ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕಿ ತಾಂಡವ್‌ ಮುಖದ ಮೇಲೆ ಎಸೆದ ಭಾಗ್ಯಾ, ಶ್ರೇಷ್ಠಾಗೆ ಖುಷಿಯೋ ಖುಷಿ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕಿ ತಾಂಡವ್‌ ಮುಖದ ಮೇಲೆ ಎಸೆದ ಭಾಗ್ಯಾ, ಶ್ರೇಷ್ಠಾಗೆ ಖುಷಿಯೋ ಖುಷಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕಿ ತಾಂಡವ್‌ ಮುಖದ ಮೇಲೆ ಎಸೆದ ಭಾಗ್ಯಾ, ಶ್ರೇಷ್ಠಾಗೆ ಖುಷಿಯೋ ಖುಷಿ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 13ರ ಎಪಿಸೋಡ್‌ನಲ್ಲಿ ಸುನಂದಾಳನ್ನು ಬಿಡಿಸಲು ತಾಂಡವ್‌ ಕಂಡಿಷನ್‌ಗೆ ಒಪ್ಪುವಂತೆ ಭಾಗ್ಯಾ ಬಳಿ ಹೇಳುತ್ತಾನೆ. ಆದರೆ ಭಾಗ್ಯಾ ಅವನ ಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲ. ಬೇಲ್‌ ಕೊಟ್ಟು ಅಮ್ಮನನ್ನು ಬಿಡಿಸುತ್ತಾಳೆ. ಜೊತೆಗೆ ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕಿ ತಾಂಡವ್‌ ಮುಖದ ಮೇಲೆ ಎಸೆಯುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 13ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 13ರ ಎಪಿಸೋಡ್‌ (PC: Jio cinema)

Bhagyalakshmi Serial: ಶ್ರೇಷ್ಠಾಳಿಗೆ ನನ್ನ ಮಗಳ ಜೀವನ ಹಾಳಾಗುತ್ತಿದೆ ಎಂದು ಕೋಪಗೊಂಡ ಸುನಂದಾ ಚಾಕು ಹಿಡಿದು ಅವಳ ಮನೆಗೆ ಹೋಗುತ್ತಾಳೆ. ಸುನಂದಾ ನನ್ನನ್ನು ಕೊಲ್ಲಲು ಬಂದಿದ್ದಾಳೆ ಎಂದು ಶ್ರೇಷ್ಠಾ ಪೊಲೀಸರಿಗೆ ದೂರು ನೀಡುವುದರಿಂದ ಸುನಂದಾ ಅರೆಸ್ಟ್‌ ಆಗುತ್ತಾಳೆ. ಸುನಂದಾಗೆ ಕುಮ್ಮಕ್ಕು ಕೊಟ್ಟಿದ್ದು ಭಾಗ್ಯಾ ಎಂದು ಅವಳ ಬಗ್ಗೆ ಕೂಡಾ ಶ್ರೇಷ್ಠಾ-ತಾಂಡವ್‌ ಕಂಪ್ಲೇಂಟ್‌ ಕೊಡಲು ಮುಂದಾಗುತ್ತಾರೆ. ಆದರೆ ಕುಸುಮಾ ಅದನ್ನು ತಡೆಯುತ್ತಾಳೆ.

