ಯಾವ ಸಿನಿಮಾವನ್ನು ಈ ಪರದೆಗಳಲ್ಲಿ ನೋಡಬಹುದು; ಐಮ್ಯಾಕ್ಸ್, 4ಡಿಎಕ್ಸ್, ಐಸಿಇ, ಸ್ಕ್ರೀನ್ ಎಕ್ಸ್‌ನ ವೈಶಿಷ್ಟ್ಯ ಹೀಗಿದೆ
ಕೊಟ್ಟ ಹಣಕ್ಕೆ ಮೋಸವಿಲ್ಲದಂತೆ ಖುಷಿ ನೀಡುವಂತ ಸ್ಕ್ರೀನ್‌ನಲ್ಲಿ ಸಿನಿಮಾ ನೋಡಬೇಕು. ಯಾವ ಸಿನಿಮಾಗೆ ಯಾವ ಸ್ಕ್ರೀನ್ ಬೆಸ್ಟ್, ಐಮ್ಯಾಕ್ಸ್, 4ಡಿಎಕ್ಸ್, ಐಸಿಇ, ಸ್ಕ್ರೀನ್ ಎಕ್ಸ್ ಬಗ್ಗೆ ತಿಳಿಯಿರಿ.
ಆಧುನಿಕತೆ ಬೆಳೆದಂತೆ ಸಿನಿಮಾ ಕ್ಷೇತ್ರಕ್ಕೂ ಹೊಸ ಹೊಸ ತಂತ್ರಜ್ಞಾನ ಸೇರಿಕೊಂಡಿದೆ. ಸಿನಿಮಾ ನೋಡುವ ರೀತಿಯನ್ನು ಬದಲಾಯಿಸಿವೆ. ಥಿಯೇಟರ್‌ಗಳಲ್ಲಿ ಕಳೆದೂಂದು ದಶಕದ ಹಿಂದೆ ಇದ್ದಂತಹ ಸ್ಕ್ರೀನ್‌ಗಳು ಈಗ ಇಲ್ಲ. ಹೀಗೇನಿಲ್ಲದರೂ ಮನಸ್ಸಿಗೆ ಮುದ ನೀಡುವಂತ, ಧ್ವನಿ, ಎಫೆಕ್ಟ್ ಎಲ್ಲವೂ ಬದಲಾಗಿದೆ. ಕೊಟ್ಟ ಕಾಸಿಗೆ ಮೋಸ ಇಲ್ಲ ಎಂಬ ಮಟ್ಟಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಿಸಿದ ಸ್ಕ್ರೀನ್‌ಗಳನ್ನು ಇವತ್ತು ಥಿಯೇಟರ್, ಪಿವಿಆರ್‌ಗಳಲ್ಲಿ ನೋಡುತ್ತೇವೆ. 2ಡಿ, 3ಡಿ, 4ಡಿ ಹಾಗೂ 5ಡಿಗಳು ಬಂದಿವೆ.
2009 ರಲ್ಲಿ ಬಿಡುಗಡೆಯಾಗಿದ್ದ ಅವತಾರ್, 2008ರಲ್ಲಿ ಬಂದ ಜರ್ನಿ ಟು ಸೆಂಟರ್ ಆಫ್ ಅರ್ಥ್, ಗ್ರಾವಿಟಿ ಸೇರಿದಂತೆ ಹತ್ತಾರು 3ಡಿ ಸಿನಿಮಾಗಳು ಬಂದಿವೆ. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಂತೂ ಸ್ಕ್ರೀನ್‌ನ ಮಾದರಿಯನ್ನು ಆಧಾರಿಸಿಯೇ ಬಿಡುಗಡೆಯಾಗುತ್ತದೆ. ಐಮ್ಯಾಕ್ಸ್, 4ಡಿಎಕ್ಸ್, ಐಸಿಇ ಹಾಗೂ ಸ್ಕ್ರೀನ್ ಎಕ್ಸ್ ನಂತರ ಲೇಟೆಸ್ಟ್ ಮಾದರಿಗಳನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಹಾಗಾದರೆ ಯಾವ ಸಿನಿಮಾವನ್ನು ಯಾವ ಸ್ಕ್ರೀನ್‌ನಲ್ಲಿ ನೋಡಬೇಕು, ಐಮ್ಯಾಕ್ಸ್, 4ಡಿಎಕ್ಸ್, ಐಸಿಇ ಹಾಗೂ ಸ್ಕ್ರೀನ್ ಎಕ್ಸ್ ಇವುಗಳ ವಿಶೇಷತೆ ಏನು ಅನ್ನೋದನ್ನು ಇಲ್ಲಿ ತಿಳಿಯೋಣ.
