Brahmastra: ಬ್ರಹ್ಮಾಸ್ತ್ರ ಚಿತ್ರದ ಹಾಡುಗಳಿಗಾಗಿ ಅರಿಜಿತ್ ಸಿಂಗ್‌ಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ಮಾಧುರ ಕಂಠಕ್ಕೆ ಗೌರವ-arijit singh wins best playback singer award for brahmastra in 70th national film awards kesariya tera deva deva jra ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Brahmastra: ಬ್ರಹ್ಮಾಸ್ತ್ರ ಚಿತ್ರದ ಹಾಡುಗಳಿಗಾಗಿ ಅರಿಜಿತ್ ಸಿಂಗ್‌ಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ಮಾಧುರ ಕಂಠಕ್ಕೆ ಗೌರವ

Brahmastra: ಬ್ರಹ್ಮಾಸ್ತ್ರ ಚಿತ್ರದ ಹಾಡುಗಳಿಗಾಗಿ ಅರಿಜಿತ್ ಸಿಂಗ್‌ಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ಮಾಧುರ ಕಂಠಕ್ಕೆ ಗೌರವ

Arijit Singh: 'ಬ್ರಹ್ಮಾಸ್ತ್ರ' ಚಿತ್ರದ 'ಕೇಸರಿಯಾ ತೇರʼ ಹಾಗೂ ದೇವಾ ದೇವಾ ಹಾಡು ಭಾರಿ ಜನಪ್ರಿಯತೆ ಗಳಿಸಿತ್ತು. ಈಗಲೂ ಈ ಹಾಡುಗಳನ್ನು ರಿಪೀಟ್‌ ಮೋಡ್‌ನಲ್ಲಿ ಕೇಳುವವರಿದ್ದಾರೆ. ಅರಿಜಿತ್ ಸಿಂಗ್‌ ಅವರ ಮಾಂತ್ರಿಕ ಧ್ವನಿಗೆ ಅರ್ಹ ರೀತಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.

ಬ್ರಹ್ಮಾಸ್ತ್ರ ಚಿತ್ರದ ಹಾಡುಗಳಿಗಾಗಿ ಅರಿಜಿತ್ ಸಿಂಗ್‌ಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ
ಬ್ರಹ್ಮಾಸ್ತ್ರ ಚಿತ್ರದ ಹಾಡುಗಳಿಗಾಗಿ ಅರಿಜಿತ್ ಸಿಂಗ್‌ಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ

National film awards 2024: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಘೋಷಣೆಯಾಗಿವೆ. ಕನ್ನಡದ ಚಿತ್ರ ಹಾಗೂ ನಟರಿಗೂ ಪ್ರಶಸ್ತಿಗಳು ದೊರೆತಿವೆ. ಇದೇ ವೇಳೆ ಖ್ಯಾತ ಗಾಯಕ ಅರಿಜಿತ್‌ ಸಿಂಗ್‌ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಸಿಕ್ಕಿದೆ. ಬ್ರಹ್ಮಾಸ್ತ್ರ ಚಿತ್ರದ ಹಲವು ಹಿಟ್‌ ಹಾಡುಗಳನ್ನು ಅರಿಜಿತ್ ಸಿಂಗ್ ಹಾಡಿದ್ದು, ಈ ಚಿತ್ರದಲ್ಲಿನ ಹಾಡುಗಳಿಗಾಗಿ ಅರಿಜಿತ್‌ಗೆ ಪ್ರಶಸ್ತಿ ಒಲಿದಿದೆ.

ಹಿಂದಿಯ 'ಕೇಸರಿಯಾ ತೇರʼ ಹಾಡನ್ನು ಕೇಳದವರಿರಲು ಸಾಧ್ಯವಿಲ್ಲ. 'ಬ್ರಹ್ಮಾಸ್ತ್ರ' ಚಿತ್ರದ ಹಾಡನ್ನು ತಮ್ಮ ಆಕರ್ಷಕ ಧ್ವನಿಯಲ್ಲಿ ಹಾಡಿದವರು ಅರಿಜಿತ್. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಚಿತ್ರದ ಹಾಡಿಗೆ ಅರಿಜಿತ್‌ ಮ್ಯಾಜಿಕಲ್‌ ಧ್ವನಿ ಮೋಡಿ ಮಾಡಿದೆ. ಎಲ್ಲೆಡೆ ವೈರಲ್‌ ಆಗಿ ಯುವಕರು ಈಗಲೂ ಹಾಡನ್ನು ಗುನುಗುನಿಸುತ್ತಾರೆ. ವಿಶೇಷವೆಂದರೆ‌, Spotifyನಲ್ಲಿ 500 ಮಿಲಿಯನ್ ಸ್ಟ್ರೀಮ್‌ಗಳನ್ನು ದಾಟಿದ ಭಾರತದ ಮೊದಲ ಹಾಡು ಎಂಬ ದಾಖಲೆ ಬರೆದಿದೆ. ಇದೇ ವೇಳೆ ಇದೇ ಚಿತ್ರದ 'ದೇವಾ ದೇವಾ' ಹಾಡು ಕೂಡಾ ಎಲ್ಲಾ ವರ್ಗದ ಜನರ ಫೇವರೆಟ್‌ ಆಗಿ ಹೊಮ್ಮಿದೆ. ಈ ಎರಡೂ ಹಾಡುಗಳಿಗೆ ಧ್ವನಿಯಾದವರು ಅರಿಜಿತ್.

ಆಯನ್‌ ಮುಖರ್ಜಿ ನಿರ್ದೇಶನದ ಬರ್ಹ್ಮಾಸ್ತ್ರ ಚಿತ್ರ 2022ರಲ್ಲಿ ಬಿಡುಗಡೆಯಾಗಿದೆ. ಇದರ ಜನಪ್ರಿಯ ಗೀತೆ ಕೇಸರಿಯಾ ಹಾಡಿಗೆ ಸಾಹಿತ್ಯ ಬರೆದವರು ಅಮಿತಾಬ್‌ ಭಟ್ಟಾಚಾರ್ಯ. ಪ್ರೀತಂ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡಿಗೆ ಧ್ವನಿಯಾದವರು ಅರಿಜಿತ್. "ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಹಾಡು ಕೇಸರಿಯಾ" ಎಂದು ಈಗಾಗಲೇ ಅರಿಜಿತ್‌ ಹೇಳಿಕೊಂಡಿದ್ದಾರೆ. ಸಂಗೀತ ಪ್ರಿಯರ ಪ್ರೀತಿಗೆ ಅವರು ಖುಷಿಪಟ್ಟಿದ್ದಾರೆ. ಕೇಸರಿಯಾ ಹಾಡು ಯೂಟ್ಯೂಬ್‌ನಲ್ಲಿ 554 ಮಿಲಿಯನ್‌ಗೂ ಹೆಚ್ಚು ವಿವ್ಸ್‌ ಪಡೆದಿದೆ. ಇದೇ ವೇಳೆ ದೇವಾ ದೇವಾ ಹಾಡು 139 ಮಿಲಿಯನ್‌ಗೂ ಹೆಚ್ಚು ವಿವ್ಸ್‌ ಪಡೆದಿದೆ.

ಬ್ರಹ್ಮಾಸ್ತ್ರ ಚಿತ್ರವನ್ನು ಡಿಸ್ನಿ+ಹಾಟ್‌ಸ್ಟಾರ್‌ ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು.

ಸರಳ, ವಿನಂಬ್ರ ವ್ಯಕ್ತಿತ್ವದ ಅರಿಜಿತ್ ಸಿಂಗ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಒಂದರ ಮೇಲೊಂದರಂತೆ ಹಲವು ಹಿಟ್‌ ಹಾಡುಗಳನ್ನು ಹಾಡಿರುವ ಇವರ ಜನಪ್ರಿಯ ಹಾಡುಗಳ ಪಟ್ಟಿ ದೊಡ್ಡದಿದೆ. ತುಮ್ ಹಿ ಹೋ, ಓ ಮಾಹಿ, ಹಮಾರಿ ಅಧೂರಿ ಕಹಾನಿ ಸೇರಿದಂತೆ, ಇವರ ಧ್ವನಿಯಲ್ಲಿ ಬಂದಿರುವ ಸಾಲು ಸಾಲು ರೊಮ್ಯಾಂಟಿಕ್ ಹಾಡುಗಳು ಹೃದಯಕ್ಕೆ ನೇರವಾಗಿ ಮುಟ್ಟುವಂತಿವೆ.

ರಕ್ತದಲ್ಲೇ ಇತ್ತು ಸಂಗೀತ ಪ್ರತಿಭೆ

1987ರ ಏಪ್ರಿಲ್ 25ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಜಿಯಾಗಂಜ್‌ನಲ್ಲಿ ಜನಿಸಿದ ಅರಿಜಿತ್‌, ಸಂಗೀತದ ಮೇಲೆ ಅಪಾರ ಒಲವು ಹೊಂದಿರುವ ಕುಟುಂಬದವರು. ಅವರ ತಂದೆ ಪಂಜಾಬಿ ಮೂಲದವರು. ಚಿಕ್ಕ ವಯಸ್ಸಿನಲ್ಲೇ ಮಗನಲ್ಲಿ ರಗ್ತಗತವಾಗಿ ಬಂದಿದ್ದ ಸಂಗೀತದ ಘಮವನ್ನು ಮತ್ತೆಹಚ್ಚಿದ ತಂದೆ, ಅವರಲ್ಲಿನ ಸಂಗೀತ ಪ್ರತಿಭೆಯನ್ನು ನೀರೆರೆದು ಪೋಷಿಸಿದರು. ಅಷ್ಟೇ ಅಲ್ಲ ವಿನಯವನ್ನೂ ಕಲಿಸಿಕೊಟ್ಟರು.

2005ರಲ್ಲಿ ಫೇಮ್ ಗುರುಕುಲ್‌ ರಿಯಾಲಿಟಿ ಶೋ ಮೂಲಕ ದೇಶಕ್ಕೆ ಪರಿಚಿತರಾದ ಅರಿಜಿತ್‌, ತಮ್ಮ ಮೋಡಿಮಾಡುವ ಧ್ವನಿಯ ಮೂಲಕ ಸದ್ಯ ಭಾರತದಲ್ಲಿ ಹಿನ್ನೆಲೆ ಗಾಯನದ ರಾಜನಾಗಿದ್ದಾರೆ. ಅವರ ವಿನಮ್ರ, ಸರಳ ಸ್ವಭಾವವೇ ಅವರರನ್ನು ಉನ್ನತ ಮಟ್ಟಕ್ಕೆ ತಂದು ನಿಲ್ಲಿದೆ. ಸಂಗೀತದ ಮೇಲಿನ ಅವರ ಪ್ರೀತಿ ಹಾಗೂ ಸಮರ್ಪಣಾ ಭಾವ ಅವರ್ಣನೀಯ.

ಕಡಿಮೆ ಅವಧಿಯಲ್ಲಿ ದೇಶ-ವಿದೇಶಗಳೆಲ್ಲೆಡೆ ಹೆಸರು ಮಾಡಿದ ಅರಿಜಿತ್‌, ಇಂದು ಬಾಲಿವುಡ್‌ ಹಾಗೂ ಭಾರತದ ನುರಿತ ಹಾಗೂ ಖ್ಯಾತ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಪರಿಗಣಿಸಲ್ಪಟ್ಟಿದ್ದಾರೆ. ವರದಿಗಳ ಪ್ರಕಾರ, ಅರಿಜಿತ್ ಸಿಂಗ್ ಅವರ ನಿವ್ವಳ ಮೌಲ್ಯವು 120 ಕೋಟಿಗೂ ಹೆಚ್ಚು. ಬಾಲಿವುಡ್ ಚಲನಚಿತ್ರಗಳಿಗೆ ಹಾಡುವ ಪ್ರತಿ ಹಾಡಿಗೂ 15ರಿಂದ 20 ಲಕ್ಷಕ್ಕೂ ಹೆಚ್ಚು ಹಣ ಪಡೆಯುತ್ತಾರೆ. ಹಿಂದಿ ಮಾತ್ರವಲ್ಲದೆ ಬೆಂಗಾಲಿ, ಮರಾಠಿ, ತಮಿಳು, ತೆಲುಗು ಹಾಡುಗಳನ್ನೂ ಹಾಡಿದ್ದಾರೆ.

(ಸುದ್ದಿ ಅಪ್ಡೇಟ್‌ ಆಗುತ್ತಿದೆ)