Ranbir Kapoor: 4 ಕೋಟಿ ರೂನ ಹೊಸ ರೇಂಜ್ ರೋವರ್ ಕಾರು ಖರೀದಿಸಿದ ರಣಬೀರ್ ಕಪೂರ್, ಆಲಿಯಾ ಭಟ್ ಇನಿಯನ ಕಾರುಬಾರು ನೋಡಿ
Ranbir Kapoor Car Collection: ಬಾಲಿವುಡ್ ನಟ ರಣಬೀರ್ ಕಪೂರ್ ಹೊಸ ರೇಂಜ್ ರೋವರ್ ಖರೀದಿಸಿದ್ದಾರೆ. 4 ಕೋಟಿ ರೂ ದರದ ಈ ಕಾರಿನ ಟೆಕ್ ಮಾಹಿತಿ ಜತೆಗೆ ಅವರ ದುಬಾರಿ ಕಾರು ಸಂಗ್ರಹವನ್ನೊಮ್ಮೆ ನೋಡೋಣ.
ರಣಬೀರ್ ಕಪೂರ್ ಎಂದ ಕೂಡಲೇ ಹಲವು ಸುದ್ದಿಗಳು, ಸಿನಿಮಾಗಳು ಕಣ್ಮುಂದೆ ಬರುತ್ತೆ. ಮೊನ್ನೆಯಷ್ಟೇ ಆಲಿಯಾ ಭಟ್ ಅವರಲ್ಲಿ ನಿಮ್ಮ ತುಟಿಯ ಲಿಫ್‌ಸ್ಟಿಕ್ ತೆಗಿರಿ, ತುಟಿಗಳು ನ್ಯಾಚುಯಲ್ ಆಗಿದ್ದರೆ ಖುಷಿಯಾಗುತ್ತೆ ಅಂದಿದ್ದ ಈ ತುಂಟ. ತು ಜೂಠಿ ಮೈಂ ಮಕ್ಕಾರ್ ನಟ ಹೀಗೆ ಹಲವು ಕಾರಣಗಳಿಂದ ಬಾಲಿವುಡ್‌ನಲ್ಲಿ ಸದಾ ಸುದ್ದಿಯಲ್ಲಿರುತ್ತಾನೆ. ನಾವಿಲ್ಲಿ ಇಂದು ಹೇಳಲು ಹೊರಟಿರುವುದು ಬಾಲಿವುಡ್ ನಟ ರಣಬೀರ್ ಕಪೂರ್‌ನ ಕಾರುಬಾರು ಕುರಿತು. ಅಂದರೆ, ಆತನ ಅಚ್ಚರಿಯ ದುಬಾರಿ ಕಾರುಗಳ ಕ್ರೇಜ್ ಕುರಿತು.
ಇತ್ತೀಚೆಗಷ್ಟೇ ರಣಬೀರ್ ಕಪೂರ್ ಮನೆಗೆ ಹೊಸದೊಂದು ಕಾರು ಬಂದಿದೆ. ಅದರ ಹೆಸರು ಲ್ಯಾಂಡ್ ರೋವರ್. ಲ್ಯಾಂಡ್‌ರೋವರ್ ಅಂದರೆ ಸಾಕೆ, ಅದು ಯಾವ ಮಾಡೆಲ್, ಅದಕ್ಕೆ ದರವೆಷ್ಟು ಇತ್ಯಾದಿ ವಿವರ ಬೇಡವೇ. ಅಂತಹ ವಿವರವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಇಲ್ಲಿ ಕಲೆ ಹಾಕಿ ಇಲ್ಲಿ ನೀಡಲಾಗಿದೆ. ಜತೆಗೆ, ರಣಬೀರ್ ಕಪೂರ್ ಗ್ಯಾರೇಜ್‌ನಲ್ಲಿ ಯಾವೆಲ್ಲ ಕಾರುಗಳಿವೆ ಎಂಬ ವಿವರವೂ ಇದೆ.
ದುಬಾರಿ ರೇಂಜ್ ರೋವರ್ ಕಾರು ಖರೀದಿಸಿದ ರಣಬೀರ್ ಕಪೂರ್
ಬುಧವಾರ ರಣಬೀರ್ ಕಪೂರ್ ನೂತನ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಬ್ರಹ್ಮಾಸ್ತ್ರ ನಟನ ಮನೆಗೆ ಬಂದಿರುವ ಈ ಹೊಸ ಕಾರಿನ ದರ 4 ಕೋಟಿ ರೂಪಾಯಿ. ಈ ಕಾರಿನ ಮಾಡೆಲ್, ಟೆಕ್ ಮಾಹಿತಿಯನ್ನು ನೀಡುವ ಮೊದಲು ಆತನಲ್ಲಿ ಇನ್ಯಾವ ಕಾರುಗಳಿವೆ ಎಂದು ಮೊದಲು ತಿಳಿದುಕೊಳ್ಳೋಣ.
ರಣಬೀರ್ ಕಪೂರ್ ಕಾರ್ ಕಲೆಕ್ಷನ್
ಈತನ ಕಾರ್ ಕ್ರೇಜ್ ಕುರಿತು ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಹೀಗೆ ಹೇಳಿದ್ದಾರೆ. ಭಾರತದಲ್ಲಿ ಬಹುಶಃ ಮೊದಲ ಬಾರಿಗೆ ಜಿ ವ್ಯಾಗನ್ ಮತ್ತು ರೇಂಜ್ ರೋವರ್ ಕಾರು ಖರೀದಿ ಟ್ರೆಂಡ್ ಆರಂಭಿಸಿದ ನಟ ರಣಬೀರ್ ಕಪೂರ್ ಆಗಿಬರೇಕು ಎಂದು ಟ್ವಿಟ್ಟರ್‌ನಲ್ಲಿ ಅಭಿಮಾನಿಯೊಬ್ಬರು ಬರೆದಿದ್ದಾರೆ. "ಬಾಲಿವುಡ್‌ನಲ್ಲಿ ರೇಂಜ್ ರೋವರ್ ಟ್ರೆಂಡ್ ಆರಂಭಿಸಿದ ನಟʼ ಎಂದು ಮತ್ತೊಬ್ಬರು ಬರೆದಿದ್ದಾರೆ. ರಣಬೀರ್ ಕಪೂರ್‌ನಲ್ಲಿ ಮರ್ಸಿಡಿಸ್ ಬೆಂಝ್ ಎಎಂಜಿ ಜಿ63, ಔಡಿ ಎ8ಎಲ್, ಲ್ಯಾಂಡ್ ರೋಂಜ್ ರೋವರ್ ಸ್ಪೋರ್ಟ್ಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ಯೂ ಸೇರಿದಂತೆ ಹಲವು ಕಾರುಗಳಿವೆ.
ಹೀಗಿದೆ ನೋಡಿ ರೇಂಜ್ ರೋವರ್
ರಣಬೀರ್ ಕಪೂರ್‌ನ ಹೊಸ ಕಾರಿನ ಟೆಕ್ ವಿವರ
ಬಾಲಿವುಡ್ ನಟ ರಣಬೀರ್ ಕಪೂರ್ ತನ್ನ ಕಾರು ಸಂಗ್ರಹಕ್ಕೆ ಹೊಸ ನ್ಯೂ ರೇಂಜ್ ರೋವರ್ ಕಾರನ್ನು ಸೇರಿಸಿದ್ದಾರೆ. ಈ ವಿಲಾಸಿ ಕಾರಿನ ಆರಂಭಿಕ ದರ 2.38 ಕೋಟಿ ರೂಪಾಯಿ ಇದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಇದೇ ಲ್ಯಾಂಡ್ ರೋವರ್‌ನ ಐದನೇ ತಲೆಮಾರಿನ ಕಾರನ್ನು ಕಂಪನಿ ಪರಿಚಯಿಸಿತ್ತು. ಇದರ ದರ 3.43 ಕೋಟಿ ರೂಪಾಯಿ. ಇದು ಎಕ್ಸ್‌ಶೋರೂಂ ದರ. ಆನ್‌ರೋಡ್ ದರ 4 ಕೋಟಿ ರೂಪಾಯಿಗಿಂತಲೂ ಹೆಚ್ಚಾಗುತ್ತದೆ. ಇದೇ ಆವೃತ್ತಿಯನ್ನು ಆಲಿಯಾ ಭಟ್ ಇನಿಯ ರಣಬೀರ್ ಕಪೂರ್ ಖರೀದಿಸಿದ್ದಾರೆ. ಈ ರೇಂಜ್ ರೋವರ್ ಕಾರಿಗೆ ಭಾರತದ ರಸ್ತೆಯಲ್ಲಿ ಬೆಂಟ್ಲಿ ಬೆಂಟ್ಯಾಗ್ಯಾ, ಮೇಬಾಕ್ ಜಿಎಲ್‌ಎಸ್, ಆಸ್ಟ್ರನ್ ಮಾರ್ಟಿನ್ ಡಿಬಿಎಕ್ಸ್, ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ ಇತ್ಯಾದಿ ಕಾರುಗಳು ಪೈಪೋಟಿ ನೀಡುತ್ತವೆ.
ಐದನೇ ತಲೆಮಾರಿನ ರೇಂಜ್ ರೋವರ್ ಎಸ್‌ಯುವಿಯು ಲ್ಯಾಂಡ್ ರೋವರ್‌ನ ಎಂಎಲ್‌ಎ ಫ್ಲೆಕ್ಸ್ ಫ್ಲಾಟ್‌ಫಾರ್ಮ್‌ನಲ್ಲಿ ಆಗಮಿಸಿದೆ. ಇದು ಪೂರ್ಣ ಇಂಡಿಪೆಂಡೆಂಟ್ ಏರ್ ಸಸ್ಪೆನ್ಷನ್ ಸಿಸ್ಟಮ್ ಮತ್ತು ಆಲ್ ವೀಲ್ ಸ್ಟಿಯರಿಂಗ್ ಹೊಂದಿದೆ. ಇದು ಆರು ಮತ್ತು ಎಂಟು ಸಿಲಿಂಡರ್ ಆಯ್ಕೆಗಳ ಎಂಜಿನ್‌ನಲ್ಲಿ ದೊರಕುತ್ತದೆ. ಇದರಲ್ಲಿ 4.4 ಲೀಟರ್‌ನ ಟ್ವಿನ್ ಟರ್ಬೊ ವಿ8 ಎಂಜಿನ್ ಇದೆ. ಇದು 523 ಬಿಎಚ್‌ಪಿ ಮತ್ತು 750 ಎನ್‌ಎಂ ಪೀಕ್ ಟಾರ್ಕ್ ಒದಗಿಸುತ್ತದೆ. ಈ ಕಾರು 3. ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ದೊರಕುತ್ತದೆ. ಡೀಸೆಲ್ ಎಂಜಿನ್ ಎಸ್‌ಯುವಿಯು 346 ಗರಿಷ್ಠ ಬಿಎಚ್‌ಪಿ ಮತ್ತು 700 ಎನ್‌ಎಂ ಟಾರ್ಕ್ ಒದಗಿಸುತ್ತದೆ. ಪೆಟ್ರೋಲ್ ಹೈಬ್ರಿಡ್ ಎಂಜಿನ್ ಕಾರು ಕೂಡ ಲಭ್ಯ. 48V ಮಿಲ್ಡ್ ಹೈಬ್ರಿಡ್ ಟೆಕ್ನಾಲಜಿಯ ಆವೃತ್ತಿಯು 394 ಬಿಎಚ್‌ಪಿ ಮತ್ತು 550 ಎನ್‌ಎಂ ಟಾರ್ಕ್ ಒದಗಿಸುತ್ತದೆ.