Karnataka Bandh: ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗದ ಬೆಂಬಲ ಇದ್ಯಾ ಇಲ್ವಾ? ಫಿಲಂ ಚೇಂಬರ್‌ ಸ್ಪಷ್ಟನೆ ಹೀಗಿದೆ
ಕನ್ನಡ ಸುದ್ದಿ  /  ಮನರಂಜನೆ  /  Karnataka Bandh: ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗದ ಬೆಂಬಲ ಇದ್ಯಾ ಇಲ್ವಾ? ಫಿಲಂ ಚೇಂಬರ್‌ ಸ್ಪಷ್ಟನೆ ಹೀಗಿದೆ

Karnataka Bandh: ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗದ ಬೆಂಬಲ ಇದ್ಯಾ ಇಲ್ವಾ? ಫಿಲಂ ಚೇಂಬರ್‌ ಸ್ಪಷ್ಟನೆ ಹೀಗಿದೆ

Karnataka Bandh: ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಈ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಬೆಂಬಲ ವ್ಯಕ್ತಪಡಿಪಡಿಸಿದೆ.

ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗದ ಬೆಂಬಲ
ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗದ ಬೆಂಬಲ

Karnataka Bandh: ಬೆಳಗಾವಿಯಲ್ಲಿ ಕರ್ನಾಟಕದ ಬಸ್‌ ಕಂಡಕ್ಟರ್‌ ಮೇಲೆ ಮರಾಠಿಗರಿಂದ ನಡೆದ ಹಲ್ಲೆ ಖಂಡಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಈ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಬೆಂಬಲ ವ್ಯಕ್ತಪಡಿಪಡಿಸಿದೆ. ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಕನ್ನಡ ಚಿತ್ರರಂಗ ಕರ್ನಾಟಕ ಬಂದ್‌ಗೆ ತನ್ನ ಬೆಂಬಲ ನೀಡುತ್ತಿದೆ, ಆದರೆ ಯಾವುದೇ ಚಿತ್ರೀಕರಣ ಬಂದ್ ಮಾಡಲಾಗಲ್ಲ ಎಂದರು.

ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲ ಇರಲಿದೆಯಾದರೂ ಸಿನಿಮಾ ಚಿತ್ರೀಕರಣಗಳನ್ನು ನಿಲ್ಲಿಸಲಾಗುತ್ತಿಲ್ಲ. ಚಿತ್ರಪ್ರದರ್ಶಕರು ಸಹ ಬಂದ್‌ಗೆ ತಮ್ಮ ಬೆಂಬಲ ನೀಡಿದ್ದು, ಅಂದು ಬೆಳಗಿನ ಶೋ ನಿಲ್ಲಿಸುತ್ತಿದ್ದಾರೆ. ಆದರೆ ಮಧ್ಯಾಹ್ನದ ನಂತರ ಎಂದಿನಂತೆ ಶೋ ನಡೆಯಲಿವೆ.

ಸಭೆಯ ಬಳಿಕ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ‌ಡಾ ರಾಜ್‌ಕುಮಾರ್ ಅವರ ಕಾಲದಿಂದಲೂ ಕನ್ನಡ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಚಿತ್ರರಂಗ ಬೆಂಬಲ ನೀಡುತ್ತಾ ಬಂದಿದೆ. ಈಗ ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿರುವ ಈ ಬಂದ್‌ಗೆ ಚಿತ್ರರಂಗದ ಎಲ್ಲಾ ವಲಯಗಳ ಬೆಂಬಲವಿದೆ ಎಂದು ಹೇಳಿದ್ದಾರೆ.

ಚಲನಚಿತ್ರದ ಶೂಟಿಂಗ್‌ಗೆ ಯಾವುದೇ ಕಡಿವಾಣ ಇರುವುದಿಲ್ಲ. ಆದರೆ ಚಿತ್ರ ತಂಡಗಳು ಅಥವಾ ನಿರ್ಮಾಪಕರು ಸ್ವಯಂಪ್ರೇರಿತವಾಗಿ ಚಿತ್ರೀಕರಣ ಬಂದ್ ಮಾಡಿದರೆ ಅದಕ್ಕೆ ನಮ್ಮ ಸ್ವಾಗತವಿದೆ. ಕಲಾವಿದರ ಸಂಘ, ನಿರ್ಮಾಪಕರ ಸಂಘವೂ ಸಹ ಬೆಂಬಲ ವ್ಯಕ್ತಪಡಿಸಿದೆ' ಎಂದು ಮಾಹಿತಿ ನೀಡಿದರು.

ಪ್ರದರ್ಶಕರ ಸಂಘದ ಕಾರ್ಯದರ್ಶಿ ಕುಶಾಲ್ ಚಂದ್ರಶೇಖರ್ ಮಾತನಾಡಿ, ಮಾರ್ಚ್ ೨೨ರಂದು ಬೆಳಗಿನ ಪ್ರದರ್ಶನ ಬಂದ್ ಮಾಡಿ, ಮಧ್ಯಾಹ್ನದಿಂದ ಎಂದಿನಂತೆ ಪ್ರದರ್ಶನ ನಡೆಯಲಿವೆ, ಒಂದು ಶೋ ಬಂದ್ ಮಾಡುವ ಮೂಲಕ ಪ್ರದರ್ಶಕರ ವಲಯದಿಂದ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದರು.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner