ಭಾಗ್ಯ ಜೀವನ ಹಾಳು ಮಾಡಲು ಕನ್ನಿಕಾ ಜೊತೆ ಕೈಜೋಡಿಸಿದ ತಾಂಡವ್ ಮತ್ತು ಶ್ರೇಷ್ಠಾ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಏಪ್ರಿಲ್ 11ರ ಸಂಚಿಕೆಯಲ್ಲಿ ಭಾಗ್ಯಳ ಜೀವನವನ್ನು ಹೇಗಾದರೂ ಹಾಳು ಮಾಡಬೇಕು ಎಂದು ತಾಂಡವ್ ಪಣ ತೊಟ್ಟಿದ್ದಾನೆ. ಅದಕ್ಕಾಗಿ ಅವನು ಕನ್ನಿಕಾಳ ಸಹಾಯ ಕೇಳಿದ್ದಾನೆ, ಅವಳು ಸಹಾಯ ಮಾಡುವುದಾಗಿ ಹೇಳಿದ್ದಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಏಪ್ರಿಲ್ 11ರ ಸಂಚಿಕೆಯಲ್ಲಿ ತಾಂಡವ್ ಕೋಪದಿಂದ ಕುದಿಯುತಿದ್ದಾನೆ. ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದು, ಬೀಳಿಸಿ, ಭಾಗ್ಯ ಮೇಲಿನ ಕೋಪವನ್ನು ತೀರಿಸಿಕೊಳ್ಳುತ್ತಿದ್ದಾನೆ. ಆಗ ಶ್ರೇಷ್ಠಾ ಬಂದಿದ್ದಾಳೆ. ಅವಳ ಬಳಿ, ನನಗೆ ಹೊಟ್ಟೆ ನೋವಿದೆ, ಹೊರಗಿನ ಊಟ ಬೇಡ ಎನ್ನುತ್ತಾನೆ ತಾಂಡವ್. ಅದಕ್ಕೆ ಅವಳು ಒಳ್ಳೆ ಹೋಟೆಲ್‌ನಿಂದ ಊಟ ತರಿಸಿದ್ದೇನೆ, ಚೆನ್ನಾಗಿದೆ, ತಿನ್ನು ಎನ್ನುತ್ತಾಳೆ. ಆಮೇಲೆ ಬೇಕಾದರೆ ನಾನು ಮನೆಯಲ್ಲೇ ರೆಡಿ ಮಾಡುತ್ತೇನೆ ಎನ್ನುತ್ತಾಳೆ. ಅದಕ್ಕೆ ತಾಂಡವ್ ಒಲ್ಲದ ಮನಸ್ಸಿನಿಂದ ಊಟ ಮಾಡುತ್ತಾನೆ.
ಹೋಟೆಲ್‌ನಿಂದ ಬಂದ ಪಾರ್ಸೆಲ್‌ನಲ್ಲಿ ಒಂದೆರಡು ತುತ್ತು ತಿಂದ ಕೂಡಲೇ ಅವನಿಗೆ ವಾಕರಿಕೆ ಬಂದಿದೆ. ವಾಂತಿ ಮಾಡಿಕೊಂಡ ತಾಂಡವ್ ಸುಸ್ತಾಗಿದ್ದಾನೆ, ಶ್ರೇಷ್ಠಾಗೆ ತಾಂಡವ್ ಸ್ಥಿತಿ ಕಂಡು ಕಸಿವಿಸಿಯಾಗಿದೆ. ಅಂತಹ ಸಂದರ್ಭದಲ್ಲೂ ತಾಂಡವ್ ಭಾಗ್ಯ ಮಾಡಿಕೊಡುತ್ತಿದ್ದ ರುಚಿರುಚಿಯಾದ ಊಟ, ತಿಂಡಿಯ ನೆನಪು ಮಾಡಿಕೊಳ್ಳುತ್ತಾನೆ. ಆದರೆ ಶ್ರೇಷ್ಠಾ ಅದ್ಯಾವುದನ್ನೂ ಮಾಡಿಕೊಡುವುದಿಲ್ಲ ಎನ್ನುವುದು ಅವನಿಗೆ ಅರಿವಾಗುತ್ತದೆ.
ನಂತರ, ಭಾಗ್ಯ ತನಗೆ ಅವಮಾನ ಮಾಡಿರುವುದು ಮತ್ತು ಮನೆ, ಮಕ್ಕಳ ವಿಚಾರದಲ್ಲಿ ಅವಳು ಗೆಲುವು ಸಾಧಿಸುತ್ತಿರುವುದನ್ನು ಕಂಡು ತಾಂಡವ್ ಮತ್ತೆ ಉರಿದುಕೊಳ್ಳುತ್ತಿದ್ದಾನೆ. ಹೀಗಾಗಿ ಅವನು ಶ್ರೇಷ್ಠಾ ಜೊತೆ ಸೇರಿಕೊಂಡು ಮತ್ತೆ ಭಾಗ್ಯಗೆ ತೊಂದರೆ ಕೊಡಲು ಮುಂದಾಗಿದ್ದಾನೆ. ಅದಕ್ಕಾಗಿ ಅವನು ಕನ್ನಿಕಾಳನ್ನು ಭೇಟಿಯಾಗಲು ಉದ್ದೇಶಿಸಿದ್ದಾನೆ. ಕನ್ನಿಕಾ ಜೊತೆ ಸೇರಿಕೊಂಡು, ಭಾಗ್ಯ ವಿರುದ್ಧ ಸೇಡು ತೀರಿಸಿಕೊಳ್ಳುವ ಬಗ್ಗೆ ಅವರಿಬ್ಬರೂ ಸಂಚು ರೂಪಿಸುತ್ತಿದ್ದಾರೆ.
ಭಾಗ್ಯಗೆ ಕಾಟ ಕೊಡಲು ಬಂದ ಕನ್ನಿಕಾ
ತಾಂಡವ್ ಮತ್ತು ಶ್ರೇಷ್ಠಾ ಅಂದುಕೊಂಡಂತೆ, ಭಾಗ್ಯಗೆ ಕಿರುಕುಳ ಕೊಡಲು ಮತ್ತು ಅವಳ ಕೈ ತುತ್ತಿಗೆ ತೊಂದರೆ ಮಾಡಲು ಕನ್ನಿಕಾ ಒಪ್ಪಿಕೊಂಡಿದ್ದಾಳೆ. ಅವಳು ಭಾಗ್ಯಳ ಬಗ್ಗೆ ದ್ವೇಷ ಹೊಂದಿದ್ದಾಳೆ. ಹೀಗಾಗಿ ಅವಳಿಗೂ ಭಾಗ್ಯ ಚೆನ್ನಾಗಿರುವುದು ಮತ್ತು ಬೆಳೆಯುವುದು ಬೇಕಾಗಿಲ್ಲ. ಅದಕ್ಕಾಗಿ ಭಾಗ್ಯಗೆ ತೊಂದರೆ ಕೊಡಲು ಇವರು ಮೂವರು ಮತ್ತೆ ಒಂದಾಗಿದ್ದಾರೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರದ ಏಪ್ರಿಲ್ 11ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 761ನೇ ಸಂಚಿಕೆ ಮುಗಿಸಿದೆ. ಭಾಗ್ಯ ಈಗ ಮತ್ತೆ ತಾಂಡವ್, ಶ್ರೇಷ್ಠಾ ಮತ್ತು ಕನ್ನಿಕಾಳ ಹೊಸ ಸಂಚನ್ನು ಹೇಗೆ ಎದುರಿಸುತ್ತಾಳೆ, ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