ಕನ್ನಡ ಸುದ್ದಿ  /  ಮನರಂಜನೆ  /  Anushka Shetty: ಅನುಷ್ಕಾ ಶೆಟ್ಟಿ ತೆಗೆದುಕೊಂಡ ಆ ಕೆಟ್ಟ ನಿರ್ಧಾರ ಕೆರಿಯರ್‌ಗೆ ಹೊಡೆತ ಕೊಡ್ತು; ಪ್ರತಿಭೆ ಗ್ಲಾಮರ್ ಇದ್ದರೂ ಮಂಕಾದ ಕನ್ನಡತಿ

Anushka Shetty: ಅನುಷ್ಕಾ ಶೆಟ್ಟಿ ತೆಗೆದುಕೊಂಡ ಆ ಕೆಟ್ಟ ನಿರ್ಧಾರ ಕೆರಿಯರ್‌ಗೆ ಹೊಡೆತ ಕೊಡ್ತು; ಪ್ರತಿಭೆ ಗ್ಲಾಮರ್ ಇದ್ದರೂ ಮಂಕಾದ ಕನ್ನಡತಿ

Anushka Shetty: ತೆಲುಗು, ತಮಿಳು ಮಾತ್ರವಲ್ಲದೆ ಬಾಹುಬಲಿ ಸಿನಿಮಾದ ಮೂಲಕ ದೇಶ-ವಿದೇಶದಲ್ಲಿ ಮನೆಮಾತಾದ ಅನುಷ್ಕಾ ಶೆಟ್ಟಿ ಅವರ ಕೆರಿಯರ್‌ ಗ್ರಾಪ್‌ ಕುಸಿಯಲು ಸೈಜ್‌ ಝೀರೋ ಸಿನಿಮಾ ಕಾರಣ ಎಂದು ತಮಿಳು ಪತ್ರಕರ್ತ ಚೆಯ್ಯಾರು ಬಾಲು ಹೇಳಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.

ನಟಿ ಅನುಷ್ಕಾ ಶೆಟ್ಟಿ
ನಟಿ ಅನುಷ್ಕಾ ಶೆಟ್ಟಿ (instagram)

ಬೆಂಗಳೂರು: ದಕ್ಷಿಣ ಭಾರತದ ಸಿನಿಮಾ ಪ್ರೇಮಿಗಳಿಗೆ ಅನುಷ್ಕಾ ಶೆಟ್ಟಿ ಅಚ್ಚುಮೆಚ್ಚಿನ ನಟಿ. ಕರ್ನಾಟಕ ಮೂಲದ ಅನುಷ್ಕಾ ನಟನೆಯ ಚಿತ್ರಗಳು ಬಂದರೆ ಕನ್ನಡಿಗರೂ ಸಂಭ್ರಮದಿಂದ ನೋಡುತ್ತಿದ್ದರು. ಬಾಹುಬಲಿ ಸಿನಿಮಾದಲ್ಲಿ ನಟಿಸಿದ ಬಳಿಕವಂತೂ ಇವರ ಜನಪ್ರಿಯತೆ ಹೆಚ್ಚಾಯಿತು. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿಗೆ ಸಾಕಷ್ಟು ಅವಕಾಶಗಳು ದೊರಕಿದವು. ವಿಜಯ್‌, ಅಜಿತ್‌, ಸೂರ್ಯನಂತಹ ಮಹಾ ನಟರ ಜತೆ ಅನುಷ್ಕಾ ಶೆಟ್ಟಿ ನಟಿಸಿದರು. ಕೆಲವು ವರ್ಷಗಳ ಹಿಂದೆ ಎಲ್ಲೆಲ್ಲೂ ಅನುಷ್ಕಾ ಶೆಟ್ಟಿಯದ್ದೇ ಹವಾ. ತುಂಬಾ ಬೇಡಿಕೆಯ ನಟಿ ಎನಿಸಿಕೊಂಡಿದ್ದರು.

