Athiya Shetty Marriage: ಕೊನೆಗೂ ಫಿಕ್ಸ್ ಆಯ್ತಂತೆ ಕೆ.ಎಲ್. ರಾಹುಲ್ ಹಾಗೂ ಅಥಿಯಾ ಮದುವೆ
ಈಗ ರಾಹುಲ್ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದು ಅಥಿಯಾ ಕೂಡಾ ಆತನ ಜೊತೆಗೆ ಇದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ರಾಹುಲ್ ಗಾಯದಿಂದ ಚೇತರಿಸಿಕೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗಲಿದ್ದು, ಅಲ್ಲಿಯವರೆಗೂ ಅಥಿಯಾ ಹಾಗೂ ರಾಹುಲ್ ಜೊತೆಗೇ ಇದ್ದು ಅವರ ಕಾಳಜಿ ಮಾಡಲಿದ್ದಾರಂತೆ.
ಕೆಲವು ವರ್ಷಗಳಿಂದ ಡೇಟಿಂಗ್ನಲ್ಲಿರುವ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಮದುವೆ ಫಿಕ್ಸ್ ಆಗಿದ್ದು ಇನ್ನು ಮೂರೇ ತಿಂಗಳಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಇಬ್ಬರ ಮದುವೆ ದಿನಾಂಕವನ್ನು ಫಿಕ್ಸ್ ಮಾಡಲು ಕೆ.ಎಲ್. ರಾಹುಲ್ ಅವರ ಪೋಷಕರು ಇತ್ತೀಚೆಗೆ ಅಥಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದರು ಎಂಬ ವದಂತಿ ಬಾಲಿವುಡ್ನಲ್ಲಿ ಕೇಳಿಬಂದಿತ್ತು. ಇದೀಗ ಮತ್ತೆ ಈ ಎರಡೂ ಕುಟುಂಬಗಳು ಒಟ್ಟಾಗಿ ಸೇರಿ, ಮದುವೆ ನಂತರ ರಾಹುಲ್ ಹಾಗೂ ಅಥಿಯಾ ಜೊತೆಗೆ ಇರಲು ಮುಂಬೈನಲ್ಲಿ ಒಂದು ಹೊಸ ಮನೆ ಖರೀದಿಸಿದ್ದಾರೆ ಎನ್ನಲಾಗಿದೆ. ಮದುವೆಯ ಎಲ್ಲಾ ವ್ಯವಸ್ಥೆಗಳನ್ನು ಸ್ವತ: ಅಥಿಯಾ ಶೆಟ್ಟಿ ಮುಂದೆ ನಿಂತು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ ಸಮಯದಲ್ಲಿ ಗಾಯಗೊಂಡಿದ್ದ ಕೆ.ಎಲ್. ರಾಹುಲ್ ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಿಂದ ದೂರ ಉಳಿದಿದ್ದಾರೆ. ಈಗ ರಾಹುಲ್ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದು ಅಥಿಯಾ ಕೂಡಾ ಆತನ ಜೊತೆಗೆ ಇದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ರಾಹುಲ್ ಗಾಯದಿಂದ ಚೇತರಿಸಿಕೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗಲಿದ್ದು, ಅಲ್ಲಿಯವರೆಗೂ ಅಥಿಯಾ ಹಾಗೂ ರಾಹುಲ್ ಜೊತೆಗೇ ಇದ್ದು ಅವರ ಕಾಳಜಿ ಮಾಡಲಿದ್ದಾರಂತೆ. ಅಥಿಯಾ ಸಹೋದರ ಅಹಾನ್ ಶೆಟ್ಟಿ ಅಭಿನಯದ ಮೊದಲ ಸಿನಿಮಾ 'ತಡಪ್' ಪ್ರೀಮಿಯರ್ ಶೋ ವೇಳೆ ರಾಹುಲ್ ಮತ್ತು ಅಥಿಯಾ ಮೊದಲ ಬಾರಿಗೆ ತಮ್ಮ ನಡುವಿನ ಪ್ರೀತಿಯನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಇದೀಗ ಈ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ವಿಚಾರ ತಿಳಿದು ಇಬ್ಬರ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.
ಬಾಲಿವುಡ್ ತಾರೆಯರು ಹಾಗೂ ಕ್ರಿಕೆಟ್ ಸ್ಟಾರ್ಗಳ ನಡುವಿನ ಲವ್, ಮದುವೆ ಇದೇ ಮೊದಲಲ್ಲ. ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ನಟಿ ಶರ್ಮಿಲಾ ಠಾಗೂರ್ ಪ್ರೀತಿಸಿ ಮದುವೆಯಾಗಿದ್ದರು. ಯುವರಾಜ್ ಸಿಂಗ್-ಹಜೆಲ್ ಕೀಚ್, ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ, ಹರಭಜನ್ ಸಿಂಗ್-ಗೀತಾ ಬಸ್ರಾ, ಸಂಗೀತ ಬಿಜಲಾನಿ-ಮೊಹ್ಮದ್ ಅಜರುದ್ದೀನ್, ನಗ್ಮಾ-ಸೌರವ್ ಗಂಗೂಲಿ, ಅಮೃತ ಸಿಂಗ್-ರವಿಶಾಸ್ತ್ರಿ, ಜೀನತ್ ಅಮಾನ್-ಇಮ್ರಾನ್ ಖಾನ್, ನೀನಾ ಗುಪ್ತಾ-ವಿವಿಯನ್ ರಿಚರ್ಡ್, ರೀನಾರಾಯ್-ಮೊಹ್ಸಿನ್ ಖಾನ್ ಹೀಗೆ ಅನೇಕ ಜೋಡಿಗಳು ಪ್ರೀತಿಯಲ್ಲಿದ್ದರು. ಆದರೆ ಈ ಜೋಡಿಗಳಲ್ಲಿ ಕೆಲವರ ಪ್ರೀತಿ ಪ್ರೀತಿಯಾಗೇ ಉಳಿದರೆ, ಕೆಲವರು ಮದುವೆಯಾಗಿದ್ದಾರೆ.
ಅಥಿಯಾ ಶೆಟ್ಟಿ ಸಿನಿಮಾಗಳ ಬಗ್ಗೆ ಹೇಳುವುದಾರೆ 2015 ರಲ್ಲಿ ತೆರೆ ಕಂಡ 'ಹೀರೋ' ಚಿತ್ರದ ಮೂಲಕ ನಟಿಯಾಗಿ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ನಂತರ ಮುಬಾರಕ್, ನವಾಬ್ಜಾದೆ ಹಾಗೂ ಮೋತಿಚೂರ್ ಚಕ್ನಚೂರ್ ಸಿನಿಮಾಗಳಲ್ಲಿ ನಟಿಸಿದರು. ಆದರೆ ಅಪ್ಪನಂತೆ ಅಥಿಯಾ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಲಿಲ್ಲ. 2019 ರ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ.