್ತು. ಇನ್ನೇನು ಜುಲೈ 4ರಂದು ತೆರೆಗೆ ಬರಲಿರುವ ಈ ಸಿನಿಮಾ ಬಗ್ಗೆ ಪ್ರಚಾರ ಕಾರ್ಯ ನಡೆಸಿತು.

ಅನುರಾಗ್ ಬಸು ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಮೆಟ್ರೋ...ಇನ್ ದಿನೋ’ ತಂಡವು ಜೂನ್ 24 ರಂದು ಬೆಂಗಳೂರಿಗೆ ಆಗಮಿಸಿತ್ತು. ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್, ಪ್ರೀತಮ್, ಗಾಯಕ ಶಶ್ವತ್ ಸಿಂಗ್ ಅವರು ಈ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದರು.
‘ಮೆಟ್ರೋ…ಇನ್ ಡಿನೋ’ ಚಿತ್ರವು ಪ್ರೇಮ, ನಿಷ್ಠೆ ಮತ್ತು ಆಧುನಿಕ ಸಂಬಂಧಗಳ ಭಾವನಾತ್ಮಕ ತಿರುವುಗಳನ್ನು ಸ್ಪರ್ಶಿಸುವ ನಾಲ್ಕು ವಿಭಿನ್ನ ಕಥೆಗಳ ಸಂಕಲನವಾಗಿದೆ. ಪ್ರತಿ ಕಥೆಯೂ ತನ್ನದೇ ಆದ ನಗುಮುಖದ ಹಾಗೂ ಮನಮುಟ್ಟುವ ಲಹರಿಯೊಂದಿಗೆ ಪ್ರೇಕ್ಷಕರ ಹೃದಯ ತಟ್ಟುತ್ತದೆ. ಬದುಕಿನ ಸದ್ದು-ಗುದ್ದಲದಲ್ಲಿ ಬದುಕುತ್ತಿರುವ ಸಂದರ್ಭಗಳಲ್ಲಿ ಒಬ್ಬರನ್ನೇ ಮತ್ತೆ ಮತ್ತೆ ಪ್ರೀತಿಸುವ ಯಥಾರ್ಥತೆ ಚಿತ್ರದಲ್ಲಿ ಆಳವಾಗಿ ಮೂಡಿಬಂದಿದೆ.
‘ಮೆಟ್ರೋ...ಇನ್ ದಿನೋ’ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಕೊಂಕಣ್ ಸೇನ್ ಶರ್ಮಾ, ಅಲಿ ಫಜಲ್, ಫಾತಿಮಾ ಸನಾ ಶೇಖ್, ಅನುಪಮ್ ಖೇರ್ ಮತ್ತು ನೀನಾ ಗುಪ್ತಾ ಸೇರಿದಂತೆ ತಾರಾಗಣವಿದೆ. ಈ ಚಿತ್ರವು ಜುಲೈ 4ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಗುಲ್ಷನ್ ಕುಮಾರ್ ಅವರ ಟಿ ಸಿರೀಸ್, ಅನುರಾಗ್ ಬಸು ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಅವರೊಂದಿಗೆ ಸಹಯೋಗದಲ್ಲಿ ಈ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ. ಅನುರಾಗ್ ಬಸು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಪ್ರಥಮ್ ಸಂಗೀತ ಸಂಯೋಜಿಸಿದ್ದು, ಭೂಷಣ್ ಕುಮಾರ್, ಕೃಷ್ಣ ಕುಮಾರ್, ಅನುರಾಗ್ ಬಸು ಮತ್ತು ತಾನಿ ಬಸು ನಿರ್ಮಾಪಕರಾಗಿದ್ದಾರೆ. ಜುಲೈ 4 ರಂದು ‘ಮೆಟ್ರೋ…ಇನ್ ಡಿನೋ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ವಿಭಾಗ