ಐಮ್ಯಾಕ್ಸ್
ಐಮ್ಯಾಕ್ಸ್‌ನ ಪೂರ್ಣ ಹೆಸರು ಇಮೇಜ್ ಮ್ಯಾಕ್ಸಿಮಮ್ ಅಂತ. ಇದೊಂದು ಮೋಷನ್ ಪಿಕ್ಚರ್ ಪ್ರೊಜೆಕ್ಷನ್ ಸಿಸ್ಟಮ್ ಆಗಿದ್ದು, ಅದ್ಭುತ ಎನ್ನುವಂತಹ ದೃಶ್ಯಗಳು ಇದರಲ್ಲಿ ಕಾಣಬಹುದು. ವಿಶೇಷವಾದ ಧ್ವನಿಯ ಎಫೆಕ್ಟ್ ಇರುತ್ತದೆ. ಐಮ್ಯಾಕ್ಸ್‌ನಲ್ಲಿ ಸಿನಿಮಾವನ್ನು ನೋಡುವಾಗ ಹೊಸ ಅನುಭವವನ್ನು ನೀಡುತ್ತದೆ. ಹಾಲಿವುಡ್‌ನ ಕ್ರಿಸ್ಟೋಫರ್ ನೋಲನ್ ಅಥವಾ ಜೇಮ್ಸ್ ಕ್ಯಾಮರೂನ್ ಅವರ ಸಿನಿಮಾಗಳು ಐಮ್ಯಾಕ್ಸ್ ಟಚ್‌ನಲ್ಲೇ ಇರುತ್ತವೆ ಅನ್ನೋದು ಸಿನಿ ತಜ್ಞರ ಮಾತು. ಐಮ್ಯಾಕ್ಸ್‌ನಲ್ಲಿ ನಿಖರವಾದ ದೃಶ್ಯಗಳು, ಆಳವಾದ ಬೇಸ್, ದೋಷರಹಿತ ಸಮತೋಲ, 12 ಚಾನೆಲ್ ಸೌಂಡ್ ಸೆಟಪ್ ಇರುತ್ತದೆ.
4ಡಿಎಕ್ಸ್
ತಿಂಡಿ ತಿನ್ನುತ್ತಾ ಸಿನಿಮಾ ನೋಡಬೇಕೆಂದುಕೊಂಡಿದ್ದರೆ ನಿಮಗೆ 4ಡಿಎಕ್ಸ್‌ನಲ್ಲಿ ಸರಿ ಹೊಂದುವುದಿಲ್ಲ. 4ಡಿಎಕ್ಸ್‌ನಲ್ಲಿ ತಿನ್ನಬಹುದಾದ ವಸ್ತುಗಳಿಗೆ ಅವಕಾಶ ಇರುವುದಿಲ್ಲ. ಸಿನಿಮಾವನ್ನು ನೋಡುತ್ತಿದ್ದರೆ ಶೇಕ್ ಆಗುವಂತಹ ಅನುಭವಾಗುತ್ತದೆ. ಸಿನಿಮಾದಲ್ಲಿನ ಕೆಲವು ದೃಶ್ಯಗಳು ಬಂದಾಗ ಕುಳಿತುಕೊಂಡಿರುವಂತಹ ಆಸನವೇ ಶೇಕ್ ಆಗುವಂತೆ ಮಾಡುತ್ತದೆ. ಸಾಹಸ ಪ್ರಿಯರಿಗೆ ಈ ಮಾದರಿಯ ಸ್ಕ್ರೀನ್‌ಗಳು ಹೇಳಿ ಮಾಡಿಸಿದಂತಿರುತ್ತವೆ. ಬುಲೆಟ್ ಟ್ರೈನ್, ದಿ ವುಮನ್ ಕಿಂಗ್ ಹಾಗೂ ಬ್ರಹ್ಮಾಸ್ತ್ರದಂತ ಸಿನಿಮಾಗಳು 4ಡಿಎಕ್ಸ್‌ಗೆ ಹೇಳಿ ಮಾಡಿಸಿದ್ದಂತ ಸಿನಿಮಾಗಳು. ಇಲ್ಲಿ ಮೋಷನ್ ಆಕ್ಟೀವೆಟೆಡ್ ಕುರ್ಚಿಗಳನ್ನೇ ಅಳವಡಿಸಿರುತ್ತಾರೆ. ಡೈನಾಮಿಕ್ ಲೈಟಿಂಗ್ ಎಫೆಕ್ಟ್ಸ್ ಕೂಡ ಈ ಮಾದರಿಯಲ್ಲಿ ಕಾಣಬಹುದು.