ಟ್ರೆಂಡಿಂಗ್​ ಸುದ್ದಿ

2009ರಲ್ಲಿ ಅರುಂದತಿ ಸಿನಿಮಾ ಬಿಡುಗಡೆಯಾಯಿತು. ಇದು ಇವರ ಸಿನಿಮಾ ಕರಿಯರ್‌ನಲ್ಲೇ ಟರ್ನಿಂಗ್‌ ಪಾಯಿಂಟ್‌ ಎನ್ನಬಹುದು. ಅರುಂಧತಿಗೆ ಮೊದಲು ಇವರಿಗೆ ಸಾಮಾನ್ಯ ಪಾತ್ರಗಳು ದೊರಕುತ್ತಿತ್ತು. ಅಂದರೆ, ನಾಯಕಿಯ ಪಾತ್ರಕ್ಕಿಂತ ತುಸು ಕಡಿಮೆ ಮಹತ್ವದ ಪಾತ್ರಗಳು ದೊರಕುತ್ತಿದ್ದವು. ಬಳಿಕ ಬಾಹುಬಲಿ ನಟನೆಯಿಂದ ಇವರು ಪಾನ್‌ ಇಂಡಿಯನ್‌ ಲೆವೆಲ್‌ಗೆ ಮಿಂಚಿದರು. ಬಾಹುಬಲಿಯ ಬಳಿಕವೂ ಹಲವು ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಹಲವು ವರ್ಷಗಳ ಗ್ಯಾಪ್‌ ಬಳಿಕ ಮಿಸ್‌ ಶೆಟ್ಟಿ ಮಿಸ್ಟರ್‌ ಪೋಲಿಶೆಟ್ಟಿ ಸಿನಿಮಾದ ಮೂಲಕ ವಾಪಸ್‌ ಬರುತ್ತಿದ್ದಾರೆ.

ಒಂದೊಮ್ಮೆ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಅನುಷ್ಕಾ ಶೆಟ್ಟಿ ನಂತರ ಬೇಡಿಕೆ ಕಳೆದುಕೊಂಡದ್ದು ಏಕೆ? ಅವರು ತನ್ನ ಕೆರಿಯರ್‌ನಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರ ಏನು? ಈ ಪ್ರಶ್ನೆ ಸಾಕಷ್ಟು ಸಿನಿ ಅಭಿಮಾನಿಗಳಲ್ಲಿ ಇದೆ. ಇದಕ್ಕೆ ಕಾರಣ ಏನು ಎಂದು ತಮಿಳು ಸಿನಿಮಾ ಪತ್ರಕರ್ತರಾದ ಕಿರ್ಯಾರು ಬಾಲು ಅವರು ಕಂಡುಕೊಂಡಿದ್ದಾರೆ. ಈ ಕುರಿತು ಅವರು ಸಾಕಷ್ಟು ವಿವರ ನೀಡಿದ್ದಾರೆ. ಅವರ ಪ್ರಕಾರ ಅನುಷ್ಕಾ ಶೆಟ್ಟಿಯು ಹಿಂದೊಮ್ಮೆ ಪ್ರತಿಯೊಂದು ಭಾಷೆಗೂ ಒಂದೊಂದು ಮ್ಯಾನೇಜರ್‌ರನ್ನು ಹೊಂದಿದ್ದರು. ಅಷ್ಟೊಂದು ಬ್ಯುಸಿ ಶೆಡ್ಯೂಲ್‌ನಲ್ಲಿದ್ದ ನಟಿ.

