Attack on Bollywood Actor: ಬಾಲಿವುಡ್ ನಟನ ಮೇಲೆ ಅಮೆರಿಕ ಜಿಮ್‌ವೊಂದರಲ್ಲಿ ಹಲ್ಲೆ... ವಿಡಿಯೋ ವೈರಲ್
ಜಿಮ್‌ನಲ್ಲಿ ಈ ಘಟನೆ ನಡೆಯುವಾಗ ಪೊಲೀಸರಿಗೆ ಸುದ್ದಿ ತಿಳಿದು ಕೂಡಲೇ ಅಲ್ಲಿಗೆ ಬಂದಿದ್ದಾರೆ. ಅಮನ್‌ಗೆ ಗಾಯವಾಗಿದ್ದರೂ ಕೂಡಾ ತನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಪೊಲೀಸರಿಗೆ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿ ವೇಲೆ ಅಮನ್ ಎದೆ, ಹಣೆ, ಕೈಗಳಿಗೆ ತೀವ್ರ ಗಾಯವಾಗಿದೆ.
ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಖ್ಯಾತ ಬಾಲಿವುಡ್ ನಟರೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಅಮೆರಿಕದಾದ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದ್ದು ದಾಳಿಗೆ ಒಳಗಾದ ನಟನನ್ನು ಅಮನ್ ಧಲಿವಾಲ್ ಎಂದು ಗುರುತಿಸಿಲಾಗಿದೆ.
ಟ್ರೆಂಡಿಂಗ್ ಸುದ್ದಿ
ನಟ ಅಮನ್ ಧಲಿವಾಲ್, ಪಂಜಾಬ್ ಮೂಲದವರಾಗಿದ್ದು ಶಿರೋಮಣಿ ಅಕಾಲಿ ದಳದ ಮಾಜಿ ಸದಸ್ಯ ಮಿಥು ಸಿಂಗ್ ಕಹ್ನೆಕೆ ಅವರ ಪುತ್ರ ಎನ್ನಲಾಗಿದೆ. ಪಂಜಾಬಿ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಮನ್, ಜೋಧಾ ಅಕ್ಬರ್, ಬಿಗ್ ಬ್ರದರ್, ಖಲೇಜಾ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಕೂಡಾ ನಟಿಸಿರುವ ಅವರು ಮಾಡೆಲ್ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ಕ್ಯಾಲಿಫೋರ್ನಿಯಾದ ಗ್ರ್ಯಾಂಡ್ ಓಕ್ಸ್‌ನಲ್ಲಿ ನೆಲೆಸಿದ್ದು ಅಲ್ಲಿನ ಜಿಮ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜಿಮ್‌ನಲ್ಲಿದ್ದಾಗ ಇದ್ದಕ್ಕಿದ್ದಂತೆ ಅಮನ್ ಬಳಿ ಬಂದ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ಅರಚಾಡುತ್ತಾ ಆತನ ಮೇಲೆ ದಾಳಿ ಮಾಡಿದ್ದಾನೆ. ಈ ದಾಳಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಜಿಮ್‌ನಲ್ಲಿ ಈ ಘಟನೆ ನಡೆಯುವಾಗ ಪೊಲೀಸರಿಗೆ ಸುದ್ದಿ ತಿಳಿದು ಕೂಡಲೇ ಅಲ್ಲಿಗೆ ಬಂದಿದ್ದಾರೆ. ಅಮನ್‌ಗೆ ಗಾಯವಾಗಿದ್ದರೂ ಕೂಡಾ ತನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಪೊಲೀಸರಿಗೆ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿ ವೇಲೆ ಅಮನ್ ಎದೆ, ಹಣೆ, ಕೈಗಳಿಗೆ ತೀವ್ರ ಗಾಯವಾಗಿದೆ. ಗಗನ್ ದೀಪ್ ಸಿಂಗ್ ಎನ್ನುವವರು ಅಮನ್ ದೀಪ್ ಮೇಲೆ ದಾಳಿ ಮಾಡಲಾದ ಹಾಗೂ ಅವರು ಬ್ಯಾಂಡೇಜ್ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳು
'ಕಬ್ಜ' ಮೆಚ್ಚಿದ ಪವನ್ ಕಲ್ಯಾಣ್ ಜೊತೆ ಸಿನಿಮಾ ಮಾಡಲಿದ್ದಾರಂತೆ ಆರ್. ಚಂದ್ರು!
ಕನ್ನಡ ಚಿತ್ರರಂಗದಲ್ಲೀಗ 'ಕಬ್ಜ' ಸಿನಿಮಾದ್ದೇ ಸುದ್ದಿ. ಆರ್. ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ಹಾಗೂ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕಬ್ಜ' ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾ ನೋಡಿ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇಕಿಂಗ್‌ಗೆ ಥ್ರಿಲ್ ಆಗಿದ್ದಾರೆ. ಇದೇ ಖುಷಿಯಲ್ಲಿ ಇದೀಗ ಆರ್. ಚಂದ್ರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೊಂದು ಚಿತ್ರ ಮಾಡಲಿದ್ದು ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪೂರ್ತಿ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ.
ರಾಮ್ ಚರಣ್, ಜ್ಯೂ. ಎನ್‌ಟಿಆರ್ ಫ್ಯಾನ್ಸ್ ಬಳಿ ಕ್ಷಮೆ ಕೇಳಿದ ಕೀರವಾಣಿ ಪುತ್ರ.. ಕಾರಣವೇನು?
ಇತ್ತೀಚೆಗೆ ಅಲ್ಲು ಅರ್ಜುನ್ ಕೂಡಾ ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದರು. ಆದರೆ ಜ್ಯೂನಿಯರ್ ಎನ್‌ಟಿಆರ್ ಅವರನ್ನು ತೆಲುಗಿನ ಹೆಮ್ಮೆ ಎಂದಿದ್ದಕ್ಕೆ ರಾಮ್ ಚರಣ್ ಅಭಿಮಾನಿಗಳು ಕೋಪಗೊಂಡಿದ್ದರು. ಆದರೆ ಅಲ್ಲು ಅರ್ಜುನ್ ಈ ಕಮೆಂಟ್‌ಗಳಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ನಾಟು ನಾಟು ಹಾಡಿನ ಗಾಯಕ, ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಪುತ್ರ ಕಾಲ ಭೈರವ ಹಂಚಿಕೊಂಡಿರುವ ಪೋಸ್ಟ್‌ಗೆ ರಾಮ್ ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಅಭಿಮಾನಿಗಳು ಗರಂ ಆಗಿದ್ದಾರೆ. ಕಮೆಂಟ್‌ಗಳನ್ನು ನೋಡುತ್ತಿದ್ದಂತೆ ಎಚ್ಚೆತ್ತ ಕಾಲ ಭೈರವ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಒತ್ತಿ.