ಬೇಲ್‌ ಕೊಟ್ಟು ಸುನಂದಾಳನ್ನು ಬಿಡಿಸಿದ ಭಾಗ್ಯಾ

ನಿನ್ನ ತಾಯಿಯನ್ನು ಬಿಡಿಸಬೇಕಾದರೆ ನನ್ನ ಕಂಡಿಷನ್‌ಗೆ ನೀನು ಒಪ್ಪಬೇಕು ಎಂದು ತಾಂಡವ್‌ ಹೇಳುತ್ತಾನೆ. ಆದರೆ ಅಷ್ಟರಲ್ಲಿ ಭಾಗ್ಯಾ ಮೊಬೈಲ್‌ಗೆ ಒಂದು ಮೆಸೇಜ್‌ ಬರುತ್ತದೆ. ನಿಮ್ಮ ಕಂಡಿಷನ್‌ಗೆ ಒಪ್ಪುವುದಿರಲಿ, ಅದನ್ನು ನಾನು ಕೇಳಲು ಕೂಡಾ ತಯಾರಿಲ್ಲ ಎಂದು ಭಾಗ್ಯಾ ಹೇಳುತ್ತಾಳೆ. ತಾಂಡವ್‌ ಸಹಾಯವಿಲ್ಲದೆ ನಾನು ಅಮ್ಮನನ್ನು ಬಿಡಿಸುತ್ತೇನೆ ಎಂದು ಭಾಗ್ಯಾ ಪೊಲೀಸ್‌ ಸ್ಟೇಷನ್‌ ಒಳಗೆ ಹೋಗುತ್ತಾಳೆ. ಭಾಗ್ಯಾ ಆತ್ಮವಿಶ್ವಾಸ, ಅವಳ ಧೈರ್ಯ ಕಂಡು ತಾಂಡವ್‌-ಶ್ರೇಷ್ಠಾ ಗಾಬರಿಯಾಗುತ್ತಾರೆ. ಆದರೆ ಭಾಗ್ಯಾ ಪೊಲೀಸ್‌ ಸ್ಟೇಷನ್‌ಗೆ ಬರುವ ಮುನ್ನವೇ ಬೇಲ್‌ಗೆ ಅರೇಂಜ್‌ ಮಾಡಿರುತ್ತಾಳೆ. ಲಾಯರ್‌ ಮೂಲಕ ಭಾಗ್ಯಾ, ಸುನಂದಾಳನ್ನು ಬಿಡಿಸುತ್ತಾಳೆ. ತಾಂಡವ್‌ ಹಾಗೂ ಶ್ರೇಷ್ಠಾ ಬೇರೆ ವಿಧಿ ಇಲ್ಲದೆ ಅಲ್ಲಿಂದ ಹೊರ ಹೋಗುತ್ತಾರೆ.

ನೀವು ಹೇಳಿದ ಪೇಪರ್‌ಗಳು ರೆಡಿ ಇದೆ ಎಂದು ಲಾಯರ್‌ ಹೇಳುತ್ತಾರೆ. ಇದನ್ನು ನಾನು ಮರೆತಿದ್ದೆ ಅವರು ಇಲ್ಲಿಂದ ಹೋಗುವುದರೊಳಗೆ ಅವರಿಗೆ ಇದನ್ನು ತಲುಪಿಸಬೇಕು ಎಂದು ಭಾಗ್ಯಾ ಹೊರಗೆ ಬರುತ್ತಾಳೆ. ನಿಮ್ಮ ಬಳಿ ಒಂದು ಕೆಲಸ ಬಾಕಿ ಇದೆ ಎಂದು ತಾಂಡವ್‌ಗೆ ಹೇಳುತ್ತಾಳೆ. ಪದೇ ಪದೆ ಮದ್ಯೆ ಬರುವ ಶ್ರೇಷ್ಠಾ ಬಾಯಿ ಮುಚ್ಚಿಸುವ ಭಾಗ್ಯಾ, ಪೇಪರ್‌ಗೆ ಸಹಿ ಹಾಕಿ ಅದನ್ನು ತಾಂಡವ್‌ ಮುಖದ ಮೇಲೆ ಎಸೆಯುತ್ತಾಳೆ. ಅದನ್ನೆಲ್ಲಾ ನೋಡುವ ಶ್ರೇಷ್ಠಾ, ಖುಷಿಯಾಗುತ್ತಾಳೆ. ಭಾಗ್ಯಾ ನಿನಗೆ ಡಿವೋರ್ಸ್‌ ಕೊಟ್ಟಿದ್ಧಾಳೆ ಎಂದು ಖುಷಿ ಆಗುತ್ತಾಳೆ. ಆದರೆ ತಾಂಡವ್‌ ಶಾಕ್‌ ಆದಂತೆ ನಟಿಸುತ್ತಾನೆ. ನೀನು ನನಗೆ ಡಿವೋರ್ಸ್‌ ಕೊಡುತ್ತಿದ್ದೀಯ ಎಂದು ಕೇಳುತ್ತಾನೆ. ಹೌದು ನಾನೇ ನಿನಗೆ ಡಿವೋರ್ಸ್‌ ಕೊಡುತ್ತಿರುವುದು, ಇದನ್ನು ತೆಗೆದುಕೊಂಡು ಹೋಗುತ್ತಿರಿ ಎನ್ನುತ್ತಾಳೆ. ಭಾಗ್ಯಾ ಅಲ್ಲಿಂದ ಹೋದ ನಂತರ ಎಲ್ಲರೂ ಅವಳ ಹಿಂದೆ ಹೋಗುತ್ತಾರೆ.