ಅನುಷ್ಕಾ ಶೆಟ್ಟಿ ತೆಗೆದುಕೊಂಡ ಒಂದು ಕೆಟ್ಟ ನಿರ್ಧಾರ

ಅನುಷ್ಕಾ ಶೆಟ್ಟಿ ಅವರು ಸೈಜ್‌ ಝೀರೊ ಸಿನಿಮಾಕ್ಕಾಗಿ ತೆಗೆದುಕೊಂಡ ನಿರ್ಧಾರವೇ ಈ ಮಹಾಪತನಕ್ಕೆ ಕಾರಣ ಎನ್ನಲಾಗಿದೆ. ಈ ಸಿನಿಮಾಕ್ಕಾಗಿ ಅನುಷ್ಕಾ ಶೆಟ್ಟಿ ತೂಕ ಹೆಚ್ಚಿಸಿಕೊಂಡರು. ನಿರ್ದೇಶಕರ ಮೇಲಿದ್ದ ನಂಬಿಕೆಯ ಕಾರಣದಿಂದ ಅನುಷ್ಕಾ ಶೆಟ್ಟಿ ಈ ನಿರ್ಧಾರ ತೆಗೆದುಕೊಂಡರು. ಆದರೆ, ಒಮ್ಮೆ ತೂಕ ಹೆಚ್ಚಿಸಿಕೊಂಡ ಬಳಿಕ ಅವರಿಗೆ ತೂಕ ಕಳೆದುಕೊಳ್ಳಲು ಆಗಲಿಲ್ಲ. ಸಾಕಷ್ಟು ಜನರು ಸರ್ಜರಿ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಇವರಿಗೆ ಸಲಹೆ ನೀಡಿದ್ರಂತೆ. ಆದರೆ, ಶಸ್ತ್ರಚಿಕಿತ್ಸೆ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಅನುಷ್ಕಾ ಬಯಸಲಿಲ್ಲ ಎಂದು ಚೆಯ್ಯಾರು ಬಾಲು ಹೇಳಿದ್ದಾರೆ.

ಸತ್ಯ ಗೊತ್ತಿಲ್ಲದೆ ಟ್ರೊಲ್‌ಗೆ ಒಳಗಾಗಿದ್ದರು ನಟಿ ಅನುಷ್ಕಾ ಶೆಟ್ಟಿ

ಈ ರೀತಿ ತೂಕ ಹೆಚ್ಚಿಸಿಕೊಂಡ ಅನುಷ್ಕಾ ಶೆಟ್ಟಿ ಅವರು ಬಾಡಿ ಷೇಮಿಂಗ್‌ಗೆ ಒಳಗಾಗಿದ್ದರು. ಜನರು ಕೆಟ್ಟದ್ದಾಗಿ ಟ್ರೋಲ್‌ ಮಾಡಲು ಆರಂಭಿಸಿದ್ದರು. ಇವರ ತೂಕ ಹೆಚ್ಚಳಕ್ಕೆ ಹಲವು ಸುಳ್ಳು ಕಾರಣಗಳನ್ನು ನೀಡಿ ಟ್ರೋಲ್‌ ಮಾಡಲಾಗಿತ್ತು. ಈ ರೀತಿಯ ಟ್ರೊಲ್‌ನಿಂದ ಬೇಸೆತ್ತ ಅನುಷ್ಕಾ ಶೆಟ್ಟಿಯವರು ಕೆಲವು ಸಮಯ ಮನೆಯಿಂದ ಹೊರಬರಲು ಬಯಸಿರಲಿಲ್ಲ. ಅಷ್ಟೊಂದು ನೋವು ಅನುಭವಿಸಿದ್ದರು ಎಂದು ಚೆಯ್ಯಾರು ಬಾಲು ಹೇಳಿದ್ದಾರೆ.

