Bigg Boss Kannada 11: ಈ ಸ್ಪರ್ಧಿಯನ್ನೇ ಗೆಲ್ಲಿಸಿ ಎಂದು ಡ್ರೋನ್ ಆರ್ಮಿಗೆ ಬಹುದೊಡ್ಡ ಸಂದೇಶ ರವಾನಿಸಿದ ಡ್ರೋನ್ ಪ್ರತಾಪ್
Bigg Boss Kannada 11 Finale: ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಇದೀಗ ಬಿಗ್ ಬಾಸ್ ಕನ್ನಡ 11ರಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ಹೇಳಿದ್ದಾರೆ. ಜತೆಗೆ ವೋಟ್ ಮಾಡಿ ಎಂದೂ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಪ್ರತಾಪ್ ಸಪೋರ್ಟ್ ಯಾರಿಗೆ? ಇಲ್ಲಿದೆ ಮಾಹಿತಿ.

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರು ಯಾರು? ಕಿಚ್ಚ ಸುದೀಪ್ ಎಡ ಬಲ ನಿಲ್ಲುವ ಸ್ಪರ್ಧಿಗಳು ಯಾರು? ಅಂತಿಮವಾಗಿ ಯಾರ ಕೈ ಮೇಲಾಗಲಿದೆ? ಸದ್ಯ ಇಡೀ ಕರ್ನಾಟಕ ಈ ಉತ್ತರಕ್ಕಾಗಿ ಕಾಯುತ್ತಿದೆ. ಇನ್ನೇನು ಹೆಚ್ಚು ದಿನವಲ್ಲ, ಸಮಯವೂ ಉಳಿದಿಲ್ಲ. ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ನೆಚ್ಚಿನ ಸ್ಪರ್ಧಿಯನ್ನೇ ಗೆಲ್ಲಿಸಲು ಅವರ ಅಭಿಮಾನಿಗಳು ಪಣತೊಟ್ಟಂತೆ, ಅಭಿಯಾನವನ್ನೇ ಆರಂಭಿಸಿದ್ದಾರೆ. ಸೆಲೆಬ್ರಿಟಿಗಳೂ ಮನವಿ ಮಾಡುತ್ತಿದ್ದಾರೆ. ಅದರಂತೆ, ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಸಹ ಇದೀಗ ತಮ್ಮ ಇಷ್ಟದ ಸ್ಪರ್ಧಿಗೆ ವೋಟ್ ಮಾಡಿ ಎಂದಿದ್ದಾರೆ. ಅಷ್ಟಕ್ಕೂ ಪ್ರತಾಪ್ ಸಪೋರ್ಟ್ ಯಾರಿಗೆ? ಇಲ್ಲಿದೆ ಮಾಹಿತಿ.
ಇಂದು ನಾಳೆ ಫಿನಾಲೆ..
ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಇಂದು (ಜ. 25) ಮತ್ತು ನಾಳೆ (ಜ. 26) ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಯಿಂದಲೇ ಶುರುವಾಗಲಿದೆ. 120ಕ್ಕೂ ಅಧಿಕ ದಿನಗಳು, 20 ಕಂಟೆಸ್ಟಂಟ್‌ಗಳು, ಭಿನ್ನ ವಿಭಿನ್ನ ಮನಸ್ಥಿತಿಗಳು ಈ ಶೋ ಪ್ರವೇಶಿಸಿ, ನಿರ್ಗಮಿಸಿವೆ. ಆ ಪೈಕಿ ಫಿನಾಲೆ ತಲುಪಿದ್ದು ಕೇವಲ ಆರೇ ಸ್ಪರ್ಧಿಗಳು. ಹನುಮಂತ ಲಮಾಣಿ, ಉಗ್ರಂ ಮಂಜು, ರಜತ್ ಕಿಶನ್, ತ್ರಿವಿಕ್ರಮ್, ಭವ್ಯಾ ಗೌಡ ಮತ್ತು ಮೋಕ್ಷಿತಾ. ಈ ಆರರ ಪೈಕಿ ಯಾವ ಸ್ಪರ್ಧಿ ಈ ಸಲದ ವಿನ್ನರ್ ಆಗಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ. ಈ ನಡುವೆ ಕಳೆದ ಸೀಸನ್‌ನ ರನ್ನರ್ ಆಗಿದ್ದ ಡ್ರೋನ್ ಪ್ರತಾಪ್, ಹನುಮಂತುಗೆ ಬೆಂಬಲ ಸೂಚಿಸಿದ್ದಾರೆ.
