ಶ್ರೇಷ್ಠಾಳಿಂದ ನಮಗೆ ತಾಂಬೂಲ ಬೇಡ, ಈ ಮನೆ ಸೊಸೆ ಭಾಗ್ಯಾ ಕೊಟ್ಟರೆ ಮಾತ್ರ ತೆಗೆದುಕೊಳ್ಳುವುದು ಎಂದ ನೆರೆಮನೆಯವರು; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 10ರ ಎಪಿಸೋಡ್‌ನಲ್ಲಿ ಭಾಗ್ಯಾ ತಾನು ಹೇಳಿದಂತೆ ಸತ್ಯನಾರಾಯಣಸ್ವಾಮಿ ಪೂಜೆಗೆ 5 ನಿಮಿಷದಲ್ಲಿ ಪ್ರಸಾದ ತಯಾರಿಸಿಕೊಡುತ್ತಾಳೆ. ಶ್ರೇಷ್ಠಾಳಿಂದ ತಾಂಬೂಲ ತೆಗೆದುಕೊಳ್ಳಲು ನಿರಾಕರಿಸುವ ನೆರೆಮನೆಯವರು, ಈ ಮನೆಗೆ ತಕ್ಕ ಸೊಸೆ ಭಾಗ್ಯಾ ಎನ್ನುತ್ತಾರೆ.
Bhagyalakshmi Serial: ತಾಂಡವ್‌ನನ್ನು ಬ್ಲಾಕ್‌ಮೇಲ್ ಮಾಡಿ ಮನೆಗೆ ಬಂದು ಸೇರಿಕೊಂಡಿರುವ ಶ್ರೇಷ್ಠಾ, ತಾನು ಅಧಿಕೃತವಾಗಿ ಆ ಮನೆ ಸೊಸೆ ಎನ್ನುವಂತೆ ವರ್ತಿಸುತ್ತಿದ್ದಾಳೆ. ಮನೆಯವರೆಲ್ಲಾ ನನ್ನನ್ನು ಇಲ್ಲಿಂದ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಆ ಭಾಗ್ಯಾಗಿಂತ ಕಡಿಮೆ ಎನಿಸಿಕೊಳ್ಳಬಾರದು ಎಂದು ಮನೆ ಕೆಲಸವನ್ನು ತಾನೇ ಮಾಡುತ್ತಿದ್ದಾಳೆ.
ಪೂಜೆಗೆ ಪ್ರಸಾದ ತಯಾರಿಸಿಕೊಡುವ ಭಾಗ್ಯಾ
ಸತ್ಯನಾರಾಯಣಸ್ವಾಮಿಗೆ ಪ್ರಸಾದ ತಯಾರಿಸುತ್ತೇನೆ ಎಂದು ಹೇಳಿ ಶ್ರೇಷ್ಠಾ, ಉಪ್ಪಿಟ್ಟು ತಯಾರಿಸುತ್ತಾಳೆ. ಅದನ್ನು ನೋಡಿ ಅರ್ಚಕರು ಇಷ್ಟು ವರ್ಷಗಳ ಕಾಲ ಪೂಜೆ ಮಾಡಿದ್ದೇನೆ ಎಲ್ಲಿಯೂ ಈ ರೀತಿ ಪ್ರಮಾದ ಆಗಿಲ್ಲ, ಯಾರಾದರೂ ಸತ್ಯನಾರಾಯಣ ಪೂಜೆಗೆ ಉಪ್ಪಿಟ್ಟು ತಯಾರಿಸುತ್ತಾರಾ ಎಂದು ಕೇಳುತ್ತಾರೆ, ಅದರ ರುಚಿ ನೋಡುವ ಶ್ರೇಷ್ಠಾ ಚೆನಾಗಿದೆಯಲ್ಲಾ ಇದನ್ನು ಏಕೆ ಪ್ರಸಾದವಾಗಿ ಇಡುವುದಿಲ್ಲ ಎಂದು ಕೇಳುತ್ತಾಳೆ. ಶ್ರೇಷ್ಠಾ ವರ್ತನೆಗೆ ತಾಂಡವ್ ಬಿಟ್ಟು ಉಳಿದವರು ಸಿಟ್ಟಾಗುತ್ತಾರೆ. ನಾನು ಮನೆಯಲ್ಲಿ ಪೂಜೆ ಮಾಡುವುದಿಲ್ಲ ಎಂದು ಅರ್ಚಕರು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಅವರನ್ನು ಮನವಿ ಮಾಡುವ ಭಾಗ್ಯಾ ನಾನು ಇನ್ನು 5 ನಿಮಿಷದಲ್ಲಿ ದೇವರಿಗೆ ಪ್ರಸಾದ ಮಾಡಿಕೊಡುತ್ತೇನೆ ಎನ್ನುತ್ತಾಳೆ.
