Daku Maharaj OTT: ಬಾಲಕೃಷ್ಣ ಅಭಿನಯದ 'ಡಾಕು ಮಹಾರಾಜ್' ಒಟಿಟಿ ಬಿಡುಗಡೆ ವಿಳಂಬ; ಆನ್‌ಲೈನ್‌ನಲ್ಲಿ ಬಿಡುಗಡೆ ಆಗದಿರಲು ಇಲ್ಲಿದೆ ಕಾರಣ
ಕನ್ನಡ ಸುದ್ದಿ  /  ಮನರಂಜನೆ  /  Daku Maharaj Ott: ಬಾಲಕೃಷ್ಣ ಅಭಿನಯದ 'ಡಾಕು ಮಹಾರಾಜ್' ಒಟಿಟಿ ಬಿಡುಗಡೆ ವಿಳಂಬ; ಆನ್‌ಲೈನ್‌ನಲ್ಲಿ ಬಿಡುಗಡೆ ಆಗದಿರಲು ಇಲ್ಲಿದೆ ಕಾರಣ

Daku Maharaj OTT: ಬಾಲಕೃಷ್ಣ ಅಭಿನಯದ 'ಡಾಕು ಮಹಾರಾಜ್' ಒಟಿಟಿ ಬಿಡುಗಡೆ ವಿಳಂಬ; ಆನ್‌ಲೈನ್‌ನಲ್ಲಿ ಬಿಡುಗಡೆ ಆಗದಿರಲು ಇಲ್ಲಿದೆ ಕಾರಣ

ಟಾಲಿವುಡ್‌ನ ಸ್ಟಾರ್‌ ನಟ ನಂದಮೂರಿ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೈ ವೋಲ್ಟೇಜ್ ಆಕ್ಷನ್ ಎಂಟರ್ಟೈನರ್ ಸಿನಿಮಾ ‘ಡಾಕು ಮಹಾರಾಜ್’ ಒಟಿಟಿ ಬಿಡುಗಡೆ ವಿಳಂಬ. ಇಲ್ಲಿದೆ ಕಾರಣ.

ಬಾಲಕೃಷ್ಣ ಅಭಿನಯದ 'ಡಾಕು ಮಹಾರಾಜ್' ಒಟಿಟಿ ಬಿಡುಗಡೆ ವಿಳಂಬ
ಬಾಲಕೃಷ್ಣ ಅಭಿನಯದ 'ಡಾಕು ಮಹಾರಾಜ್' ಒಟಿಟಿ ಬಿಡುಗಡೆ ವಿಳಂಬ

ಟಾಲಿವುಡ್‌ನ ಸ್ಟಾರ್‌ ನಟ ನಂದಮೂರಿ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೈ ವೋಲ್ಟೇಜ್ ಆಕ್ಷನ್ ಎಂಟರ್ಟೈನರ್ ಸಿನಿಮಾ ‘ಡಾಕು ಮಹಾರಾಜ್’ ಜನವರಿ 12ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದೆ. ಯುವ ನಿರ್ದೇಶಕ ಬಾಬಿ ಕೊಲ್ಲಿ ಮತ್ತು ಮಾಸ್ ಸಿನಿಮಾಗಳ ಬಾಪ್‌ ಎಂದೇ ಹೆಸರಾಗಿರುವ ಬಾಲಯ್ಯ ಅವರ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಪಾಸಿಟಿವ್‌ ವಿಮರ್ಶೆ ಜತೆಗೆ ಬಾಕ್ಸ್‌ ಆಫೀಸ್‌ನಲ್ಲೂ ಸದ್ದು ಮಾಡಿದೆ. ಆದರೆ ಈ ಸಿನಿಮಾ ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಅಭಿಮಾನಿಗಳ ಕಾಯುವಿಕೆಗೆ ನಿರಾಸೆಯೊಂದೇ ಉತ್ತರವಾಗಿದೆ.

'ಡಾಕು ಮಹಾರಾಜ್' ಒಟಿಟಿ ಬಿಡುಗಡೆ ವಿಳಂಬ

ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆದರೂ ಒಟಿಟಿ ಬಿಡುಗಡೆಯಾಗಿಲ್ಲ. ಅದೂ ಅಲ್ಲದೆ ಒಮ್ಮೆ ಆಸೆ, ಇನ್ನೊಮ್ಮೆ ನಿರಾಸೆ ಎಂಬಂತೆ ಫೆ 9ರಂದೇ ಈ ಸಿನಿಮಾ ಬಿಡುಗಡೆಯಾಗುತ್ತದೆ ಎಂಬ ವದಂತಿ ಇತ್ತು. ಆದರೆ ಇನ್ನೂ ಈ ಸಿನಿಮಾ ಒಟಿಟಿಗೆ ಪಾದಾರ್ಪಣೆ ಮಾಡಿಲ್ಲ. ಈ ಹಿಂದಿನ ಅಖಂಡ, ವೀರಸಿಂಹ ರೆಡ್ಡಿ, ಮತ್ತು ಭಗವಂತ ಕೇಸರಿ ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಗೆಲುವು ಪಡೆದಿದ್ದ ಬಾಲಯ್ಯ ಅವರ ಈ ಸಿನಿಮಾದಲ್ಲಿ ಊರ್ವಶಿ ರೌಟೇಲಾ ಕೂಡ ಕಾಣಿಸಿಕೊಂಡಿದ್ದು, ಎಲ್ಲೆಡೆ ಇವರಿಬ್ಬರು ಒಟ್ಟಾಗಿ ಮಾಡಿದ ಡಾನ್ಸ್‌ ವಿಡಿಯೋ ವೈರಲ್ ಆಗುತ್ತಿದೆ.

ಅಭಿಮಾನಿಗಳು ಇನ್ನೂ ಕಾಯಬೇಕಿದೆ

ನೆಟ್‌ಫ್ಲಿಕ್ಸ್ ಭಾರೀ ಬೆಲೆಗೆ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಚಿತ್ರತಂಡದ ಮೂಲಗಳ ಪ್ರಕಾರ, ಡಾಕು ಮಹಾರಾಜ್ ಮಾರ್ಚ್ 4, 2025 ರವರೆಗೆ ಸ್ಟ್ರೀಮಿಂಗ್‌ಗೆ ಲಭ್ಯವಿರುವುದಿಲ್ಲ. ಏಕೆಂದರೆ ಚಿತ್ರವು 50 ದಿನಗಳನ್ನು ಪೂರ್ಣಗೊಳಿಸುವವರೆಗೆ OTT ಬಿಡುಗಡೆಯನ್ನು ತಡೆಹಿಡಿಯಲು ತಯಾರಕರು ನೆಟ್‌ಫ್ಲಿಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ‘ಒಟಿಟಿ ಪ್ಲೇ’ ಜಾಲತಾಣ ವರದಿ ಮಾಡಿದೆ. ಈ ಚಿತ್ರವು ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

'ಡಾಕು ಮಹರಾಜ್' ಚಿತ್ರವನ್ನು ನಾಗವಂಶಿ ಮತ್ತು ಸಾಯಿ ಸೌಜನ್ಯ ಅವರು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ.

'ಡಾಕು ಮಹರಾಜ್' ಚಿತ್ರತಂಡ

ಬಾಲಕೃಷ್ಣ ಎದುರು ಪ್ರಜ್ಞಾ ಜೈಸ್ವಾಲ್ ನಾಯಕಿಯಾಗಿ ನಟಿಸಿದರೆ, ಶ್ರದ್ಧಾ ಶ್ರೀನಾಥ್, ಚಾಂದನಿ ಚೌಧರಿ, ಊರ್ವಶಿ ರೌಟೇಲಾ, ಸಚಿನ್ ಖೇಡೇಕರ್, ಹರ್ಷವರ್ಧನ್, ಹಿಮಜಾ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಮತ್ತು ರೂಬೆನ್-ನಿರಂಜನ್ ದೇವರಮನ್ ಸಂಕಲನವನ್ನು ನಿರ್ವಹಿಸಿದ್ದಾರೆ.