ಬಡವರ ಮನೆ ಮಕ್ಳು ಬೆಳೀಬೇಕು..
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಡ್ರೋನ್ ಪ್ರತಾಪ್, ಹನುಮಂತನ ಆಟ, ಅವರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ಈ ಸಲದ ಬಿಗ್ ಬಾಸ್ ಪಟ್ಟ ಹನುಮಂತುಗೆ ಸಿಗಬೇಕು ಎಂದೂ ಹೇಳಿದ್ದಾರೆ. ಹಲೋ ಡ್ರೋನ್ ಆರ್ಮಿ, ಎಲ್ಲರಿಗೂ ನಮಸ್ಕಾರ. ಈ ಬಾರಿ ನನಗೆ ತುಂಬಾ ಇಷ್ಟವಾಗಿರುವ ಕಂಟೆಸ್ಟಂಟ್ ಅಂದ್ರೆ ಹನುಮಂತು ಅವರು" ಎಂದಿದ್ದಾರೆ ಡ್ರೋನ್ ಪ್ರತಾಪ್.
"ಈ ಬಾರಿ ಹನುಮಂತು ಬಿಗ್ಬಾಸ್ನಲ್ಲಿ ಗೆಲ್ಲಬೇಕು, ಗೆದ್ದೇ ಗೆಲ್ತಾರೆ. ನಮ್ಮ ಡ್ರೋನ್ ಆರ್ಮಿ ಎಲ್ಲ ವೋಟ್ಸ್‌ಗಳನ್ನ ಹನುಮಂತು ಅವರಿಗೆ ಹಾಕಿ. ಫೋನ್‌ಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ. ವೋಟಿಂಗ್ ಲೈನ್ಸ್ ಕ್ಲೋಸ್ ಆಗುವವರೆಗೂ ವೋಟ್ ಮಾಡಿ, ಹನುಮಂತು ಅವರನ್ನು ಗೆಲ್ಲಿಸೋಣ. ಅವರಿಗೆ ಒಳ್ಳೆಯದಾಗಬೇಕು. ಬಡವರ ಮಕ್ಕಳು ಬೆಳೀಬೇಕು. ಕಡೆದಾಗಿ ಒಂದು ವಿಷ್ಯಾ ಹೇಳ್ತಿನಿ. ವೋಟಿಂಗ್ ಪ್ರಕಾರ ಏನಾದ್ರೂ ಹೋಗುವುದಿದ್ದರೆ, ಹನುಮಂತು ಅವರೇ ಗೆಲ್ಲುತ್ತಾರೆ. ಅವರೇ ಗೆಲ್ಲಬೇಕು" ಎಂದಿದ್ದಾರೆ ಪ್ರತಾಪ್.
ಉತ್ತರ ಕರ್ನಾಟದಲ್ಲಿ ಹನುಮನದ್ದೇ ಹವಾ
ಈಗಾಗಲೇ ಉಳಿದ ಆರು ಜನ ಸ್ಪರ್ಧಿಗಳಲ್ಲಿ ಹನುಮಂತನಿಗೆ ಇಡೀ ಕರ್ನಾಟಕದಾದ್ಯಂತ ದೊಡ್ಡ ಬೆಂಬಲ ಸಿಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಜನತೆ ಹನುಮಂತು ಅವರನ್ನೇ ಗೆಲ್ಲಿಸಲು ಪಣತೊಟ್ಟಂತಿದೆ. ಅದಕ್ಕೆ ಕಾರಣವೂ ಇದೆ. ಈ ವರೆಗೂ ಬಿಗ್ ಬಾಸ್‌ನ 10 ಸೀಸನ್‌ಗಳು ಮುಗಿದಿವೆ. ಉತ್ತರ ಕರ್ನಾಟಕದ ಸಾಕಷ್ಟು ಜನ ಸ್ಪರ್ಧಿಗಳಾಗಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ ಉದಾಹರಣೆಗಳಿವೆ. ಆದರೆ, ಕೊನೇ ಹಂತಕ್ಕೆ ಬಂದು ಕಪ್ ಗೆದ್ದ ಉದಾಹರಣೆ ಇಲ್ಲ. ಈಗ ಹನುಮಂತ ಲಮಾಣಿ ಕಪ್ ಗೆಲ್ಲುವ ಫೆವರಿಟ್ ಎನಿಸಿಕೊಂಡಿದ್ದಾರೆ. ಇನ್ನೇನು ಈ ಕೌತುಕಕ್ಕೆ, ಭಾನುವಾರ ರಾತ್ರಿಯೇ ಉತ್ತರ ಸಿಗಲಿದೆ.
