Barroz 3D OTT Release: ಪಂಚ ಭಾಷೆಗಳಲ್ಲಿ ಒಟಿಟಿಗೆ ಬರಲಿದೆ ಮೋಹನ್‌ಲಾಲ್‌ ಬರೋಜ್‌ ಸಿನಿಮಾ; ಎಲ್ಲಿ, ಯಾವಾಗಿನಿಂದ?
ಕನ್ನಡ ಸುದ್ದಿ  /  ಮನರಂಜನೆ  /  Barroz 3d Ott Release: ಪಂಚ ಭಾಷೆಗಳಲ್ಲಿ ಒಟಿಟಿಗೆ ಬರಲಿದೆ ಮೋಹನ್‌ಲಾಲ್‌ ಬರೋಜ್‌ ಸಿನಿಮಾ; ಎಲ್ಲಿ, ಯಾವಾಗಿನಿಂದ?

Barroz 3D OTT Release: ಪಂಚ ಭಾಷೆಗಳಲ್ಲಿ ಒಟಿಟಿಗೆ ಬರಲಿದೆ ಮೋಹನ್‌ಲಾಲ್‌ ಬರೋಜ್‌ ಸಿನಿಮಾ; ಎಲ್ಲಿ, ಯಾವಾಗಿನಿಂದ?

Barroz OTT Release: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಿರ್ದೇಶನದ 3ಡಿ ಫ್ಯಾಂಟಸಿ ಅಡ್ವೆಂಚರ್ ಥ್ರಿಲ್ಲರ್ ಬರೋಜ್ ಸಿನಿಮಾ, ಡಿಸೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಈಗ ಇದೇ ಸಿನಿಮಾದ ಒಟಿಟಿ ಬಿಡುಗಡೆಯ ಕುರಿತ ಮಾಹಿತಿ ಲಭ್ಯವಾಗಿದೆ.

ಬರೋಜ್‌ ಒಟಿಟಿ ಬಿಡುಗಡೆ
ಬರೋಜ್‌ ಒಟಿಟಿ ಬಿಡುಗಡೆ

Barroz OTT Release: ಮಲಯಾಳಂನ ಸ್ಟಾರ್‌ ನಟ ಮೋಹನ್ ಲಾಲ್ ಕ್ರಿಸ್‌ಮಸ್‌ (ಡಿ. 25) ಪ್ರಯುಕ್ತ ಬಹುನಿರೀಕ್ಷಿತ ಬರೋಜ್‌ ಚಿತ್ರದ ಜತೆ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇದೇ “ಬರೋಜ್‌; ಗಾರ್ಡಿಯನ್ ಆಫ್ ಟ್ರೆಷರ್” ಅವರ ಮೊದಲ ನಿರ್ದೇಶನದ ಚಿತ್ರ ಎಂಬ ವಿಶೇಷಣದೊಂದಿಗೆ ಕುತೂಹಲ ಮೂಡಿಸಿತ್ತು. ಫ್ಯಾಂಟಸಿ ಅಡ್ವೆಂಚರ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾ 3ಡಿಯಲ್ಲಿಯೂ ಕಣ್ಮನ ಸೆಳೆದಿತ್ತು. ನಿರ್ದೇಶನದ ಜತೆಗೆ ಮುಖ್ಯಭೂಮಿಕೆಯಲ್ಲಿಯೂ ಮೋಹನ್‌ಲಾಲ್‌ ನಟಿಸಿದ್ದರು. ಆಶೀರ್ವಾದ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಆಂಟನಿ ಪೆರುಂಬವೂರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಮೋಹನ್‌ ಲಾಲ್‌ ನಟನೆ ಮತ್ತು ನಿರ್ದೇಶನದ ಬರೋಜ್ ಸಿನಿಮಾ ಸರಿಸುಮಾರು 80 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಕಥೆ ಇಷ್ಟವಾಗಿದ್ದಕ್ಕೆ, ಸ್ವತಃ ಮೋಹನ್‌ಲಾಲ್‌ ಅವರೇ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಅದರಂತೆ 3ಡಿಯಲ್ಲಿ ಸಿದ್ಧವಾಗಿದ್ದ ಈ ಸಿನಿಮಾ, ಮಲಯಾಳಂ ಜತೆಗೆ ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.

ಈ ವರೆಗಿನ ಬರೋಜ್ ಕಲೆಕ್ಷನ್‌ ಎಷ್ಟು?