ಮದುವೆಗೆ ರೆಡಿ ಆದ ತಾಂಡವ್‌-ಶ್ರೇಷ್ಠಾ

ಆದರೆ ತಾಂಡವ್‌ ಇನ್ನೂ ಶಾಕ್‌ನಲ್ಲಿರುತ್ತಾನೆ. ಇದು ಖುಷಿ ಪಡಬೇಕಾದ ವಿಚಾರ ಏಕೆ ಬೇಜಾರು ಮಾಡಿಕೊಂಡಿದ್ದೀಯ ಎಂದು ಶ್ರೇಷ್ಠಾ ಕೇಳುತ್ತಾಳೆ. ನಾನು ಅವಳಿಗೆ ಡಿವೋರ್ಸ್‌ ಕೊಟ್ಟು, ಮುಖದ ಮೇಲೆ ಪೇಪರ್‌ ಎಸೆಯಬೇಕು ಎಂದುಕೊಂಡಿದ್ದೆ, ಆದರೆ ಅವಳೇ ಹಾಗೆ ಮಾಡಿದಳು, ಭಾಗ್ಯಾಗೆ ಇಷ್ಟು ಧೈರ್ಯ ಎಲ್ಲಿಂದ ಬಂತು? ಅವಳು ಖುಷಿಯಾಗಿರಲು ನಾನು ಬಿಡುವುದಿಲ್ಲ ಎಂದು ತಾಂಡವ್‌ ಕೋಪಗೊಳ್ಳುತ್ತಾನೆ. ಅವಳು ಖುಷಿಯಾಗಿರಬಾರದು ಎಂದಾದರೆ ನಾವಿಬ್ಬರೂ ಮದುವೆ ಆಗಬೇಕು ಎಂದು ಶ್ರೇಷ್ಠಾ ಹೇಳುತ್ತಾಳೆ. ಸರಿ ಹಾಗಾದರೆ ನಾಳೆ ಮದುವೆ ಆಗೋಣ ರೆಡಿ ಇರು ಎಂದು ತಾಂಡವ್‌ ಹೇಳುತ್ತಾನೆ. ಅವನ ಮಾತುಗಳನ್ನು ಕೇಳಿ ಶ್ರೇಷ್ಠಾ ಖುಷಿಯಾಗುತ್ತಾಳೆ.

ತಾಂಡವ್‌- ಶ್ರೇಷ್ಠಾ ಮದುವೆ ಆಗುತ್ತಾರಾ? ತಾನು ಅಂದುಕೊಂಡಂತೆ ಶ್ರೇಷ್ಠಾ ನಿಜವಾಗಲೂ ಭಾಗ್ಯಾಗೆ ಮತ್ತೆ ಹಿಂಸೆ ಕೊಡಲು ಶುರು ಮಾಡುತ್ತಾಳಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner