ತಾಂಡವ್ ಸಹಾಯವಿಲ್ಲದೆ ಸುನಂದಾಳನ್ನು ಬಿಡಿಸಲು ಭಾಗ್ಯಾಗೆ ಸಹಾಯ ಮಾಡುತ್ತಿರುವ ಕಾಣದ ಕೈ ಯಾರದ್ದು? ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 12ರ ಎಪಿಸೋಡ್‌ನಲ್ಲಿ ಸುನಂದಾಳನ್ನು ಬಿಡಿಸಲು ನನ್ನ ಕಂಡಿಷನ್‌ಗೆ ಒಪ್ಪುವಂತೆ ತಾಂಡವ್ ಹೇಳುತ್ತಾನೆ. ಅದೇ ಸಮಯಕ್ಕೆ ಭಾಗ್ಯಾ ಮೊಬೈಲ್‌ಗೆ ಬರುವ ಮೆಸೇಜ್‌ವೊಂದು ಅವಳ ಮಾತಿನ ಧಾಟಿಯನ್ನೇ ಬದಲಿಸುತ್ತದೆ. ಭಾಗ್ಯಾ ಮುಖದ ಮೇಲೆ ಆದ ಬದಲಾವಣೆ ಕಂಡು ತಾಂಡವ್‌ಗೆ ಆಶ್ಚರ್ಯವಾಗುತ್ತದೆ.
Bhagyalakshmi Serial: ಲಕ್ಷ್ಮೀ , ಭಾಗ್ಯಾ ಮನೆ ಗೃಹಪ್ರವೇಶದಲ್ಲಿ ಕೊಟ್ಟಿದ್ದ ಸೋಫಾಸೆಟನ್ನು ಶ್ರೇಷ್ಠಾ, ಸುನಂದಾ ಮನೆಗೆ ತರುತ್ತಾಳೆ. ತನ್ವಿ ಕಾಲೇಜಿನಿಂದ ಸಸ್ಪೆಂಡ್ ಆದ ವಿಚಾರ ತಿಳಿದು ಶ್ರೇಷ್ಠಾ ಖುಷಿಯಾಗುತ್ತಾಳೆ. ಈ ವಿಚಾರ ತಾಂಡವ್‌ಗೆ ಕೂಡಾ ತಿಳಿಯುತ್ತದೆ. ಭಾಗ್ಯಾ ಮೇಲೆ ಕೋಪಗೊಂಡ ತಾಂಡವ್, ಮಕ್ಕಳನ್ನು ಕರೆತರಲು ಸುನಂದಾ ಮನೆಗೆ ಹೋಗುತ್ತಾನೆ. ನೀವು ನಮ್ಮನ್ನೆಲ್ಲಾ ಮನೆಯಿಂದ ಹೊರ ಹಾಕಿದ ನಂತರ ಹೀಗೆಲ್ಲಾ ನಡೆಯುತ್ತಿದೆ. ದಯವಿಟ್ಟು ನಾವೆಲ್ಲಾ ಒಟ್ಟಿಗೆ ಇರೋಣ ಅಪ್ಪ ಎಂದು ಮಕ್ಕಳು ತಾಂಡವ್ ಬಳಿ ಮನವಿ ಮಾಡುತ್ತಾರೆ.
