ಕನ್ನಡ ಸುದ್ದಿ / ಮನರಂಜನೆ /
ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಸಿನಿಮಾ ಪ್ರಶಸ್ತಿ ಪ್ರಕಟ; ಅರ್ಜುನ್ ಜನ್ಯ, ಗಾಯಕಿ ಅನುರಾಧಾ ಭಟ್, ಉತ್ಸವ್ ಗೋನ್ವಾರ್‌ಗೆ ಅವಾರ್ಡ್
2024ನೇ ಸಾಲಿನ ರಾಘವೇಂದ್ರ ಚಿತ್ರವಾಣಿ ಸಿನಿಮಾ ಪ್ರಶಸ್ತಿ ಘೋಷಣೆ ಆಗಿದೆ. ಜನವರಿ 26ರಂದು ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಭವ್ಯ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ಆಯ್ದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೀಗಿದೆ ಪ್ರಶಸ್ತಿ ವಿಜೇತರ ಪಟ್ಟಿ.
ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಸಿನಿಮಾ ಪ್ರಶಸ್ತಿ ಪ್ರಕಟ
Raghavendra Chitravani Awards 2024: ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ. ಸುಧೀಂದ್ರ ಅವರು ತಮ್ಮ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸುಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ10ಕ್ಕೇರಿದೆ. ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ 2025ರ ಜನವರಿ 26ರ ಭಾನುವಾರ ಸಂಜೆ 5.30ಕ್ಕೆ ಮಾಗಡಿ ರಸ್ತೆಯ ಎಂಎಂ ಲೆಗಸಿ (GT MALL) ಯಲ್ಲಿ ಚಿತ್ರರಂಗದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. 2024ರಲ್ಲಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ಆಯ್ದ ಕಲಾವಿದರು, ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗುತ್ತದೆ. ಹೀಗಿದೆ ಪ್ರಶಸ್ತಿ ವಿಜೇತರ ಪಟ್ಟಿ.
2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ವಿವರ
- ಮೀನಾಕ್ಷಿ ಕೆ.ವಿ. ಜಯರಾಂ (ಹಿರಿಯ ಚಲನಚಿತ್ರ ನಿರ್ಮಾಪಕರು); ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ
- ಕೆ.ಜೆ. ಕುಮಾರ್ ( ಹಿರಿಯ ಪತ್ರಕರ್ತರು ); ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ -
- ಅನುರಾಧಾ ಭಟ್ (ಗಾಯಕಿ); ಡಾ. ರಾಜಕುಮಾರ್ ಪ್ರಶಸ್ತಿ, ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಕುಟುಂಬದವರಿಂದ (ಖ್ಯಾತ ಹಿನ್ನೆಲೆ ಗಾಯಕರಿಗೆ ನೀಡುವ ಪ್ರಶಸ್ತಿ)
- ಓಂ ಪ್ರಕಾಶ್ ರಾವ್ (ಹಿರಿಯ ನಿರ್ದೇಶಕರು); ಯಜಮಾನ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರಿಂದ ನಿರ್ದೇಶಕರಿಗೆ ನೀಡುವ ಪ್ರಶಸ್ತಿ
- ರೇಖಾರಾವ್ (ಹಿರಿಯ ನಟಿ): ನಟಿ ಡಾ. ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ ಹಿರಿಯ ನಟಿ ಅವರಿಗೆ ನೀಡುವ ಪ್ರಶಸ್ತಿ
- ಅರ್ಜುನ್ ಜನ್ಯ (ಸಂಗೀತ ನಿರ್ದೇಶಕ); ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ ಪ್ರಶಸ್ತಿ (ಅತ್ಯುತ್ತಮ ಸಂಗೀತ ನಿರ್ದೇಶನ, ‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕಾಗಿ) -
- ಜಯಶಂಕರ್ ಆರ್ಯರ್ (ಕಥಾ ಲೇಖಕ ಹಾಗೂ ನಿರ್ದೇಶಕ); ಖ್ಯಾತ ನಿರ್ದೇಶಕ-ನಿರ್ಮಾಪಕ ಕೆ.ವಿ. ಜಯರಾಂ ಪ್ರಶಸ್ತಿ, ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ (ಅತ್ಯುತ್ತಮ ಕಥಾಲೇಖಕರು, ‘ಶಿವಮ್ಮ’ ಚಿತ್ರಕ್ಕಾಗಿ)
- ಚಂದ್ರಜಿತ್ ಬೆಳ್ಳಿಯಪ್ಪ (ಸಂಭಾಷಣೆಕಾರ ಹಾಗೂ ನಿರ್ದೇಶಕ); ಖ್ಯಾತ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ, ಡಾ. ಎಸ್.ಕೆ. ನರಹರಿ ಅವರಿಂದ (ಅತ್ಯುತ್ತಮ ಸಂಭಾಷಣೆ, ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕಾಗಿ) -
- ಉತ್ಸವ್ ಗೋನ್ವಾರ್ (ನಿರ್ದೇಶಕ); ಬಿ. ಸುರೇಶ ಪ್ರಶಸ್ತಿ ಅವರಿಂದ (ಚೊಚ್ಚಲ ಫೋಟೋ ಚಿತ್ರದ ನಿರ್ದೇಶನಕ್ಕಾಗಿ)
- ಡಾ. ವಿ.ನಾಗೇಂದ್ರ ಪ್ರಸಾದ್(ಗೀತರಚನೆಕಾರ); ಹಿರಿಯ ಪತ್ರಕರ್ತರಾದ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ವಿನಾಯಕರಾಮ್ ಕಲಗಾರು ಅವರಿಂದ (‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ದ್ವಾಪರ’)
ಕನ್ನಡ ಚಲನಚಿತ್ರ ಸುದ್ದಿ, ಟಿವಿ ಧಾರಾವಾಹಿಗಳು, ಒಟಿಟಿ, ವೆಬ್ ಸಿರೀಸ್, ಸಿನಿಮಾ ವಿಮರ್ಶೆ, ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್ ಲೋಕದ ತಾಜಾ ವಿದ್ಯಮಾನಗಳಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಮನರಂಜನೆ ವಿಭಾಗ ನೋಡಿ.