ಹೇಳಿದಂತೆ ಭಾಗ್ಯಾ 5 ನಿಮಿಷಕ್ಕೆ ಪ್ರಸಾದ ಮಾಡಿ ತರುತ್ತಾಳೆ. ಪೂಜೆಗೆ ಯಾರು ಕೂರುತ್ತಾರೆ ರಂದು ಅರ್ಚಕರು ಕೇಳುತ್ತಾರೆ. ಭಾಗ್ಯಾ ಹಾಗೂ ತಾಂಡವ್ ಕೂರುತ್ತಾರೆ ಎಂದು ಧರ್ಮರಾಜ್ ಹೇಳುತ್ತಾಳೆ. ಆದರೆ ಶ್ರೇಷ್ಠಾ ಅದಕ್ಕೆ ನಿರಾಕರಿಸುತ್ತಾಳೆ. ಡಿವೋರ್ಸ್ ಆಗಿರುವ ಭಾಗ್ಯಾ ಹೇಗೆ ತಾಂಡವ್ ಜೊತೆ ಪೂಜೆಗೆ ಕೂರುತ್ತಾಳೆ? ನಾನು ಕೂರುತ್ತೇನೆ ಎನ್ನುತ್ತಾಳೆ. ತಾಳಿ ಇಲ್ಲದೆ ನೀನು ಪೂಜೆಗೆ ಕೂರೋಕೆ ಆಗುವುದಿಲ್ಲ ಎಂದು ಸುನಂದಾ ಹೇಳುತ್ತಾಳೆ.ಹಾಗಾದರೆ ಈ ಪೂಜೆ ನಡೆಯುವುದಿಲ್ಲ, ಭಾಗ್ಯಾ ತನ್ನ ಸ್ವಾರ್ಥಕ್ಕಾಗಿ ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ನಿಲ್ಲಿಸುತ್ತಾಳೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಪೂಜೆ ನಿಲ್ಲುವುದಿಲ್ಲ, ಈ ಮನೆಯಲ್ಲಿ ಹಿರಿಯ ದಂಪತಿ ಇದ್ದಾರೆ, ನನ್ನ ಅತ್ತೆ ಮಾವ, ಅವರು ಪೂಜೆಗೆ ಕೂರುತ್ತಾರೆ ಎಂದು ಭಾಗ್ಯಾ ಹೇಳುತ್ತಾಳೆ.
ಕುಸುಮಾ ಕೈಯಲ್ಲಿ ತಾಂಬೂಲ ತೆಗೆದುಕೊಳ್ಳಲು ನಿರಾಕರಿಸಿದ ನೆರೆಮನೆಯವರು
ಕುಸುಮಾ, ಧರ್ಮರಾಜ್ ಇಬ್ಬರೂ ಪೂಜೆಗೆ ಕೂರುತ್ತಾರೆ. ಪೂಜೆ ಮುಗಿದ ನಂತರ ಎಲ್ಲರಿಗೂ ತಾಂಬೂಲ ಕೊಡುವಂತೆ ಅರ್ಚಕರು ಭಾಗ್ಯಾಗೆ ತಟ್ಟೆ ಕೊಡುತ್ತಾರೆ. ಅದನ್ನು ತೆಗೆದುಕೊಳ್ಳಲು ಭಾಗ್ಯಾ ಹೋದಾಗ, ಅವಳ ಕೈಯಿಂದ ಶ್ರೇಷ್ಠಾ ಕಸಿದುಕೊಂಡು ಎಲ್ಲರಿಗೂ ತಾಂಬೂಲ ಕೊಡಲು ಹೋಗುತ್ತಾಳೆ. ಆದರೆ ಅವಳ ಕೈಯಿಂದ ಯಾರೂ ತಾಂಬೂಲ ತೆಗೆದುಕೊಳ್ಳುವುದಿಲ್ಲ. ಈ ಮನೆಗೆ ತಕ್ಕ ಸೊಸೆ ಭಾಗ್ಯಾ, ಅವಳು ಕೊಟ್ಟರೆ ಮಾತ್ರ ನಾವು ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಪೂಜಾ ಬಂದು ಶ್ರೇಷ್ಠಾ ಕೈಯಿಂದ ತಾಂಬೂಲದ ತಟ್ಟೆ ಕಸಿದುಕೊಂಡು ಭಾಗ್ಯಾಗೆ ಕೊಡುತ್ತಾಳೆ.
ಕೋಪಗೊಂಡ ಶ್ರೇಷ್ಠಾ ರೂಮ್‌ಗೆ ಹೋಗುತ್ತಾಳೆ. ನಾನು ಭಾಗ್ಯಾ ಆಗಿ ಇದ್ದರೆ ಇವರನ್ನೆಲ್ಲಾ ಬಗ್ಗಿಸಲು ಸಾಧ್ಯವಿಲ್ಲ. ನಾನು ಶ್ರೇಷ್ಠಾ ಆಗೇ ಇವರಿಗೆ ಬುದ್ಧಿ ಕಲಿಸುತ್ತೇನೆ ಎಂದುಕೊಳ್ಳುತ್ತಾಳೆ. ಮರುದಿನ ಆಫೀಸಿಗೆ ಹೋಗಲು ರೆಡಿ ಆಗುತ್ತಾಳೆ. ನೀನು ಆಫೀಸಿಗೆ ಹೋದರೆ ಮನೆ ಕೆಲಸ ಯಾರು ಮಾಡುತ್ತಾರೆ ಎಂದು ಕುಸುಮಾ ಕೇಳುತ್ತಾಳೆ. ಅದಕ್ಕೆ ನಾನು ಎಲ್ಲಾ ರೆಡಿ ಮಾಡಿದ್ದೇನೆ ಎಂದು ಹೇಳುವ ಶ್ರೇಷ್ಠಾ, ಮನೆ ಕೆಲಸದವಳನ್ನು ಕರೆಯುತ್ತಾಳೆ.
ಇದನ್ನೂ ಓದಿ: ಹಾಂಗ್ಕಾಂಗ್ಗೆ ಹಾರಿದ ಬಿಗ್ಬಾಸ್ ಖ್ಯಾತಿಯ ಅನುಷಾ ರೈ
ಮನೆ ಕೆಲಸದವಳನ್ನು ಕುಸುಮಾ ಒಪ್ಪುತ್ತಾಳಾ? ಶ್ರೇಷ್ಠಾ ಮತ್ತೇನು ಅವಾಂತರ ಮಾಡುತ್ತಾಳೆ? ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ದೊರೆಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ಇದನ್ನೂ ಓದಿ: ಪವಿತ್ರಾಗೌಡ ಬೆನ್ನುತಟ್ಟಿ ಸಮಾಧಾನ ಮಾಡಿದ್ರಂತೆ ದರ್ಶನ್
ವಿಭಾಗ