ಮಕ್ಕಳ ಕಣ್ಣೀರಿಗೂ ಕರಗದ ತಾಂಡವ್
ತಾಂಡವ್ ಮಾತ್ರ ಮಕ್ಕಳ ಕಣ್ಣಿರಿಗೆ ಕರಗುವುದಿಲ್ಲ. ಯಾರಿಗೆ ಏನೇ ಆದರೂ ಸರಿ ನನಗಂತೂ ನಿನ್ನ ಜೊತೆ ಬದುಕಲು ಇಷ್ಟವಿಲ್ಲ ಎಂದು ತಾಂಡವ್ ಹೇಳುತ್ತಾನೆ. ಶ್ರೇಷ್ಠಾ ಆಂಟಿ ರಾಕ್ಷಸಿ ಎಂದು ತನ್ಮಯ್ ಹೇಳಿದಾಗ ಕೋಪಗೊಳ್ಳುವ ತಾಂಡವ್, ಮಗನ ಮೇಲೆ ಕೈ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಭಾಗ್ಯಾ ತಾಂಡವ್‌ನನ್ನು ತಡೆಯುತ್ತಾಳೆ. ಇನ್ನೊಮ್ಮೆ ನನ್ನ ಗುಂಡಣ್ಣನ ಮೇಲೆ ಕೈ ಮಾಡಿದರೆ ನಾನು ಸುಮ್ಮನಿರುವುದಿಲ್ಲ. ಒಬ್ಬ ತಾಯಿಯಾಗಿ ನಾನು ಏನು ಮಾಡಬೇಕು ಅದನ್ನೇ ಮಾಡುತ್ತೇನೆ ಎನ್ನುತ್ತಾಳೆ. ಭಾಗ್ಯಾ ಉಗ್ರರೂಪ ಕಂಡು ತಾಂಡವ್ ಅಲ್ಲಿಂದ ಹೊರಡುತ್ತಾನೆ. ಮೊಬೈಲನ್ನು ಅಲ್ಲೇ ಮರೆತು ಹೋಗುತ್ತಾನೆ. ಶ್ರೇಷ್ಠಾ, ತಾಂಡವ್‌ಗೆ ಕರೆ ಮಾಡುತ್ತಾಳೆ. ಸುನಂದಾ ಕಾಲ್ ರಿಸೀವ್ ಮಾಡುತ್ತಾಳೆ. ತಾಂಡವ್ ಭಾಗ್ಯಾ ಮನೆಗೆ ಹೋಗಿದ್ಯಾ ಎಂದು ಕೇಳುತ್ತಾಳೆ. ಸುನಂದಾ , ಕುಸುಮಾ ಕೋಪಗೊಂಡು ಶ್ರೇಷ್ಠಾಗೆ ಬೈಯ್ಯುತ್ತಾರೆ. ಆಗ ಶ್ರೇಷ್ಠಾ ಸುನಂದಾ ಮೇಲೆ ಕೋಪಗೊಂಡು ಏಕವಚನದಲ್ಲೇ ಮಾತನಾಡುತ್ತಾಳೆ.
ಶ್ರೇಷ್ಠಾಳಿಂದ ನನ್ನ ಮಗಳ ಬದುಕು ಹಾಳಾಗುತ್ತಿದೆ. ಇದಕ್ಕೆಲ್ಲಾ ಒಂದು ಅಂತ್ಯ ಹಾಡಬೇಕು ಎಂದುಕೊಳ್ಳುವ ಸುನಂದಾ, ಚಾಕು ಹಿಡಿದು ಶ್ರೇಷ್ಠಾ ಮನೆಗೆ ಹೋಗುತ್ತಾಳೆ. ಅವಳನ್ನು ಕಂಡು ಶ್ರೇಷ್ಠಾ ಗಾಬರಿಯಾಗುತ್ತಾಳೆ. ನನ್ನ ಮಗಳ ಜೀವನ ಹಾಳು ಮಾಡುತ್ತಿರುವ ನೀನು ಬದುಕಿರಬಾರದು, ನೀನು ಸತ್ತರೆ ಎಲ್ಲವೂ ಸರಿ ಆಗುತ್ತದೆ ಎಂದು ಚಾಕುವಿನಿಂದ ಚುಚ್ಚಲು ಪ್ರಯತ್ನಿಸುತ್ತಾಳೆ. ಶ್ರೇಷ್ಠಾ ಅರಚುವುದನ್ನು ಕಂಡು ನೆರೆಮನೆಯವರು ಅಲ್ಲಿಗೆ ಬಂದು ಸುನಂದಾಳನ್ನು ತಡೆಯುತ್ತಾರೆ. ಶ್ರೇಷ್ಠಾ ಪೊಲೀಸರಿಗೆ ಕಾಲ್ ಮಾಡಿ ತನ್ನ ಮೇಲೆ ಕೊಲೆ ಪ್ರಯತ್ನ ನಡೆದಿರುವುದನ್ನು ತಿಳಿಸುತ್ತಾಳೆ. ಪೊಲೀಸರು ಸುನಂದಾಳನ್ನು ಅರೆಸ್ಟ್ ಮಾಡುತ್ತಾರೆ. ಅಮ್ಮ ಅರೆಸ್ಟ್ ಆಗಿರುವುದನ್ನು ಕೇಳಿ ಭಾಗ್ಯಾ ಗಾಬರಿಯಿಂದ ಪೊಲೀಸ್ ಸ್ಟೇಷನ್‌ಗೆ ಬರುತ್ತಾಳೆ.