ಐಸಿಇ
ಐಸಿಇ ಎಂದರೆ ತಲ್ಲೀನಗೊಳಿಸುವ ಸಿನಿಮಾ ಅನುಭವ (Immersive Cinema Experience) ಮುಖ್ಯ ಸ್ಕ್ರೀನ್ ಜೊತೆಗೆ ಥಿಯೇಟರ್ ಅಥವಾ ಆಡಿಟೋರಿಯಂ ಒಳಗಡೆ ಅಳವಡಿಸಿರುವ 12 ಎಲ್‌ಇಡಿ ಪ್ಯಾನೆಲ್‌ಗಳಲ್ಲಿ ಏಕಕಾಲದಲ್ಲಿ ದೃಶ್ಯ ಬರುತ್ತದೆ. ಐಸ್ ಮಾದರಿಯ ಸ್ಕ್ರೀನ್‌ಗಳು ಹಾರಾರ್ ಸಿನಿಮಾಗಳನ್ನು ವೀಕ್ಷಿಸಲು ತುಂಬಾ ಮಜಾವಾಗಿರುತ್ತವೆ. ಫ್ಯಾಂಟಸಿ ಮತ್ತು ಥ್ರಿಲ್ಲಿಂಗ್ ಮೂವಿಗಳನ್ನು ನೋಡಲು ಈ ಸ್ಕ್ರೀನ್‌ಗಳು ಬೆಸ್ಟ್.
ಸ್ಕ್ರೀನ್ ಎಕ್ಸ್
ಸ್ಕ್ರೀನ್ ಎಕ್ಸ್ ತುಂಬಾ ಲೇಟೆಸ್ಟ್ ಮಾದರಿಯ ಪರದೆಯಾಗಿದ್ದು, 270 ಡಿಗ್ರಿಯಲ್ಲಿ ಸಿನಿಮಾವನ್ನು ನೋಡಬಹುದು. ಇಲ್ಲಿ ಮುಖ್ಯ ಪರದೆಯ ಜೊತೆಗೆ ನಮ್ಮ ಎಡಕ್ಕೆ ಮತ್ತು ಬಲಕ್ಕೆ ಎರಡು ಸ್ಕ್ರೀನ್‌ಗಳು ಇರುತ್ತವೆ. ವೀಕ್ಷಕ ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಿಸಿಕೊಳ್ಳುವಂತೆ ಸ್ಕ್ರೀನ್ ಎಕ್ಸ್ ಮಾಡುತ್ತದೆ. ಮುಖ್ಯ ಪರದೆಯಲ್ಲಿ ಬರುವಂತಹ ದೃಶ್ಯಗಳನೇ ಇತರೆ ಎರಡೂ ಬದಿಗಳಲ್ಲಿ ಇರುವ ಸ್ಕ್ರೀನ್‌ಗಳಲ್ಲೂ ಬರುತ್ತದೆ. ಆದರೆ ಗ್ರಾಫಿಕ್ಸ್ ಸ್ವಲ್ಪ ವಿಸ್ತಾರವಾಗಿ ಕಾಣಿಸುತ್ತದೆ.
ಒಎನ್‌ವೈಎಕ್ಸ್
ಒಎನ್‌ವೈಎಕ್ಸ್ ಒಂದು ಹೊಸ ರೀತಿಯ ಅನುಭವವನ್ನು ನೀಡುತ್ತದೆ. ಕಾರ್ಪೊರೇಟ್ ಕೂಟಗಳಿಗೆ ಸೂಕ್ತವಾಗಿದೆ. ಯಾವುದೇ ಅಡೆತಡೆಗಳು ಇಲ್ಲದೆ, ಡೈನಿಂಗ್ ಟೇಬಲ್‌ನಲ್ಲಿ ಊಟವನ್ನು ಮಾಡುತ್ತಾ ಸಿನಿಮಾ ನೋಡಬೇಕು. ಇದು ಪ್ರಕಾಶಮಾನವಾದ ಸ್ಕ್ರೀನ್ ಹೊಂದಿದ್ದು, ಎಲ್ಲಾ ಮಾದರಿಯ ಮೂವಿಗಳನ್ನೂ ಈ ಪರದೆಯಲ್ಲಿ ವೀಕ್ಷಣೆ ಮಾಡಬಹುದು.