ʻಜೂನಿಯರ್ ಟೋಸ್ ಇಂಟರ್‌ನ್ಯಾಷನಲ್‌ ಪ್ರೀಸ್ಕೂಲ್ʼ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್
ಕನ್ನಡ ಸುದ್ದಿ  /  ಮನರಂಜನೆ  /  ʻಜೂನಿಯರ್ ಟೋಸ್ ಇಂಟರ್‌ನ್ಯಾಷನಲ್‌ ಪ್ರೀಸ್ಕೂಲ್ʼ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್

ʻಜೂನಿಯರ್ ಟೋಸ್ ಇಂಟರ್‌ನ್ಯಾಷನಲ್‌ ಪ್ರೀಸ್ಕೂಲ್ʼ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್

ʻಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ʼ ಮೂಲಕ ಸ್ಯಾಂಡಲ್‌ವುಡ್‌ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಈಗಾಗಲೇ ಶಿಕ್ಷಣ ಕ್ಷೇತ್ರ ಪ್ರವೇಶಿಸಿದ್ದಾರೆ. ಇದೀಗ ಇದೇ ʻಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ʼನ ಟೀಸರ್‌ ಲಾಂಚ್‌ ಆಗಿದೆ.

ʻಜೂನಿಯರ್ ಟೋಸ್ ಇಂಟರ್‌ನ್ಯಾಷನಲ್‌ ಪ್ರಿಸ್ಕೂಲ್ʼ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್
ʻಜೂನಿಯರ್ ಟೋಸ್ ಇಂಟರ್‌ನ್ಯಾಷನಲ್‌ ಪ್ರಿಸ್ಕೂಲ್ʼ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್

ಸ್ಯಾಂಡಲ್‌ವುಡ್‌ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಶಿಕ್ಷಣ ಕ್ಷೇತ್ರ ಪ್ರವೇಶಿಸಿರುವುದು ಗೊತ್ತೇ ಇದೆ. ʻಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ʼ ಅನ್ನು ಪ್ರಾರಂಭಿಸಿದ್ದಾರೆ. ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಮತ್ತು ಶೃತಿ ಕಿರಣ್‌ ಅವರೊಂದಿಗೆ ಕೈಜೋಡಿಸಿ ಶುರು ಮಾಡಿದ್ದಾರೆ. 'ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್' ಟೀಸರ್‌ ಲಾಂಚ್‌ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಒರಿಯನ್‌ ಮಾಲ್‌ ನಲ್ಲಿ ನಡೆಯಿತು. ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ 'ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್' ಟೀಸರ್‌ ಲಾಂಚ್‌ ಮಾಡಿದರು. ವಿಶೇಷ ಅತಿಥಿಯಾಗಿ ನಟಿ ಮಿಲನಾ ನಾಗರಾಜ್‌ ಭಾಗವಹಿಸಿದ್ದರು.

ನಾವು 'ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ 12 ಕೇಂದ್ರಗಳನ್ನು ಶುರು ಮಾಡಿದ್ದು, ಮೈಸೂರಿನಲ್ಲಿ ಒಂದು ಕೇಂದ್ರವಿದೆ.‌ ಈ ಕಲಿಕೆಯ ಗುರಿ ಜೊತೆಗೆ ಪ್ರತೀ ಮಗುವಿನ ಸಾಮರ್ಥ್ಯವನ್ನು ಪೋಷಿಸುವುದು ಮತ್ತು ನಾಯಕತ್ವವನ್ನೂ ನಿರ್ಮಿಸುವುದು ನಮ್ಮ ಉದ್ದೇಶ ಎಂದರು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌.

ನಟಿ ಮಿಲನಾ ನಾಗರಾಜ್‌ ಮಾತನಾಡಿ, ʻಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ʼ ಹೆಸರು ಬಹಳ ಮುದ್ದಾಗಿದೆ. ಇಂದಿನ ಮಕ್ಕಳಿಗೆ ಇದು ಒಳ್ಳೆಯ ಅವಕಾಶ. ನಾವು ಮಕ್ಕಳಾಗಿದ್ದಾಗ ಏನಾಗಬೇಕು ಅಂದಾಗ ಹೇಳಲು ಗೊತ್ತಿರಲಿಲ್ಲ. ಆದರೆ ಇಂದಿನ ಮಕ್ಕಳು ಹಾಗಲ್ಲ. ಮಕ್ಕಳಿಗೆ ಕೌಶಲ್ಯಗಳನ್ನು ಕಲಿಸುವುದು ಅತ್ಯುತ್ತಮ. ಇದು ಆರಂಭವಷ್ಟೇ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಅಪ್ಪು ಹೆಸರುಳಿಸುವ ಕೆಲಸ

ಸ್ಫೂರ್ತಿ ವಿಶ್ವಾಸ್ ಮಾತನಾಡಿ, ಇದೊಂದು ದೊಡ್ಡ ಜವಾಬ್ದಾರಿ. ಅದಕ್ಕೆ ಕಾರಣ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮೇಡಂ. ದಿನ, ರಾತ್ರಿ ಇದಕ್ಕಾಗಿ ಕೆಲಸ ಮಾಡುತ್ತಿದ್ದೇವೆ. 'ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಹೆಸರಿಗಾಗಿ ಅಲ್ಲ. ಅಪ್ಪು ಸರ್‌ ಹೆಸರನ್ನು ಉಳಿಸಲು. ಆ ಜವಾಬ್ದಾರಿ ಇಟ್ಟುಕೊಂಡು ಇದನ್ನು ನಡೆಸಿಕೊಂಡು ಹೋಗುತ್ತವೆ. ಈ ಶಾಲೆ ಮಕ್ಕಳು ಅತ್ಯುತ್ತಮ ನಾಗರೀಕರಾಗುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಸುನೀತಾ ಗೌಡ ಮಾತನಾಡಿ, 'ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಕೇಂದ್ರಗಳು ಮಕ್ಕಳನ್ನು ಧೈರ್ಯದಿಂದ ಕನಸು ಕಾಣಲು, ಸೃಜನಾತ್ಮಕವಾಗಿ ಯೋಚಿಸಲು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಲು ಸಬಲೀಕರಣಗೊಳಿಸುತ್ತವೆ. ನಾವು ಪ್ರತಿ ಮಗುವನ್ನು ಸಾಧಕನನ್ನಾಗಿ ಬೆಳೆಸುವುದು, ನಾಯಕತ್ವದ ಗುಣಗಳು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಜವಾಬ್ದಾರಿಯುತ ಪೌರತ್ವವನ್ನು ಉತ್ತೇಜಿಸುವತ್ತ ಗಮನ ಹರಿಸುತ್ತೇವೆ ಎಂದು ತಿಳಿಸಿದರು.

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್‌ ಕ್ರಾಂತಿಕಾರಿ, ಪ್ರಾಥಮಿಕ ಶಿಕ್ಷಣ ಯೋಜನೆ, ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಹೊಸ ದಾರಿ ನಿರ್ಮಿಸಲು ಸಜ್ಜಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌, ಖ್ಯಾತ ಶಿಕ್ಷಣ ತಜ್ಞೆ ಸುನೀತಾ ಗೌಡ, ಸ್ಪೂರ್ತಿ ವಿಶ್ವಾಸ್ ಹಾಗೂ ಶೃತಿ ಕಿರಣ್‌ ಸಂಸ್ಥಾಪಿಸಿರುವ ಈ ಶಾಲೆಯೂ ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಜೂನ್‌ನಿಂದ ಪ್ರವೇಶ ಪ್ರಕ್ರಿಯೆ ಆರಂಭಿಸುತ್ತಿದೆ.

ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮ ಈ ಜೂನಿಯರ್ ಟೋಸ್ ಪ್ರಿಸ್ಕೂಲ್‌ನಲ್ಲಿ ಇರಲಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ನಾಯಕತ್ವ, ಸೃಜನಶೀಲತೆ ಹಾಗೂ ಉದ್ಯಮಶೀಲತೆಯ ಚಿಂತನೆಯನ್ನು ಬೆಳೆಸುವುದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜೊತೆಗಾರರ ಕನಸು. ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಫೂರ್ತಿ ವಿಶ್ವಾಸ್ ಅವರು ತಮ್ಮ ಅನುಭವದೊಂದಿಗೆ ಮುಂದಿನ ತಲೆಮಾರಿನ ಆತ್ಮವಿಶ್ವಾಸಿ ಯುವ ನಾಯಕರಿಗೆ ಸ್ಫೂರ್ತಿ ನೀಡಲು ಕೈಜೋಡಿಸಿದ್ದಾರೆ.

ಬೆಂಗಳೂರು ಮೈಸೂರಿನಲ್ಲಿ ಆರಂಭ..

ಈ ಪ್ರೀಸ್ಕೂಲ್ ಬೆಂಗಳೂರು ಹಾಗೂ ಮೈಸೂರಿನಲ್ಲಿ ಆರಂಭವಾಗಿದೆ. ಇದರಲ್ಲಿ ಆಧುನಿಕ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಸೇರಿ ಸಿದ್ಧಪಡಿಸಿದ ವಿನೂತನವಾದ ಪಠ್ಯಕ್ರಮಗಳನ್ನು ಅಳವಡಿಸಲಾಗಿದೆ. ಎರಡು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಇಲ್ಲಿ ಶಿಕ್ಷಣವನ್ನು ನೀಡಲಾಗುತ್ತೆ. ಸದ್ಯ ಬೆಂಗಳೂರಿನಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಆಲೋಚನೆಯನ್ನು ಇಟ್ಟುಕೊಂಡಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.