ಕಾಲೇಜ್‌ನಲ್ಲಿ ತನ್ವಿ ಹುಟ್ಟುಹಬ್ಬದ ಸಂಭ್ರಮ; ಕೇಕ್ ಕತ್ತರಿಸಿ ಭರ್ಜರಿ ಆಚರಣೆ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಫೆಬ್ರುವರಿ 13ರ ಸಂಚಿಕೆಯಲ್ಲಿ ತನ್ವಿ ಹುಟ್ಟುಹಬ್ಬದ ಸಂಭ್ರಮದ ಆಚರಣೆ ನಡೆದಿದೆ. ಕಾಲೇಜಿನ ಗ್ರೌಂಡ್‌ನಲ್ಲಿ ಕೇಕ್ ಕತ್ತರಿಸಿ, ತಾಂಡವ್ ಮಗಳು ತನ್ವಿ ಜತೆ ಸಂಭ್ರಮಿಸಿದ್ದಾನೆ. ಅದನ್ನು ಶ್ರೇಷ್ಠಾ ಪ್ಲ್ಯಾನ್ ಮಾಡಿದ್ದಾಳೆ. ಅದು ತನ್ವಿಗೂ ಖುಷಿ ಕೊಟ್ಟಿದೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಫೆಬ್ರುವರಿ 13ರ ಸಂಚಿಕೆಯಲ್ಲಿ ತನ್ವಿ ಹುಟ್ಟುಹಬ್ಬದ ಆಚರಣೆ ನಡೆದಿದೆ. ತನ್ವಿ ಹುಟ್ಟುಹಬ್ಬದ ಖುಷಿ ಇದ್ದರೂ, ಇತರ ಫ್ರೆಂಡ್ಸ್‌ಗಳ ರೀತಿಯಲ್ಲಿ ಗ್ರಾಂಡ್ ಆಗಿ ಆಚರಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾಳೆ. ಅಲ್ಲದೆ, ಮನೆಯಲ್ಲಿ ಮಾಡಿಕೊಟ್ಟ ಗುಲಾಬ್ ಜಾಮೂನ್ ಅನ್ನು ಗೆಳೆಯರಿಗೆ ಕೊಡುವುದೋ ಬೇಡವೋ ಎಂದು ಗೊಂದಲದಲ್ಲಿ ಇರುತ್ತಾಳೆ. ಅಲ್ಲದೆ, ಅವರೆಲ್ಲಾ ದೊಡ್ಡ ದೊಡ್ಡ ಬೇಕರಿ, ಕೇಕ್ ಶಾಪ್‌ಗಳಲ್ಲಿ ತಿಂಡಿ, ಕೇಕ್ ಮತ್ತು ಸ್ವೀಟ್ಸ್ ಕೊಂಡು ತಿನ್ನುವವರು, ನಾನು ಮನೆಯಲ್ಲಿ ಮಾಡಿಕೊಂಡು ಬಂದ ತಿಂಡಿಯನ್ನು ತಿನ್ನುವರೇ ಎಂದು ಯೋಚಿಸುತ್ತಿರುತ್ತಾಳೆ. ಆಗ ಅಲ್ಲಿಗೆ ಬಂದ ತನ್ವಿಯ ಗೆಳತಿ, ಹ್ಯಾಪಿ ಬರ್ತ್‌ಡೇ ತನ್ವಿ ಎಂದು ಹೇಳುತ್ತಾಳೆ, ಜತೆಗೆ ಇದೇನು ಕೊಡು ಎಂದು ಅವಳಿಂದ ಗುಲಾಬ್ ಜಾಮೂನು ತೆಗೆದುಕೊಂಡು ತಿನ್ನುತ್ತಾಳೆ.
ಕಾಲೇಜಿನಲ್ಲಿ ತನ್ವಿ ಹುಟ್ಟುಹಬ್ಬದ ಸಂಭ್ರಮ
ಇದು ಮನೆಯಲ್ಲಿ ಭಾಗ್ಯ ಆಂಟಿ ಮಾಡಿರುವ ಜಾಮೂನು ಎಂದು ಅವಳ ಗೆಳತಿಯರೆಲ್ಲರೂ ಸೇರಿ ಅದನ್ನು ಖಾಲಿ ಮಾಡುತ್ತಿರುವಾಗ, ಮತ್ತೋರ್ವ ಗೆಳತಿ ಬಂದು ಏನೇ ತನ್ವಿ, ನಿನ್ನ ಬರ್ತ್‌ಡೇ ಎಂದು ಕಾಲೇಜಿಗೆಲ್ಲಾ ಸ್ವೀಟ್ ಹಂಚುತ್ತಿದ್ದಾರೆ, ಏನೇ ಇದು ಎಂದು ಕೇಳುತ್ತಾಳೆ. ಅದನ್ನು ಕೇಳಿ ತನ್ವಿಗೆ ಶಾಕ್ ಆಗುತ್ತದೆ. ಜತೆಗೆ, ಎಲ್ಲರಿಗೂ ಕಾಜು ಕಟ್ಲಿ ಸ್ವೀಟ್ ಕೊಡುತ್ತಿದ್ದಾರೆ, ನಾನು ಎರಡು ಸ್ವೀಟ್ಸ್ ತಗೊಂಡೆ ಎಂದು ಹೇಳುತ್ತಾಳೆ, ಅತ್ತ ತನ್ವಿ ಮತ್ತು ಅವಳ ಗೆಳತಿಯರು ನೋಡಿದಾಗ, ಕಾಲೇಜಿನ ಎಲ್ಲರಿಗೂ ಸ್ವೀಟ್ಸ್ ಹಂಚುತ್ತಿದ್ದಾರೆ. ಮತ್ತೊಂದು ಕಡೆ ನೋಡಿದಾಗ ಅಲ್ಲಿ ತಾಂಡವ್ ಇರುವುದು ತನ್ವಿಗೆ ಕಾಣಿಸುತ್ತದೆ, ತಾಂಡವ್ ಹ್ಯಾಪಿ ಬರ್ತ್‌ಡೇ ತನ್ವಿ ಎಂದು ಬರೆದಿರುವ ಬಲೂನ್‌ಗಳನ್ನು ಗಾಳಿಯಲ್ಲಿ ಹಾರಿಬಿಡುತ್ತಾನೆ. ತನ್ವಿ ಅಲ್ಲಿಗೆ ಓಡಿಕೊಂಡು ಹೋಗುತ್ತಾಳೆ.
ಭರ್ಜರಿ ಬರ್ತ್‌ಡೇ ಆಚರಣೆ
ಕಾರಿನ ತುಂಬಾ ಬಲೂನ್ ಮತ್ತು ಹೂವುಗಳು, ಮಧ್ಯದಲ್ಲಿ ಕೇಕ್ ಇರಿಸಲಾಗಿರುತ್ತದೆ. ತಾಂಡವ್ ಜತೆ ಶ್ರೇಷ್ಠಾ ಇರುವುದು ತನ್ವಿಗೆ ಕೋಪ ಬರುತ್ತದೆ. ಆದರೂ ಆಕೆ ತೋರಿಸಿಕೊಳ್ಳುವುದಿಲ್ಲ. ನಂತರ ಕಾಲೇಜಿನ ಮೈದಾನದ ಮಧ್ಯದಲ್ಲಿ ಕಾರಿನಲ್ಲಿ ಬರ್ತ್‌ಡೇ ಆಚರಿಸಲಾಗುತ್ತದೆ. ತನ್ವಿ ಅಂತೂ ಫುಲ್ ಖುಷಿಯಾಗುತ್ತಾಳೆ. ಅಲ್ಲಿಗೆ ಹುಟ್ಟುಹಬ್ಬ ಸಂಭ್ರಮದಿಂದ ಆಚರಿಸಿರುವುದು ಅವಳ ಗೆಳತಿಯರಿಗೂ ತನ್ವಿ ಬಗ್ಗೆ ಅಭಿಮಾನ ಮೂಡುತ್ತದೆ.
ಕೆಲಸ ಕೇಳುತ್ತಾ ಅಲೆದಾಡಿದ ಭಾಗ್ಯ
ಮತ್ತೊಂದೆಡೆ ಭಾಗ್ಯ ಒಂದು ಹೋಟೆಲ್‌ನಿಂದ ಇನ್ನೊಂದು ಹೋಟೆಲ್‌ಗೆ ಕೆಲಸ ಕೇಳುತ್ತಾ ಹೋಗಿದ್ದಾಳೆ. ಆದರೆ ಯಾರೂ ಕೂಡ ಅವಳಿಗೆ ಕೆಲಸ ಕೊಡಲು ತಯಾರಿಲ್ಲ, ಜತೆಗೆ ನಿಮಗೆ ಎಲ್ಲಿಯೂ ಕೆಲಸ ಸಿಗುವುದಿಲ್ಲ, ದಯವಿಟ್ಟು ಹೋಗಿ ಎಂದು ಕಳುಹಿಸುತ್ತಾರೆ. ಆದರೂ ಭಾಗ್ಯ ಪ್ರಯತ್ನ ಮುಂದುವರಿಸಿದ್ದಾಳೆ. ಅಲ್ಲಿಗೆ ಫೆಬ್ರುವರಿ 13ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 715ನೇ ಸಂಚಿಕೆ ಮುಗಿಸಿದೆ. ಒಂದೆಡೆ ಭಾಗ್ಯನಿಗೆ ತನ್ವಿ ಬರ್ತ್‌ಡೇ ಆಚರಿಸಲು ಅವಳಿಗೆ ದುಡ್ಡಿನ ಸಮಸ್ಯೆ ಉಂಟಾಗಿದೆ. ಮತ್ತೊಂದೆಡೆ ತಾಂಡವ್ ತನ್ವಿಗೆ ಇನ್ನಷ್ಟು ಹತ್ತಿರವಾಗಿದ್ದಾನೆ. ಹೀಗಾಗಿ ಭಾಗ್ಯ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