ಆಫೀಸ್‌ನಲ್ಲಿ ಎಲ್ಲರ ಮುಂದೆ ಧರ್ಮರಾಜ್ ಮತ್ತು ಕುಸುಮಾಳನ್ನು ಅವಮಾನಿಸಿ, ಹೀಯಾಳಿಸಿದ ಕನ್ನಿಕಾ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 10ರ ಸಂಚಿಕೆಯಲ್ಲಿ ಸೊಸೆಯನ್ನು ಕೆಲಸದಿಂದ ತೆಗೆದ ಕನ್ನಿಕಾ ವಿರುದ್ಧ ನಾನು ಸೇಡು ತೀರಿಸದೇ ಬಿಡುವುದಿಲ್ಲ ಎಂದು ಕುಸುಮಾ, ಧರ್ಮರಾಜ್‌ನನ್ನು ಕರೆದುಕೊಂಡು, ಕನ್ನಿಕಾ ಆಫೀಸ್‌ಗೆ ಹೋಗುತ್ತಾಳೆ. ಅವರು ಬರುವುದನ್ನೇ ಕನ್ನಿಕಾ ಎದುರು ನೋಡುತ್ತಿದ್ದಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 10ರ ಸಂಚಿಕೆಯಲ್ಲಿ ಕುಸುಮಾ ಸೇಡು ತೀರಿಸಿಕೊಳ್ಳಲು ಹೋದ ಪ್ರಸಂಗ ನಡೆಯಿತು. ಮನೆಯಲ್ಲಿ ಪೂಜಾ ಮೂಲಕ ಹಿತಾಗೆ ಫೋನ್ ಮಾಡಿಸಿದ ಕುಸುಮಾ, ಭಾಗ್ಯಾಳ ಕೆಲಸ ಕಸಿದುಕೊಂಡಿದ್ದು ಯಾರು ಎಂದು ವಿಚಾರಿಸುತ್ತಾಳೆ. ಆಗ ಇದೆಲ್ಲವೂ ಕನ್ನಿಕಾ ಮಾಡಿರುವ ಕುತಂತ್ರ ಎಂದು ಅರಿವಾಗುತ್ತದೆ. ಅಲ್ಲದೆ, ಕನ್ನಿಕಾಳ ಆಫೀಸ್‌ನ ವಿಳಾಸ ಪಡೆದುಕೊಂಡು ಅಲ್ಲಿಗೆ ಹೊರಡಲು ಕುಸುಮಾ ಸಜ್ಜಾಗುತ್ತಾಳೆ. ಈ ವಿಚಾರ ಭಾಗ್ಯಾಳ ಅರಿವಿಗೆ ಬರುವುದಿಲ್ಲ. ಅವಳಿಗೆ ತಿಳಿಸುವುದು ಬೇಡ ಎನ್ನುವುದು ಕುಸುಮಾಳ ಯೋಚನೆಯಾಗಿರುತ್ತದೆ.
ಕೆಲಸ ಹುಡುಕುವುದನ್ನು ಮುಂದುವರಿಸಿದ ಭಾಗ್ಯ
ಭಾಗ್ಯಾಗೆ ಹೊಸ ಕೆಲಸ ಹುಡುಕುವುದೇ ಸವಾಲಾಗಿದೆ. ಎಲ್ಲರ ಬಳಿಯೂ ಕೆಲಸ ಕೇಳುವುದನ್ನು ಮುಂದುವರಿಸಿದ್ದಾಳೆ. ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ಗೂ ಮತ್ತೊಮ್ಮೆ ಕರೆ ಮಾಡಿ, ಯಾರಾದರೂ ಕೆಲಸ ಕೊಡಿಸುವುದಿದ್ದರೆ ಅವರ ನಂಬರ್ ಕೊಡಿ ಎಂದು ಕೇಳುತ್ತಾಳೆ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ನಿಮಗೆ ಕೆಲಸ ಸಿಗುವುದು ಕಷ್ಟ ಎಂದು ಹೇಳುತ್ತಾರೆ. ಅದನ್ನು ಕೇಳಿ ಭಾಗ್ಯಾಗೆ ಸಂಕಟವಾಗುತ್ತದೆ.
ಧರ್ಮರಾಜ್‌ನ ಕರೆದುಕೊಂಡು ಹೊರಟ ಕುಸುಮಾ
ಕನ್ನಿಕಾ ಆಫೀಸ್ ವಿಳಾಸವನ್ನು ಹಿತಾ ಮೂಲಕ ಪೂಜಾ ತೆಗೆಸಿಕೊಡುತ್ತಾಳೆ. ಸಿಕ್ಕ ಕೂಡಲೇ, ಧರ್ಮರಾಜ್ ಬಳಿ ಕಾರ್ ತೆಗೆಯಲು ಕುಸುಮಾ ಹೇಳುತ್ತಾಳೆ. ಕುಸುಮಾ ಕಾರಿನಲ್ಲಿ ಧರ್ಮರಾಜ್ ಜತೆ ಕನ್ನಿಕಾ ಆಫೀಸ್‌ಗೆ ಹೊರಡುತ್ತಾಳೆ. ಯಾರು ಹೇಳಿದರೂ ಆಕೆ ಕೇಳುವುದಿಲ್ಲ, ಇವತ್ತು ಭಾಗ್ಯಾಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಹೊರಡುತ್ತಾಳೆ. ಪೂಜಾ ಬೇಡವೆಂದರೂ ಕುಸುಮಾ ಕೇಳಲು ತಯಾರಿಲ್ಲ.
ಕನ್ನಿಕಾಗೆ ಆವಾಜ್ ಹಾಕಿದ ಕುಸುಮಾ
ಕನ್ನಿಕಾ ಆಫೀಸ್‌ಗೆ ತೆರಳಿದ ಕುಸುಮಾ, ಸೀದಾ ಆಫೀಸ್ ಒಳಗಡೆ ಹೋಗುತ್ತಾಳೆ. ಅಲ್ಲಿ ಕನ್ನಿಕಾ ಇವರು ಬರುವುದನ್ನು ತಿಳಿದುಕೊಂಡು, ಮೊದಲೇ ಎಲ್ಲ ಪ್ಲ್ಯಾನ್ ಮಾಡಿರುತ್ತಾಳೆ. ಅದರಂತೆಯೇ, ಉಪಾಯ ಮಾಡಿ, ಇಬ್ಬರನ್ನೂ ಕ್ಯಾಬಿನ್‌ಗೆ ಕರೆಸುತ್ತಾಳೆ. ಕ್ಯಾಬಿನ್‌ನಲ್ಲಿ ಕನ್ನಿಕಾಗೆ ಮಾತ್ರ ಚೆಯರ್ ಇರುತ್ತದೆ. ಧರ್ಮರಾಜ್ ಮತ್ತು ಕುಸುಮಾ ನಿಂತುಕೊಂಡೇ ಇರಬೇಕಾಗುತ್ತದೆ. ನಿಮಗೆ ಅವಮಾನ ಮಾಡಲೆಂದೇ ಇದನ್ನು ಮಾಡಿದ್ದೇನೆ ಎಂದು ಕನ್ನಿಕಾ ಹೇಳುತ್ತಾಳೆ. ಕುಸುಮಾ ಮತ್ತು ಧರ್ಮರಾಜ್ ಅದನ್ನು ವಿರೋಧಿಸಿ, ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಗ ಕನ್ನಿಕಾ, ತನ್ನ ಆಫೀಸ್ ಸಿಬ್ಬಂದಿ ಕರೆದು, ಅವರ ಮುಂದೆಯೇ ಇಬ್ಬರನ್ನೂ, ಭಾಗ್ಯಾಗೂ ಅವಮಾನ ಮಾಡುತ್ತಾಳೆ. ಅವಳ ಹೀಯಾಳಿಕೆಯ ಮಾತು ಕೇಳಿ ಕುಸುಮಾ ಮತ್ತು ಧರ್ಮರಾಜ್ ಅವಮಾನದಿಂದ ತಲೆ ತಗ್ಗಿಸುತ್ತಾರೆ. ಅಲ್ಲಿಗೆ ಫೆಬ್ರುವರಿ 10ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 712ನೇ ಸಂಚಿಕೆ ಮುಗಿಸಿದೆ. ಪೂಜಾಳನ್ನು ಕರೆದುಕೊಂಡ ಭಾಗ್ಯ ಈಗ ಕನ್ನಿಕಾ ಆಫೀಸ್‌ಗೆ ಹೋಗುತ್ತಿದ್ದಾಳೆ, ಅತ್ತೆ ಮಾವನನ್ನು ಅಲ್ಲಿಂದ ಕರೆದುಕೊಂಡು ಬರುತ್ತಾಳಾ? ಮುಂದೇನು ಮಾಡುತ್ತಾಳೆ ಎಂದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