ತನ್ವಿ ಬರ್ತ್‌ಡೇ ಪಾರ್ಟಿಗೆ ಹಣ ಹೊಂದಿಸಲು ಪರದಾಡುತ್ತಿರುವ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ತನ್ವಿ ಬರ್ತ್‌ಡೇ ಪಾರ್ಟಿಗೆ ಹಣ ಹೊಂದಿಸಲು ಪರದಾಡುತ್ತಿರುವ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

ತನ್ವಿ ಬರ್ತ್‌ಡೇ ಪಾರ್ಟಿಗೆ ಹಣ ಹೊಂದಿಸಲು ಪರದಾಡುತ್ತಿರುವ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಫೆಬ್ರುವರಿ 12ರ ಸಂಚಿಕೆಯಲ್ಲಿ ಕನ್ನಿಕಾ ಆಫೀಸ್‌ನಲ್ಲಿ ಅವಳಿಗೆ ಕಪಾಳಕ್ಕೆ ಬಾರಿಸಿದ ಬಳಿಕ ಅವಳಿಗೆ ಎಚ್ಚರಿಕೆ ನೀಡಿದ ಭಾಗ್ಯ, ಮನೆಗೆ ಮರಳುತ್ತಾಳೆ. ಮನೆಯಲ್ಲಿ ತನ್ವಿ ಬೇಸರದಲ್ಲಿ ಕುಳಿತಿದ್ದಾಳೆ. ತನ್ವಿ ಬರ್ತ್‌ಡೇಗೆ ಹಣ ಹೊಂದಿಸುವುದು ಈಗ ಭಾಗ್ಯಾಗೆ ದೊಡ್ಡ ಸವಾಲಾಗಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಫೆಬ್ರುವರಿ 12ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಫೆಬ್ರುವರಿ 12ರ ಸಂಚಿಕೆ (Colors Facebook)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಫೆಬ್ರುವರಿ 12ರ ಸಂಚಿಕೆಯಲ್ಲಿ ಕನ್ನಿಕಾ ಆಫೀಸ್‌ನಲ್ಲಿ ಭಾಗ್ಯ ರಂಪಾಟ ಮಾಡಿದ್ದಾಳೆ. ಅತ್ತೆ ಮಾವನಿಗೆ ಅವಮಾನ ಮಾಡಿದಕ್ಕೆ ಭಾಗ್ಯ, ಕನ್ನಿಕಾಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾಳೆ. ಪೂಜಾ, ಕುಸುಮಾ ಮತ್ತು ಧರ್ಮರಾಜ್ ಕೂಡ ಭಾಗ್ಯಾಗೆ ಸಾಥ್ ನೀಡಿದ್ದಾರೆ. ಭಾಗ್ಯ, ಕನ್ನಿಕಾಗೆ ಎಚ್ಚರಿಕೆ ನೀಡಿ, ಇನ್ನು ಮುಂದೆ ಯಾವತ್ತೂ ನನ್ನ ವಿಚಾರಕ್ಕೆ ಬರಬೇಡ, ನಿನ್ನನ್ನು ಹೇಗೆ ವಿಚಾರಿಸಿಕೊಳ್ಳಬೇಕು ಎನ್ನುವುದು ನನಗೆ ತಿಳಿದಿದೆ ಎನ್ನುತ್ತಾಳೆ. ಜತೆಗೆ, ಕನ್ನಿಕಾಳ ಆಫೀಸ್ ಸಿಬ್ಬಂದಿಗೂ ಎಚ್ಚರಿಕೆ ನೀಡಿದ ಭಾಗ್ಯ, ಮುಂದೆ ಒಂದು ದಿನ ನಿಮ್ಮನ್ನು ಕೂಡ ಇದೇ ರೀತಿ ಕನ್ನಿಕಾ ಬಲಿಪಶು ಮಾಡುತ್ತಾಳೆ ಎಂದು ಹೇಳುತ್ತಾಳೆ. ಬಳಿಕ, ಅಲ್ಲಿಂದ ತೆರಳುತ್ತಾಳೆ. ಕನ್ನಿಕಾಗೆ ಎಲ್ಲರ ಮುಂದೆ ಮತ್ತೊಮ್ಮೆ ಅವಮಾನವಾಗುತ್ತದೆ.

ಬೇಸರದಿಂದ ಕುಳಿತಿದ್ದಾಳೆ ತನ್ವಿ

ಮನೆಗೆ ಬಂದ ತನ್ವಿ, ಬೇಸರದಲ್ಲಿ ಕುಳಿತಿದ್ದಾಳೆ. ಅವಳ ಸಹಪಾಠಿಗಳು ಆಡಿದ ಮಾತು ಅವಳಲ್ಲಿ ಚಿಂತೆಯನ್ನುಂಟುಮಾಡಿದೆ. ಬರ್ತ್‌ಡೇ ಪಾರ್ಟಿ ವಿಚಾರದಲ್ಲಿ ತನ್ವಿ ಬೇಸರಗೊಂಡಿರುವುದು ಗುಂಡಣ್ಣನಿಗೆ ಅರಿವಿಲ್ಲ, ಅವನ ಜತೆಗೂ ಅವಳು ಮಾತನಾಡುತ್ತಿಲ್ಲ. ಆಗ ಅಲ್ಲಿಗೆ ಬಂದ ಭಾಗ್ಯ, ತನ್ವಿಯನ್ನು ಊಟಕ್ಕೆ ಕರೆಯುತ್ತಾಳೆ. ತನ್ವಿ ಆಗ ಅಮ್ಮನನ್ನ ತಬ್ಬಿಕೊಂಡು ಎಲ್ಲ ವಿಚಾರ ಹೇಳುತ್ತಾಳೆ. ಅದಕ್ಕೆ ಭಾಗ್ಯ, ಏನೂ ಬೇಸರ ಪಡಬೇಡ, ನಿನ್ನ ಬರ್ತ್‌ಡೇ ಗ್ರಾಂಡ್ ಆಗಿಯೇ ಆಚರಿಸೋಣ ಎಂದು ಹೇಳುತ್ತಾಳೆ.

ತನ್ವಿ ಬರ್ತ್‌ಡೇ ಸಂಭ್ರಮ

ಮನೆಯಲ್ಲಿ ತನ್ವಿಯ ಹುಟ್ಟುಹಬ್ಬವನ್ನು ಎಲ್ಲರೂ ಸೇರಿ ಆಚರಿಸಿದ್ದಾರೆ. ತನ್ವಿ ಕಾಲೇಜ್‌ಗೆ ಹೋಗುವ ಮೊದಲೇ, ಮನೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿ ಕಳುಹಿಸಿಕೊಟ್ಟಿದ್ದಾರೆ. ಜತೆಗೆ, ಅವಳ ಇಷ್ಟದ ಗುಲಾಬ್ ಜಾಮೂನ್ ಕೂಡ ಭಾಗ್ಯ ಮಾಡಿಕೊಟ್ಟಿದ್ದಾಳೆ. ಕಾಲೇಜ್‌ಗೂ ಭಾಗ್ಯ ಪ್ಯಾಕ್ ಮಾಡಿ ಕೊಟ್ಟಿದ್ದಾಳೆ.

ಶ್ರೇಷ್ಠಾಳ ಮಾಸ್ಟರ್ ಪ್ಲ್ಯಾನ್

ತನ್ವಿ ಹುಟ್ಟುಹಬ್ಬದ ಆಚರಣೆಗೆ ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಅದಕ್ಕಾಗಿ ತಾಂಡವ್ ಆಫೀಸ್‌ಗೆ ರಜೆ ಹಾಕಿದ್ದಾನೆ. ಆದರೆ ಬರ್ತ್‌ಡೇ ಪಾರ್ಟಿ ಪ್ಲ್ಯಾನ್ ಏನು ಎಂದು ಶ್ರೇಷ್ಠಾ ಹೇಳಿಲ್ಲ, ಹೀಗಾಗಿ ತಾಂಡವ್‌ ಅದೇನು ಸರ್‌ಪ್ರೈಸ್ ಎಂದು ಎದುರು ನೋಡುತ್ತಿದ್ದಾನೆ.

ಹಣ ಹೊಂದಿಸಲು ಪರದಾಡಿದ ಭಾಗ್ಯ

ತನ್ವಿ ಬರ್ತ್‌ಡೇ ಪಾರ್ಟಿ ಮಾಡಲು ಭಾಗ್ಯ ಒಪ್ಪಿಕೊಂಡಿದ್ದಾಳೆ. ಆದರೆ ಅವಳಲ್ಲಿ ಅದಕ್ಕೆ ಸಾಕಷ್ಟು ಹಣ ಇರುವುದಿಲ್ಲ, ಅದಕ್ಕಾಗಿ ಅವಳು, ಮನೆಯಲ್ಲಿದ್ದ ಎಲ್ಲ ಹಣ, ಚಿಲ್ಲರೆಯನ್ನು ಒಟ್ಟುಗೂಡಿಸಿ, ಲೆಕ್ಕ ಹಾಕುತ್ತಿದ್ದಾಳೆ. ತನ್ವಿಗೆ ಉಡುಗೊರೆ ಕೊಡುವುದಾಗಿಯೂ, ಬರ್ತ್‌ಡೇ ಪಾರ್ಟಿಯನ್ನು ಗೆಳೆಯರ ಜತೆ ಆಚರಿಸಲು ವ್ಯವಸ್ಥೆ ಮಾಡುವುದಾಗಿಯೂ ಹೇಳಿದ್ದಾಳೆ. ಆದರೆ ಈಗ ನೋಡಿದರೆ ಅದಕ್ಕೆ ಬೇಕಾದಷ್ಟು ಹಣ ಅವಳಲ್ಲಿ ಇರುವುದಿಲ್ಲ. ಹೀಗಾಗಿ ಎಲ್ಲ ಹಣವನ್ನು ಒಟ್ಟುಗೂಡಿಸಿ, ಲೆಕ್ಕ ಹಾಕುತ್ತಿರುವಾಗ ಪೂಜಾ ಬರುತ್ತಾಳೆ. ಪೂಜಾಳ ಬಳಿ, ತನ್ನ ಸಮಸ್ಯೆಯನ್ನು ಭಾಗ್ಯ ಹೇಳುತ್ತಾಳೆ. ಪೂಜಾಗೂ ಭಾಗ್ಯ ಸಮಸ್ಯೆ ಕೇಳಿ, ಕಸಿವಿಸಿಯಾಗುತ್ತದೆ. ಅಲ್ಲಿಗೆ ಫೆಬ್ರುವರಿ 12ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 714ನೇ ಸಂಚಿಕೆ ಮುಗಿಸಿದೆ. ಅತ್ತೆ ಮಾವನಿಗೆ ಅವಮಾನ ಮಾಡಿದ ಕನ್ನಿಕಾಗೆ ಭಾಗ್ಯ ತಕ್ಕ ಶಾಸ್ತಿ ಮಾಡಿದ್ದಾಳೆ, ಆದರೆ ಈಗ ತನ್ವಿ ಬರ್ತ್‌ಡೇ ಆಚರಿಸಲು ಅವಳಿಗೆ ದುಡ್ಡಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಭಾಗ್ಯ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner