AR Rahman divorce: ಮತ್ತೆ ಒಂದಾಗ್ತಾರಾ ಎಆರ್ ರೆಹಮಾನ್, ಸೈರಾ ಬಾನು? ವೈರಲ್ ಆಯ್ತು ವಕೀಲೆ ವಂದನಾ ಶಾ ಮಾತು
ಕನ್ನಡ ಸುದ್ದಿ  /  ಮನರಂಜನೆ  /  Ar Rahman Divorce: ಮತ್ತೆ ಒಂದಾಗ್ತಾರಾ ಎಆರ್ ರೆಹಮಾನ್, ಸೈರಾ ಬಾನು? ವೈರಲ್ ಆಯ್ತು ವಕೀಲೆ ವಂದನಾ ಶಾ ಮಾತು

AR Rahman divorce: ಮತ್ತೆ ಒಂದಾಗ್ತಾರಾ ಎಆರ್ ರೆಹಮಾನ್, ಸೈರಾ ಬಾನು? ವೈರಲ್ ಆಯ್ತು ವಕೀಲೆ ವಂದನಾ ಶಾ ಮಾತು

ಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಕುತೂಹಲ ಹುಟ್ಟಿಸುತ್ತಿದೆ. ವಕೀಲೆ ವಂದನಾ ಶಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಇಬ್ಬರ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

 ಮತ್ತೆ ಒಂದಾಗುತ್ತಾರಾ ಎಆರ್ ರೆಹಮಾನ್, ಸೈರಾ ಬಾನು
ಮತ್ತೆ ಒಂದಾಗುತ್ತಾರಾ ಎಆರ್ ರೆಹಮಾನ್, ಸೈರಾ ಬಾನು

ಮೂರು ದಶಕಗಳ ದಾಂಪತ್ಯದ ನಂತರ ಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದ್ದು ನಿಮಗೆ ಗೊತ್ತಿದೆ. ಆದರೆ ವಕೀಲ ವಂದನಾ ಶಾ ಹೇಳಿದ ಮಾತು ಮತ್ತಷ್ಟು ಕುತೂಹಲ ಉಂಟುಮಾಡಿದೆ. ಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಮತ್ತೆ ಒಂದಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ರೀತಿ ಮಾತು ಸಂದರ್ಶನವೊಂದರಲ್ಲಿ ಬಂದಿದೆ.

ವಿಕ್ಕಿ ಲಾಲ್ವಾನಿ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಕೀಲ ವಂದನಾ ಶಾ, ಎಆರ್ ರೆಹಮಾನ್ ಮತ್ತು ಸೈರಾ ಬಾನು ವಿಚ್ಛೇದನದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇಬ್ಬರು ಬೇರ್ಪಟ್ಟರೆ ಅವರ ಮೂವರು ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಆ ಪ್ರಶ್ನೆ ಕೇಳಿದಾಗ ಅವರ ಉತ್ತರ ಬೇರೆ ರೀತಿಯೇ ಇತ್ತು “ಅವರ ಮಕ್ಕಳು ದೊಡ್ಡವರಾಗಿದ್ದಾರೆ. ಅವರಿಗೆ ತಾವು ಯಾರ ಜೊತೆ ಇರಬೇಕು ಎಂದು ತಮ್ಮ ನಿರ್ಧಾರ ತಿಳಿಸುವ ವಿವೇಚನೆ ಇದೆ” ಎಂದು ಹೇಳಿದ್ದಾರೆ

995ರಲ್ಲಿ ಇವರಿಬ್ಬರು ಮದುವೆಯಾದರೂ ಸೈರಾ ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇನ್ನು ಎಆರ್ ರೆಹಮಾನ್ ಅವರು ಎಷ್ಟು ಹಣವನ್ನು ಸಾಯಿರಾ ಬಾನು ಅವರಿಗೆ ಕೊಡಬೇಕಾಗುತ್ತದೆ ಎಂದು ಪ್ರಶ್ನೆ ಮಾಡಿದಾಗ. ಅವರು ವಿವಾಹ ವಿಚ್ಚೇದನವನ್ನು ಅಂತಿಮಗೊಳಿಸಿದರೆ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಎಷ್ಟು ಕೊಡಬೇಕಾಗುತ್ತದೆ ಎಂಬುದನ್ನು ನಾನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇಬ್ಬರೂ ಮತ್ತೆ ಒಂದಾಗುತ್ತಾರಾ?

ಎಆರ್ ರೆಹಮಾನ್ ಹಾಗೂ ಸೈರಾ ಬಾ ಮತ್ತೆ ಒಂದಾಗುವ ಸಾಧ್ಯತೆಯನ್ನು ವಂದನಾ ಶಾ ತಳ್ಳಿ ಹಾಕಿಲ್ಲ ಎಂಬುದು ಗಮನಾರ್ಹ. ಅವರಿಬ್ಬರ ನಡುವೆ ಮತ್ತೆ ಹೊಂದಾಣಿಕೆ ಆದರೂ ಆಗಬಹುದು. ನಾನು ಯಾವಾಗಲೂ ಪ್ರೀತಿ ಹಾಗೂ ನಂಬಿಕೆಯ ಮೇಲೆ ಭರವಸೆ ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಎಆರ್ ರೆಹಮಾನ್ ತಾವು ವಿಚ್ಛೇದನ ಪಡೆಯುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿ ಶಾಕ್ ನೀಡಿದ್ದರು. ಅವರು 29 ವರ್ಷಗಳಿಂದ ಒಟ್ಟಿಗೆ ಬಾಳ್ವೆ ಮಾಡುತ್ತಿದ್ದು, ಒಂದೇ ಬಾರಿ ಜನರಿಗೆ ಈ ವಿಷಯ ತಿಳಿಸಿ ಶಾಕ್ ನೀಡಿದ್ದರು. ಈಗ ಅವರ ಅಗಲಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇಬ್ಬರಿಗೂ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. ಇವರಲ್ಲಿ ಖತೀಜಾ ಮದುವೆಯಾಗಿದ್ದಾರೆ. ಈಗ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಬಯಸುತ್ತಿದ್ದಾರೆ ಎಂದು ವಕೀಲೆ ವಂದನಾ ಹೇಳಿದ್ದಾರೆ.

Whats_app_banner