ಪ್ರಭಾಸ್‌ ಮತ್ತು ಅನುಷ್ಕಾ ಕೆಮಿಸ್ಟ್ರಿ

ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಮತ್ತು ಪ್ರಭಾಸ್‌ ಅವರ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟವಾಗಿತ್ತು. ಅವರಿಬ್ಬರು ಪ್ರೀತಿಗೆ ಬಿದ್ದಿದ್ದಾರೆ ಎಂದು ಬಳಿಕ ರೂಮರ್‌ಗಳು ಹಬ್ಬಿದವು. ಆದರೆ, ಈ ವದಂತಿ ನಿಜವೋ, ಸುಳ್ಳೋ ಎಂದು ಸ್ಪಷ್ಟವಾಗಿಲ್ಲ ಎಂದು ಕಬಾಲು ಹೇಳಿದ್ದಾರೆ. ಆರಂಭದಲ್ಲಿ ಅನುಷ್ಕಾ ಶೆಟ್ಟಿ ಅವರು ಗ್ಲಾಮರಸ್‌ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು. ಬಳಿಕ ಅಂತಹ ದೃಶ್ಯಗಳಲ್ಲಿಯೂ ಕಾಣಿಸಿಕೊಂಡರು. ಈಗ ಕೆಲವು ಸಿನಿಮಾಗಳಲ್ಲಿ ಗ್ಲಾಮರಸ್‌ ಇಲ್ಲದೆ ನಟಿಸಿವುದು ಕಷ್ಟ ಎನ್ನುವಂತಾಗಿದೆ ಎಂದು ಬಾಲು ಹೇಳಿದ್ದಾರೆ.

ಇದೀಗ ಅಭಿಮಾನಿಗಲೂ ಅನುಷ್ಕಾ ಶೆಟ್ಟಿಯವರ ಹೊಸ ಚಿತ್ರಗಳಿಗೆ ಕಾಯುತ್ತಿದ್ದಾರೆ. ಬಾಹುಬಲಿ ಬಳಿಕ ಇವರ ವಿರುದ್ಧ ಸಾಕಷ್ಟು ಮಾತುಗಳು ಕೇಳಿಬಂದಿದ್ದವು. ಇವರು ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು. ಇನ್ನು ಕೆಲವರು ಈಕೆಯ ತೂಕ ಹೆಚ್ಚಾದ್ದರಿಂದ ಅವಕಾಶಗಳು ದೊರಕುತ್ತಿಲ್ಲ ಎಂದರು. ಇಂತಹ ಯಾವುದೇ ಕಾಮೆಂಟ್‌ಗೆ ಅನುಷ್ಕಾ ಶೆಟ್ಟಿ ಮಾರುತ್ತರ ನೀಡಿರಲಿಲ್ಲ.

ಅನುಷ್ಕಾ ಶೆಟ್ಟಿ ಅವರು ವೈಯಕ್ತಿಕ ಜೀವನದಲ್ಲಿ ತುಂಬಾ ಖಾಸಗಿತನ ಬಯಸುತ್ತಾರೆ. ಸಿನಿಮಾ ಶೂಟಿಂಗ್‌ ಹೊರತುಪಡಿಸಿ ಇವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ. ಇವರು ತನ್ನ ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತಾರೆ. 41 ವರ್ಷವಾಗಿದ್ದರೂ ಅನುಷ್ಕಾ ಸಿಂಗಲ್‌ ಆಗಿರುವುದು ಅಭಿಮಾನಿಗಳ ನಡುವೆ ಚರ್ಚೆಯಾಗುತ್ತಿದೆ. ಅನುಷ್ಕಾ ಮತ್ತು ಪ್ರಭಾಸ್‌ಗೆ ಲವ್‌ ಇದೆ ಎನ್ನುವ ವದಂತಿ ಸಾಕಷ್ಟು ವರ್ಷದಿಂದ ಇದೆ. ಆದರೆ, ಇವರಿಬ್ಬರೂ ಈ ವದಂತಿಯನ್ನು ನಿರಾಕರಿಸಿದ್ದಾರೆ. ಪ್ರಭಾಸ್‌ ಕೂಡ ಹಲವು ಸಂದರ್ಶನಗಳಲ್ಲಿ ಈ ವದಂತಿಯನ್ನು ನಿರಾಕರಿಸಿದ್ದಾರೆ. ಅಂದಹಾಗೆ, 43 ವರ್ಷದ ಪ್ರಬಾಸ್‌ ಕೂಡ ಸಿಂಗಲ್‌. (ಪೂರಕ ಮಾಹಿತಿ: ಇಂಡಿಯಾ ಪೋಸ್ಟ್‌ಸೆನ್‌)

-

ಟಿ20 ವರ್ಲ್ಡ್‌ಕಪ್ 2024