ಬರೋಜ್ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂಥ ಮೋಡಿ ಮಾಡುತ್ತಿಲ್ಲ. ಸಿನಿಮಾ ಬಿಡುಗಡೆಯಾಗಿ ಶನಿವಾರಕ್ಕೆ 9 ದಿನಗಳಾದರೂ, ವಿಶ್ವದಾದ್ಯಂತ ಈ ಸಿನಿಮಾ ಗಳಿಸಿದ್ದು ಕೇವಲ 16 ಕೋಟಿ ಮಾತ್ರ. 80 ಕೋಟಿ ಬಜೆಟ್‌ನ ಈ ಸಿನಿಮಾ ಮೊದಲ ದಿನವೇ ಒಳ್ಳೆಯ ಕಲೆಕ್ಷನ್‌ ಮಾಡಲಿದೆ ಎಂದೇ ಹೇಳಲಾಗಿತ್ತು. ಆದರೆ, ಒಂದಷ್ಟು ಕಾರಣಕ್ಕೆ ಈ ಸಿನಿಮಾ ಮೇಲಕ್ಕೆ ಏಳಲೇ ಇಲ್ಲ.

ಯಾವ ಒಟಿಟಿ  ತೆಕ್ಕೆಗೆ ಬರೋಜ್‌ ಸಿನಿಮಾ?

ಸೋಲಿನ ನಡುವೆಯೂ ಬರೋಜ್ ಚಿತ್ರದ ಒಟಿಟಿ ಹಕ್ಕುಗಳು ಈ ಹಿಂದೆಯೇ ಮಾರಾಟವಾಗಿವೆ. ಈಗಾಗಲೇ ದೈತ್ಯ ಒಟಿಟಿ ಸಂಸ್ಥೆ ಈ ಚಿತ್ರದ ಹಕ್ಕನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಅದರಂತೆ ಡಿಸ್ನಿ + ಹಾಟ್‌ಸ್ಟಾರ್‌, ಬರೋಜ್ ಚಿತ್ರದ ಒಟಿಟಿ ಹಕ್ಕುಗಳನ್ನು ಒಳ್ಳೆಯ ಬೆಲೆಗೆ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಮಲಯಾಳಂ ಜತೆಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸೇರಿ ಒಟ್ಟು ಐದು ಭಾಷೆಗಳಲ್ಲಿಯೂ ಬರೋಜ್‌ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ.

ಬರೋಜ್ 3ಡಿ ಒಟಿಟಿ ಸ್ಟ್ರೀಮಿಂಗ್ ಯಾವಾಗ?

ಥಿಯೇಟರ್ ರನ್ ಪೂರ್ಣಗೊಂಡ ಬಳಿಕವಷ್ಟೇ ಒಟಿಟಿಗೆ ಈ ಸಿನಿಮಾ ಎಂಟ್ರಿ ಕೊಡಲಿದೆ. ಕೆಲವು ವರದಿಗಳ ಪ್ರಕಾರ, ಬರೋಜ್ ಸಿನಿಮಾ ಫೆಬ್ರುವರಿ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಒಟಿಟಿ ಅಂಗಳಕ್ಕೆ ಬರುವ ನಿರೀಕ್ಷೆ ಇದೆ. ಈವರೆಗೂ ಯಾವಾಗ ಮತ್ತು ಯಾವ ಒಟಿಟಿಯಲ್ಲಿ ಈ ಸಿನಿಮಾ ಪ್ರಸಾರವಾಗಲಿದೆ ಎಂದು ಅಧಿಕೃತವಾಗಿ ಘೋಷಣೆಯಾಗಿಲ್ಲ.

(ಗಮನಿಸಿ: ಈ ಬರಹದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮಗಳು ಹಾಗೂ ಸಿನಿಮಾ ಉದ್ಯಮದ ಮೂಲಗಳನ್ನು ಆಧರಿಸಿದೆ. ಈ ಸಿನಿಮಾದ ಡಿಜಿಟಲ್ ಹಕ್ಕು ಪಡೆದ ಒಟಿಟಿ ಸಂಸ್ಥೆಗಳು ಶೀಘ್ರದಲ್ಲಿಯೇ ಅಧಿಕೃತವಾಗಿ ದಿನಾಂಕವನ್ನು ಘೋಷಿಸಲಿವೆ)

Whats_app_banner