ತಾಯಿಯನ್ನು ಬಿಡಿಸಲು ಭಾಗ್ಯಾ ಬಳಿ ಕಂಡಿಷನ್ ಹಾಕಿದ ತಾಂಡವ್
ಇನ್ಸ್‌ಪೆಕ್ಟರ್ ಬಳಿ ಭಾಗ್ಯಾ, ತಾಯಿಯನ್ನು ಬಿಡುವಂತೆ ಮನವಿ ಮಾಡುತ್ತಾಳೆ. ಆದರೆ ತಾಂಡವ್ ಹಾಗೂ ಶ್ರೇಷ್ಠಾ, ಆಕೆಯ ಬಗ್ಗೆ ವ್ಯಂಗ್ಯವಾಡುತ್ತಾರೆ. ನನ್ನನ್ನು ಸಾಯಿಸುವಂತೆ ಹೇಳಿದ್ದು ಭಾಗ್ಯಾ, ಅವಳ ಮೇಲೆ ಕೂಡಾ ನಾನು ಕಂಪ್ಲೇಂಟ್ ಕೊಡುತ್ತೇನೆ ಎನ್ನುತ್ತಾಳೆ. ಆದರೆ ಕುಸುಮಾ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ತಾಂಡವ್‌ನನ್ನು ಹೊರಗೆ ಎಳೆದೊಯ್ದು ಅವನ ಕೆನ್ನೆಗೆ ಬಾರಿಸಿ ಕಂಪ್ಲೇಂಟ್ ವಾಪಸ್ ಪಡೆಯುವಂತೆ ಹೇಳುತ್ತಾಳೆ. ತಾಂಡವ್‌ಗೆ ಏಕೆ ಹೊಡೆಯುತ್ತೀರೆಂದು ಶ್ರೇಷ್ಠಾ, ಕುಸುಮಾಳನ್ನು ಪ್ರಶ್ನಿಸುತ್ತಾಳೆ. ಆಗ ಭಾಗ್ಯಾ ಬಂದು ಶ್ರೇಷ್ಠಾಗೆ ಕಪಾಳಮೋಕ್ಷ ಮಾಡುತ್ತಾಳೆ. ಅವರು ನನ್ನ ಅತ್ತೆ, ತಾಂಡವ್ ಅಮ್ಮ, ಅವರನ್ನು ಹೊಡೆಯುವ ಅಧಿಕಾರ ಅವರಿಗೆ ಇದೆ. ಅದನ್ನೆಲ್ಲಾ ಪ್ರಶ್ನಿಸಲು ನೀನು ಯಾರು ಎಂದು ಕೇಳುತ್ತಾಳೆ.
ನಾನು ಕೇಸ್ ವಾಪಸ್ ತೆಗೆದುಕೊಳ್ಳುತ್ತೇನೆ, ಆದರೆ ನೀನು ನನ್ನ ಕಂಡಿಷನ್‌ಗೆ ಒಪ್ಪಿಕೊಳ್ಳಬೇಕು ಎಂದು ತಾಂಡವ್ ಹೇಳುತ್ತಾನೆ. ಅಷ್ಟರಲ್ಲಿ ಭಾಗ್ಯಾ, ತನ್ನ ಮೊಬೈಲ್‌ಗೆ ಬರುವ ಮೆಸೇಜ್ ನೋಡಿ ಖುಷಿಯಾಗುತ್ತಾಳೆ. ನನ್ನ ಅಮ್ಮನನ್ನು ಬಿಡಿಸುವ ದಾರಿ ನನಗೆ ಗೊತ್ತಾಯ್ತು. ನಿಮ್ಮ ಕಂಡಿಷನ್‌ಗೆ ಒಪ್ಪುವುದಿರಲಿ ಅದನ್ನು ಕೇಳಲು ಕೂಡಾ ನಾನು ತಯಾರಿಲ್ಲ. ಯಾರ ಸಹಾಯವೂ ಇಲ್ಲದೆ ನನ್ನ ತಾಯಿಯನ್ನು ನಾನು ಬಿಡಿಸುತ್ತೇನೆ ಎನ್ನುತ್ತಾಳೆ. ಭಾಗ್ಯಾ ಇಷ್ಟು ಧೈರ್ಯದಿಂದ ಮಾತನಾಡುವುದನ್ನು ಕಂಡು ಶ್ರೇಷ್ಠಾ, ತಾಂಡವ್ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಭಾಗ್ಯಾಗೆ ಮೆಸೇಜ್ ಮಾಡಿದ್ದು ಯಾರು? ಸುನಂದಾಳನ್ನು ಬಿಡಿಸಲು ಭಾಗ್ಯಾಗೆ ಸಿಕ್ಕ ದಾರಿ ಯಾವುದು? ಎಲ್ಲದಕ್ಕೂ ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ದೊರೆಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